Select Your Language

Notifications

webdunia
webdunia
webdunia
webdunia

ರಾಶಿಗನುಗುಣವಾಗಿ ನಿಮ್ಮ ಸಂಗಾತಿ ಎಷ್ಟು ಪ್ರಾಮಾಣಿಕರು ಎಂದು ತಿಳಿಯಿರಿ!

ರಾಶಿಗನುಗುಣವಾಗಿ ನಿಮ್ಮ ಸಂಗಾತಿ ಎಷ್ಟು ಪ್ರಾಮಾಣಿಕರು ಎಂದು ತಿಳಿಯಿರಿ!
ಬೆಂಗಳೂರು , ಬುಧವಾರ, 24 ಜನವರಿ 2018 (08:39 IST)
ಬೆಂಗಳೂರು: ನಿಮ್ಮ ಸಂಗಾತಿ ನಿಮ್ಮೊಂದಿಗೆ ಎಷ್ಟು ಪ್ರಾಮಾಣಿಕರಾಗಿದ್ದಾರೆ? ಹೀಗೊಂದು ಕುತೂಹಲ ನಿಮಗಿರಬಹುದು. ಅದನ್ನು ಸಂಗಾತಿಯ ರಾಶಿಗೆ ಅನುಗುಣವಾಗಿ ತಿಳಿದುಕೊಳ್ಳಬಹುದು.
 

ಮೇಷ: ಈ ರಾಶಿಯ ಜೀವನ ಸಂಗಾತಿ ತುಂಬಾ ವಿಧೇಯರಾಗಿರುತ್ತಾರೆ. ತಮ್ಮ ಮಾತಿಗೆ ಬದ್ಧರಾಗಲು ಅವರು ಜಗಳಕ್ಕಿಳಿಯಲೂ ಹಿಂದೆ ಮುಂದೆ ನೋಡುವುದಿಲ್ಲ.

ವೃಷಭ: ಸಿಂಹದಂತಹಾ ಮನಸ್ಸು ಇವರದ್ದು. ತಮಗೆ ಅನಿಸಿದ್ದನ್ನು ಮುಖಕ್ಕೆ ಹೊಡೆದಾಂಗೆ ಹೇಳಲು ಹಿಂದೆ ಮುಂದೆ ನೋಡುವುದಿಲ್ಲ.

ಮಿಥುನ: ಇವರು ತುಂಬಾ ಭಾವನಾತ್ಮಕ ವ್ಯಕ್ತಿಗಳು. ಒಂದು ವೇಳೆ ತಾವು ಹೇಳುವ ಸತ್ಯದಿಂದ ಸಂಗಾತಿಗೆ ನೋವಾಗುತ್ತದೆಂದರೆ ಸಣ್ಣ ಸುಳ್ಳು ಹೇಳಲೂ ಹಿಂದೆ ಮುಂದೆ ನೋಡುವುದಿಲ್ಲ.

ಕರ್ಕಟಕ: ಈ ರಾಶಿಯವರು ತಮ್ಮ ಸಂಗಾತಿಯ ಪ್ರೀತಿ ಗಳಿಸಲು ಎಂತಹಾ ಸುಳ್ಳು ಹೇಳಲೂ ಹಿಂಜರಿಯುವುದಿಲ್ಲ. ಆದರೆ ಅನಿವಾರ್ಯ ಪರಿಸ್ಥಿತಿ ಬಂದರೆ ಮಾತ್ರ ಸುಳ್ಳು ಹೇಳುತ್ತಾರೆ.

ಸಿಂಹ: ಇವರು ಶಾಂತಿಗಾಗಿ ಏನೂ ಮಾಡಲು ಸಿದ್ಧ. ಇಬ್ಬರ ನಡುವೆ ಶಾಂತಿ ಬೇಕೆಂದರೆ ಪ್ರಾಮಾಣಿಕತೆಗೆ ಎಳ್ಳು ನೀರು ಬಿಡಲೂ ಸಿದ್ಧರಿರುತ್ತಾರೆ.

ಕನ್ಯಾ: ಇವರು ಸ್ವಲ್ಪ ಇಗೋ ವ್ಯಕ್ತಿತ್ವ ಇರುವವರು. ಒಂಥರಾ ಅವಕಾಶವಾದಿಗಳು. ಪ್ರಮಾಣಿಕತೆ ನಿರೀಕ್ಷಿಸಲು ಸಾಧ್ಯವಿಲ್ಲ.

ತುಲಾ: ಇವರು ಅಗತ್ಯ ಬಂದಾಗ ಎಷ್ಟು ಸುಳ್ಳು ಹೇಳುತ್ತಾರೆಂದರೆ ನೋಡಿದವರು ಸತ್ಯವೆಂದೇ ಅಂದುಕೊಳ್ಳಬೇಕು! ಮಹಾನ್ ಸುಳ್ಳುಗಾರರು!

ವೃಶ್ಚಿಕ: ಇವರಿಗೆ ಕಲಹವೆಂದರೆ ಇಷ್ಟವಿಲ್ಲ. ಅಗತ್ಯ ಬಿದ್ದರೆ ಕಲಹ ತಪ್ಪಿಸಲು ಹೊಸದೊಂದು ಮುಖವಾಡ ಧರಿಸುತ್ತಾರೆ.

ಧನು: ಇವರಿಗೆ ಇನ್ನೊಬ್ಬರ ಮನಸ್ಸು ನೋಯಿಸಲು ಇಷ್ಟವಿರುವುದಿಲ್ಲ. ಅದಕ್ಕಾಗಿ  ತಾವೇ ನಂಬಿ ಬಿಡುವಷ್ಟು ದೊಡ್ಡ ಸುಳ್ಳು ಹೇಳಲೂ ಹೇಸುವುದಿಲ್ಲ.

ಮಕರ: ಇವರಿಗೆ ತಮ್ಮ ತಪ್ಪನ್ನು ಇನ್ನೊಬ್ಬರು ಹೇಳುವುದು ಇಷ್ಟವಾಗಲ್ಲ. ತಮ್ಮದೇ ಸರಿ ಎಂದು ಸಾಬೀತುಪಡಿಸಲು ಎಂತಹಾ ಸುಳ್ಳು ಹೇಳಲೂ ತಯಾರಿರುತ್ತಾರೆ.

ಕುಂಭ: ಅಗತ್ಯ ಬಂದಾಗ ತಾವೇ ಸೃಷ್ಟಿಸಿದ ಕಲ್ಪನಾ ಲೋಕವನ್ನು ನಂಬಿ, ಸಂಗಾತಿಯನ್ನೂ ನಂಬಿಸುವ ಜಾಣರು!

ಮೀನ: ಇವರು ತುಂಬಾ ಚಂಚಲ ಮನಸ್ಸುಳ್ಳವರು. ನಿಮಿಷಕ್ಕೊಮ್ಮೆ ಪರಿಸ್ಥಿತಿಗೆ ತಕ್ಕ ಹಾಗೆ ಸ್ವಭಾವವೂ ಬದಲಾಯಿಸಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ನಕ್ಷತ್ರಕ್ಕನುಗುಣವಾಗಿ ಗಿಡಗಳನ್ನು ಬೆಳೆಸಿದರೆ ಗ್ರಹದೋಷ ನಿವಾರಣೆಯಾಗುತ್ತದಂತೆ