Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2019 (08:30 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳ ಗುಟ್ಟು ಮನೆಯವರ ಮುಂದೆ ಬಹಿರಂಗವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಆರೋಗ್ಯದಲ್ಲಿ ಕೊಂಚ ಮಟ್ಟಿಗಿನ ಸುಧಾರಣೆಯಾಗಲಿದೆ.

ವೃಷಭ: ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಲಿದ್ದೀರಿ. ಧಾರ್ಮಿಕ ಕಾರ್ಯಗಳಿಗೆ ವಿನಿಯೋಗ ಮಾಡಲಿದ್ದೀರಿ. ಪ್ರೀತಿ ಪಾತ್ರ ಭೇಟಿ ಸಾಧ‍್ಯತೆ. ಕಾರ್ಯನಿಮಿತ್ತ ಓಡಾಟ ನಡೆಸುವಿರಿ.

ಮಿಥುನ: ದೈವಾನುಕೂಲದಿಂದ ಅಂದುಕೊಂಡ ಕಾರ್ಯಗಳು ನೆರವೇರಲಿವೆ. ಆದರೆ ಸಹೋದ್ಯೋಗಿಗಳು ನಿಮ್ಮ ಪ್ರಗತಿ ಕಂಡುಬಂದು ಅಸೂಯೆಪಡುವರು. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರ.

ಕರ್ಕಟಕ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳು ಉತ್ತಮವಾಗಲಿದೆ. ಹೊಸ ಮಿತ್ರರ ಭೇಟಿ ಮನಸ್ಸಿಗೆ ಸಂತಸವಾಗುವುದು. ಧನಾರ್ಜನೆಗೆ ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಹೊಸ ಸ್ಪರ್ಧಿಗಳು ಹುಟ್ಟಿಕೊಳ್ಳಲಿದ್ದಾರೆ. ವೃತ್ತಿರಂಗದಲ್ಲಿ ನಿಮ್ಮ ಕೆಲಸ ಕಾರ್ಯದಲ್ಲಿ ಮಹಿಳೆಯರಿಂದ ನೆರವು ಸಿಗಲಿದೆ. ನಾನಾ ಮೂಲಗಳಿಂದ ಧನಾಗಮನವಾಗಲಿದೆ. ವಾಹನ, ಆಸ್ತಿ ಖರೀದಿ ಯೋಗವಿದೆ. ಆದರೆ ಎಚ್ಚರಿಕೆಯಿಂದ ಹೆಜ್ಜೆಯಿಡಿ.

ಕನ್ಯಾ: ಪ್ರೀತಿ ಪಾತ್ರರಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಎಲ್ಲಾ ಇದ್ದೂ ಏನೋ ಕಳೆದುಕೊಂಡ ನಿರುತ್ಸಾಹ ಭಾವ ಕಾಡಲಿದೆ. ಸಂಗಾತಿಯ ಸಮಯೋಚಿತ ಸಲಹೆ ಉಪಯೋಗಕ್ಕೆ ಬರುವುದು. ಗೃಹ ಸಂಬಂಧೀ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ.

ತುಲಾ: ಸಹನೆಯಿಂದ ನಡೆದುಕೊಳ್ಳವುದರಿಂದ ಲಾಭವಿದೆ ಎಂಬುದು ನಿಮ್ಮ  ಅರಿವಿಗೆ ಬರಲಿದೆ. ನೀರಿಗಾಗಿ ಪರದಾಡಬೇಕಾದೀತು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಕೊಂಚ ಹಿನ್ನಡೆಯಾಗುವುದು.

ವೃಶ್ಚಿಕ: ಹೆಚ್ಚಿನ ಧನಲಾಭದ ಆಸೆಯಿಂದ ಕೈಗೊಳ್ಳುವ ದುಡುಕು ನಿರ್ಧಾರಗಳಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾಗಬಹುದು. ದಾಯಾದಿಗಳೊಂದಿಗೆ ಕಿರಿ ಕಿರಿ ಇರಲಿದೆ. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ಧನು: ಪ್ರೀತಿ ಪಾತ್ರರೊಂದಿಗೆ ದುಡುಕಿ ಮಾತನಾಡಿ ಮನಸ್ಸಿಗೆ ನೋವುಂಟುಮಾಡುವಿರಿ. ಹಾಗಿದ್ದರೂ ನಿಮ್ಮ ಮನೋಭಿಲಾಷೆಗಳು ಇಂದು ಅಂದುಕೊಂಡ ರೀತಿಯಲ್ಲಿ ನೆರವೇರಲಿವೆ. ಆರ್ಥಿಕವಾಗಿ ಖರ್ಚು ವೆಚ್ಚಗಳಾಗುವುದು. ದೇವಾಲಯ ಸಂದರ್ಶಿಸುವಿರಿ.

ಮಕರ: ಇಷ್ಟ ವಸ್ತುವಿನ ಖರೀದಿಗಾಗಿ ಅಧಿಕ ಧನ ವಿನಿಯೋಗವಾಗುವುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಹನೆ ಪರೀಕ್ಷಿಸುವ ಸಂದರ್ಭ ಬರಲಿದೆ. ಚಾಡಿ ಮಾತುಗಳು ಕೇಳಿಬಂದೀತು. ಆದರೆ ಸಂಗಾತಿಯ ಪ್ರೀತಿ ಸಿಗುವುದು. ಚಿಂತೆ ಬೇಡ.

ಕುಂಭ: ಬಯಸಿದ್ದನ್ನು ಪಡೆಯಲು ಸಣ್ಣ ಪುಟ್ಟ ತ್ಯಾಗ ಮಾಡಬೇಕಾಗುತ್ತದೆ. ಇಷ್ಟಮಿತ್ರರ ಭೇಟಿ, ಭೋಜನ ಸಾಧ‍್ಯತೆಯಿದೆ. ಆದರೆ ಪ್ರಯಾಣದಲ್ಲಿ ವಾಹನ ಸವಾರರು ಎಚ್ಚರಿಕೆಯಿಂದಿರಬೇಕು. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಆರೋಗ್ಯದಲ್ಲಿ ಎಚ್ಚರಿಕೆ.

ಮೀನ: ಮಹಿಳೆಯರಿಗೆ ವೃತ್ತಿ ರಂಗದಲ್ಲಿ ಬಡ್ತಿ, ವರ್ಗಾವಣೆ ಸಾಧ್ಯತೆಯಿರುತ್ತದೆ. ಆರ್ಥಿಕವಾಗಿ ಧನಾದಾಯಕ್ಕೆ ಕೊರತೆಯಿರದು. ಹೊಸ ವಸ್ತುಗಳ ಖರೀದಿಗೆ ಮುಂದಾಗುವಿರಿ. ಪಾಲು ಬಂಡವಾಳ ಹೂಡಿಕೆಯಲ್ಲಿ ಲಾಭ ಗಳಿಸಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜೆಯ ವೇಳೆ ಗೋಧೂಳಿ ಸಮಯದಲ್ಲಿ ದೇವರಿಗೆ ಈ ದೀಪವನ್ನು ಬೆಳಗಿದರೆ ಎಲ್ಲವೂ ಶುಭವಾಗಲಿದೆ