Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಮಂಗಳವಾರ, 3 ಡಿಸೆಂಬರ್ 2019 (08:54 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಅವಿವಾಹಿತರಿಗೆ ಬಹಳ ದಿನಗಳ ಪ್ರಯತ್ನಗಳ ನಂತರ ಯೋಗ್ಯ ಸಂಬಂಧ ಕೂಡಿಬರುವುದು. ಆರೋಗ್ಯದಲ್ಲಿ ಆಗಾಗ ಸಮಸ್ಯೆಗಳು ಕಂಡುಬಂದು ಚಿಂತೆಗೆ ಕಾರಣವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಇನ್ನಷ್ಟು ಲಾಭ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆ, ಪ್ರಯತ್ನಗಳಿಗೆ ಫಲ ಸಿಗುವುದು. ವಿರೋಧಿಗಳು ನಿಮ್ಮ ಪ್ರಯತ್ನಕ್ಕೆ ತಣ್ಣೀರೆರಚುವ ಪ್ರಯತ್ನ ನಡೆಸಲಿದ್ದಾರೆ. ಹಿರಿಯರಿಗೆ ತೀರ್ಥ ಯಾತ್ರೆ ಸಂದರ್ಶನ ಯೋಗವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಮಿಥುನ: ಸಾಂಸಾರಿಕವಾಗಿ ನಿಮ್ಮ ಕೆಲವೊಂದು ನಿರ್ಧಾರಗಳು ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಬಹುದು. ತಾಳ್ಮೆಯಿಂದಿರಿ. ತಾತ್ಕಾಲಿಕ ಹುದ್ದೆಯವರಿಗೆ ಬಡ್ತಿ ಯೋಗವಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾದೀತು.

ಕರ್ಕಟಕ: ರಾಜಕೀಯ ರಂಗದಲ್ಲಿರುವವರು ಉನ್ನತ ಸ್ಥಾನಮಾನ ನಿರೀಕ್ಷಿಸಬಹುದು. ಕಾರ್ಮಿಕ ವರ್ಗದವರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ. ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಆತಂಕಗಳು ಎದುರಾದೀತು. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಸಿಂಹ: ನಿರೀಕ್ಷಿತ ಫಲಿತಾಂಶದಿಂದ ವಿದ್ಯಾರ್ಥಿಗಳಿಗೆ ಸಂತಸವಾಗಲಿದೆ. ನಿಮ್ಮ ಬಹಳ ದಿನಗಳ ಪ್ರಯತ್ನಕ್ಕೆ ಫಲ ಸಿಗಲಿದೆ. ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಲುಕಿಕೊಳ್ಳುವಿರಿ. ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಆರೋಗ್ಯದಲ್ಲಿ ಕಾಳಜಿಯಿರಲಿ.

ಕನ್ಯಾ: ತಾಳ್ಮೆಯಿಂದ ವರ್ತಿಸಿದರೆ ಉದ್ಯೋಗ ಕ್ಷೇತ್ರದಲ್ಲಿ ಸಹಾಯಕ್ಕೆ ಬರಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಆದಾಯಕ್ಕೆ ಕೊರತೆಯಾಗದು. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಜಾಗ್ರತೆ ವಹಿಸಿ.

ತುಲಾ: ಅನಿರೀಕ್ಷಿತವಾಗಿ ಸಂತಸದ ಸುದ್ದಿ ಕೇಳಿಬರಲಿದೆ. ಇದರಿಂದಾಗಿ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ. ನೂತನ ದಂಪತಿಗಳಿಗೆ ಪ್ರವಾಸ ಯೋಗವಿದೆ. ಆದರೆ ದುಡುಕಿ ಮಾತನಾಡಿ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಡಬೇಕು.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಆರ್ಥಿಕವಾಗಿ ಬಾಕಿ ಹಣ ಪಾವತಿಯಾಗಲಿದೆ. ವ್ಯಾಪಾರಿಗಳು ವ್ಯವಹಾರದಲ್ಲಿ ಚೇತರಿಕೆ ಪಡೆಯುವರು. ಆದರೆ ವ್ಯವಹಾರದಲ್ಲಿ ವಿಶ್ವಾಸ ವಂಚನೆಯಾಗದಂತೆ ಎಚ್ಚರಿಕೆ ವಹಿಸಬೇಕು.

ಧನು: ದುಡುಕಿ ಮಾತನಾಡಿದರೆ ಮನೆ ಹಾಳಾದೀತು ಎಂಬುದನ್ನು ಮರೆಯಬೇಡಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಅನಗತ್ಯ ವಿಚಾರಗಳ ಬಗ್ಗೆ ಯೋಚನೆ ಬೇಡ. ಕೌಟುಂಬಿಕವಾಗಿ ಜವಾಬ್ಧಾರಿ ವಹಿಸಬೇಕಾಗುತ್ತದೆ.

ಮಕರ: ವೃತ್ತಿರಂಗದಲ್ಲಿ ನಿಮ್ಮ ಪರಿಶ್ರಮಕ್ಕೆ ಬೆಲೆ ಸಿಗಲಿದೆ. ಆರ್ಥಿಕವಾಗಿ ಮುನ್ನಡೆ ಸಿಕ್ಕರೂ ಸಾಲಗಾರರ ಕಾಟದಿಂದ ನೆಮ್ಮದಿಗೆ ಭಂಗವಾಗುವುದು. ನಿರುದ್ಯೋಗಿಗಳು ಉದ್ಯೋಗ ಬೇಟೆಯಲ್ಲಿ ಯಶಸ್ವಿಯಾಗುವರು. ಕಂಕಣ ಬಲ ಕೂಡಿಬರಲಿದೆ.

ಕುಂಭ: ವಿವಾಹ ಪ್ರಸ್ತಾಪಗಳು ಬಂದರೂ ಯಾವುದೂ ಕೈಗೂಡದೇ ಮನಸ್ಸಿಗೆ ಬೇಸರವಾಗಬಹುದು. ದುಡುಕು ನಿರ್ಧಾರಗಳಿಂದ ಕೆಲಸ ಕಾರ್ಯಗಳಲ್ಲಿ ತೊಂದರೆಯಾಗಬಹುದು. ಮಾನಸಿಕವಾಗಿ ಋಣಾತ್ಮಕ ಚಿಂತೆಗಳಿಗೆ ಕಡಿವಾಣ ಹಾಕಬೇಕು.

ಮೀನ: ಅನವಶ್ಯಕ ತೊಂದರೆಗಳನ್ನು ಮೈಮೇಲೆಳೆದುಕೊಳ್ಳುವಿರಿ. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರವಹಿಸಬೇಕು. ವಿವಾಹ ಪ್ರಯತ್ನಗಳಿಗೆ ಹಿನ್ನಡೆಯಾಗಿ ನಿರಾಶೆಯಾಗಬಹುದು. ಸಂಚಾರದಲ್ಲಿ ಎಚ್ಚರಿಕೆ ವಹಿಸಬೇಕು. ವಾಹನ ಖರೀದಿ ಯೋಗವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ