Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಶುಕ್ರವಾರ, 21 ಜೂನ್ 2019 (08:45 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ವಿನಾಕಾರಣ ದೂರುವ ನಿಮ್ಮ ವರ್ತನೆ ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಬೇಕಾದೀತು. ಇದರಿಂದ ಮನೆಯ ವಾತಾವರಣ ಹಾಳಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಕೊಂಚ ಹಗುರವಾಗುವುದು. ಆರೋಗ್ಯದಲ್ಲಿ ಸುಧಾರಣೆ.

ವೃಷಭ: ಸಂಗಾತಿಯ ಅಲಂಕಾರಿಕ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಇಷ್ಟಮಿತ್ರರನ್ನು ಅನಿರೀಕ್ಷಿತವಾಗಿ ಭೇಟಿಯಾಗುವಿರಿ. ಆದಾಯವಿದ್ದಷ್ಟೇ ಖರ್ಚು ವೆಚ್ಚಗಳೂ ಹೆಚ್ಚುವುದು.

ಮಿಥುನ: ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚುವುದು. ಅವಿವಾಹಿತ ಸಹೋದರಿಯ ಮದುವೆ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಅರಸಿಕೊಂಡು ದೂರ ಪ್ರಯಾಣ ಮಾಡಬೇಕಾಗುತ್ತದೆ.

ಕರ್ಕಟಕ: ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬರುವುದು. ಹಿರಿಯರ ತೀರ್ಥ ಯಾತ್ರೆಗೆ ಸಿದ್ಧತೆ ಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ. ವ್ಯಾಪಾರಿಗಳಿಗೆ ನಿವ್ವಳ ಲಾಭ ಸಿಗಲಿದೆ.

ಸಿಂಹ: ಸಹೋದರರೊಂದಿಗೆ ಆಸ್ತಿ ವಿಚಾರದಲ್ಲಿ ವಾಗ್ವಾದವಾಗಬಹುದು. ಹಿರಿಯರ ಮಧ್ಯಸ್ಥಿಕೆ ವಹಿಸಿದರೆ ಉತ್ತಮ. ರಾಜಕೀಯವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಆದಾಯಕ್ಕೆ ಕೊರತೆಯಿರದು.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕಾರ್ಯಗಳಿರುವುದಾದರೂ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಸಂಗಾತಿಯ ಆಸೆ ಆಕಾಂಕ್ಷೆಗಳಿಗೆ ಕಿವಿಗೊಡಬೇಕಾಗುತ್ತದೆ.

ತುಲಾ: ನೂತನ ದಂಪತಿಗೆ ಮಧುಚಂದ್ರದ ಭಾಗ್ಯವಿದೆ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವ ಸಂಬಂಧಗಳು ಕೂಡಿಬರಲಿವೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದವರಿಗೆ ಶುಭ ಫಲವಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ಶೈಕ್ಷಣಿಕ ವೃತ್ತಿಯಲ್ಲಿರುವವರಿಗೆ ಮುನ್ನಡೆ. ಕೃಷಿಕರಿಗೆ ನೀರಿಗಾಗಿ ಪರದಾಟ ತಪ್ಪದು. ಆರ್ಥಿಕವಾಗಿ ಕೊಂಚ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಆದರೆ ತಾಳ್ಮೆಯಿಂದಿದ್ದರೆ ಮುಂದೆ ಶುಭ ಫಲ ನಿರೀಕ್ಷಿಸಬಹುದು.

ಧನು: ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬದವರ ಅಸಮಾಧಾನಕ್ಕೆ ಕಾರಣವಾಗುವುದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ದಾಯಾದಿಗಳೊಂದಿಗಿನ ಕಲಹ ಶಮನವಾಗುವುದು.

ಮಕರ: ಇದುವರೆಗೆ ಇದ್ದ ಕಷ್ಟ ಕಾರ್ಪಣ್ಯಗಳು ನಿಧಾನವಾಗಿ ದೂರವಾಗಿ ಅಭಿವೃದ್ಧಿ ಗೋಚರಕ್ಕೆ ಬರುವುದು. ಧನಾಗಮನಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಆದರೆ ಮಕ್ಕಳ ಭವಿಷ್ಯದ ವಿಚಾರದಲ್ಲಿ ಚಿಂತೆ ತಪ್ಪದು.

ಕುಂಭ: ಸ್ನೇಹಿತರ ಜತೆ ಪ್ರವಾಸ, ಇಷ್ಟ ಭೋಜನ ಮಾಡುವಿರಿ. ಆದರೆ ನಿಮ್ಮ ಸಲಹೆಗಳು ಸಂಗಾತಿಗೆ ಇಷ್ಟವಾಗದೇ ಇರಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ.

ಮೀನ: ಆಸ್ತಿ, ಲೆಕ್ಕ ಪತ್ರ ವಿಚಾರದಲ್ಲಿ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ. ವಾಹನ ಸವಾರರಿಗೆ ಅಪಾಘಾತ ಭೀತಿಯಿದೆ. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಸಿಗುವುದು. ಅವಿವಾಹಿತರು ಸೂಕ್ತ ಸಂಬಂಧಕ್ಕೆ ಕೆಲವು ದಿನ ಕಾಯಬೇಕಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಿತ್ಯ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಪರಿಹಾರ ಮಾಡಿ