Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಮಂಗಳವಾರ, 23 ಏಪ್ರಿಲ್ 2019 (07:21 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಒಂದು ರೀತಿಯ ಅಭದ್ರತೆಯ ಭಾವ ಕಾಡಲಿದೆ. ಮಾನಸಿಕ ನೆಮ್ಮದಿಗಾಗಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡುವುದನ್ನು ಮರೆಯಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಸಾಧ್ಯತೆಯಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ವೃಷಭ: ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಸಹೋದರರ ಜವಾಬ್ಧಾರಿ ಹೆಗಲಿಗೇರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಸಂಚಾರದಲ್ಲಿ ಜಾಗ್ರೆತೆ ವಹಿಸಿ.

ಮಿಥುನ: ಇಂದು ದೈವಾನುಕೂಲ ನಿಮ್ಮ ಮೇಲಿದ್ದು, ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಿರಿ. ಆರ್ಥಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗುವುದು. ಮನೆ, ಆಸ್ತಿ ಖರೀದಿಗೆ ಚಿಂತನೆ ಮಾಡುವಿರಿ.  ಕೌಟುಂಬಿಕವಾಗಿಯೂ ನೆಮ್ಮದಿಯ ದಿನ.

ಕರ್ಕಟಕ: ಆರ್ಥಿಕವಾಗಿ ಚೇತರಿಕೆ ಕಂಡುಬಂದು ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸುವಿರಿ. ಹೊಸ ಪಾಲು ವ್ಯವಹಾರಕ್ಕೆ ಕೈಹಾಕುವಿರಿ. ನ್ಯಾಯಾಲಯದ ಕೆಲಸಗಳು ನಿಮ್ಮ ಪರವಾಗಲಿದೆ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆ ಕಂಡು ಸಹೋದ್ಯೋಗಿಗಳೇ ಅಸೂಯೆ ಪಡುವರು. ಸಾಮಾಜಿಕವಾಗಿ ನೀವು ಮಾಡುವ ಕೆಲಸಗಳಿಗೆ ಮನ್ನಣೆ ಸಿಕ್ಕಿ ಸ್ಥಾನ ಮಾನಗಳು ಉತ್ತಮವಾಗುವುದು. ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ.

ಕನ್ಯಾ: ಕಷ್ಟ ಎಂದು ಬಂದವರಿಗೆ ಸಾಲ ಕೊಡಲು ಹೋಗಿ ಸಂಕಷ್ಟಕ್ಕೆ ಈಡಾಗುವಿರಿ. ಎಚ್ಚರಿಕೆ ಅಗತ್ಯ. ಹಿತ ಶತ್ರುಗಳು ಬೆನ್ನ ಹಿಂದೇ ಇರುವರು. ಆದರೆ ಕೌಟುಂಬಿಕವಾಗಿ ನೆಮ್ಮದಿಯ ದಿನ. ಸಂಗಾತಿ, ಮಕ್ಕಳಿಂದ ಸಂತೋಷ ಅನುಭವಿಸುವಿರಿ.

ತುಲಾ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತಸದ ವಾತಾವರಣವಿರುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಪಾಲಿಗೆ ಬಂದಿದ್ದನ್ನು ಬಳಸಿಕೊಳ್ಳಿ.

ವೃಶ್ಚಿಕ: ಸಾಲ ಕೇಳಿಕೊಂಡು ಬರುವವರಿಗೆ ಇಂದು ಸಾಲ ಕೊಡಲು ಹೋದರೆ ಮರಳಿ ಬಾರದು. ಸಾಂಸಾರಿಕವಾಗಿ ಸಂಗಾತಿ, ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವಿರಿ. ದಾಯಾದಿಗಳ ಕಲಹ ನಿವಾರಣೆಯಾಗಲಿದೆ.

ಧನು: ಪ್ರಯತ್ನಕ್ಕೆ ತಕ್ಕ ಫಲ ಪಡೆಯುವಿರಿ. ಮನೆಯ ಜವಾಬ್ಧಾರಿ ನಿಭಾಯಿಸಬೇಕಾದ ಸಮಯವಿದು. ಆದರೆ ಕೋಪದ ಕೈಗೆ ಬುದ್ಧಿ ಕೊಟ್ಟರೆ ಸಂಬಂಧ ಹಾಳಾಗಬಹುದು. ಅನವಶ್ಯಕ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡದಿರಿ.

ಮಕರ: ಮಹಿಳೆಯರಿಗೆ ಇಂದು ಸ್ಥಾನ ಮಾನ ಹೆಚ್ಚಿ, ಉದ್ಯೋಗದಲ್ಲೂ ಯಶಸ್ಸು ಸಾಧಿಸಲು ಸಾಧ್ಯವಾಗುವ ಶುಭ ದಿನ. ಕೃಷಿ ಕ್ಷೇತ್ರದಲ್ಲಿರುವವರಿಗೆ ನೀರಿಗಾಗಿ ಪರದಾಟ ತಪ್ಪದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ನಿರೀಕ್ಷಿತ ಕೆಲಸಗಳಿಗೆ ಅಡೆತಡೆಗಳಿದ್ದರೂ ಅಂತಿಮವಾಗಿ ಜಯ ನಿಮ್ಮದೇ. ವೃತ್ತಿರಂಗದಲ್ಲಿ ಅಭಿವೃದ್ಧಿ, ಮುನ್ನಡೆ ಗೋಚರಕ್ಕೆ ಬರುವುದು. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು.

ಮೀನ: ಹೆಚ್ಚಿನ ಸಮಯವನ್ನು ಪ್ರೀತಿ ಪಾತ್ರರಿಗಾಗಿ ಮೀಸಲಿಡಬೇಕಾಗುತ್ತದೆ. ಕುಟುಂಬದವರೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನದಂದು ತುಳಸಿ ಗಿಡವನ್ನು ಕತ್ತರಿಸಿದರೆ ದರಿದ್ರ ಸುತ್ತಿಕೊಳ್ಳುವುದಂತೆ