Select Your Language

Notifications

webdunia
webdunia
webdunia
webdunia

ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ಕಟಾಕ್ಷ ಇರಬೇಕು ಎಂದು ಬಯಸಿದಲ್ಲಿ ಹೀಗೆ ಮಾಡಿ

money
bangalore , ಶನಿವಾರ, 25 ನವೆಂಬರ್ 2023 (11:18 IST)
ನಿಮ್ಮ ಮನೆಯಲ್ಲಿ ಸದಾ ಲಕ್ಷಕಟಾಕ್ಷ ಇರಬೇಕು ಎಂದು ಬಯಸಿದಲ್ಲಿ ಮನೆಯಲ್ಲಿ ಕೆಲ ವಸ್ತುಗಳನ್ನು ಸದಾ ಇಡುವುದರಿಂದ ಲಕ್ಷದೇವಿ ಒಲಿದು ಬಂದು ನಿಮ್ಮ ಕಷ್ಟಗಳನ್ನು ದೂರ ಮಾಡಿ ಅಪಾರ ಸಂಪತ್ತಿನ ಒಡೆಯರನ್ನಾಗಿ ಮಾಡುತ್ತಾಳೆ. ಯಾವ ವಸ್ತು ಮನೆಯಲ್ಲಿರಬೇಕು ಎನ್ನುವ ಬಗ್ಗೆ ಇಲ್ಲಿ ತೋರಿಸಿದ್ದೇವೆ ನೋಡಿ.
 
ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತುಂಬಿರಬೇಕೆಂದರೆ ಬೆಳ್ಳಿಯಿಂದ ತಯಾರಿಸಿದ ಈ 5 ವಸ್ತುಗಳಲ್ಲಿ ಯಾವುದಾದರೂ ಒಂದನ್ನು ನಿಮ್ಮ ಮನೆಯಲ್ಲಿ ಇಡಿ.
 
*ಒಂದು ಚೌಕಾಕಾರದ ಬೆಳ್ಳಿಯ ತುಂಡನ್ನು ಮನೆಯಲ್ಲಿ ಇರಿಸಿದರೆ ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿಯಾಗುತ್ತದೆ. ಧನ ಲಾಭವಾಗುತ್ತದೆ.
 
*ಶುಕ್ಲ ಪಕ್ಷದ ದಿನಗಳಲ್ಲಿ ಸೋಮವಾರದಂದು ಬೆಳ್ಳಿಯ ಸರವನ್ನು ಧರಿಸುವುದರಿಂದ ನಿಮ್ಮ ದುಖಗಳು, ಸಮಸ್ಯೆಗಳು ದೂರವಾಗುತ್ತದೆ.
 
*ಬೆಳ್ಳಿಯ ಆನೆಯ ವಿಗ್ರಹವನ್ನು ಮನೆಯಲ್ಲಿ ಅಥವಾ ಆಫೀಸಿನಲ್ಲಿ ಇಟ್ಟರೆ ಲಕ್ಷ್ಮೀದೇವಿ ಕೃಪೆ ನಮಗೆ ಸಿಗುತ್ತದೆ.
 
*ನಿಮ್ಮ ತಿಜೋರಿಯಲ್ಲಿ ಬೆಳ್ಳಿಯಿಂದ ಮಾಡಿದ ಡಬ್ಬದಲ್ಲಿ ನೀರನ್ನು ತುಂಬಿಸಿಟ್ಟರೆ ಧನ ವೃದ್ಧಿಯಾಗುತ್ತದೆ.
 
*ಬೆಳ್ಳಿಯ ಲೋಟದಲ್ಲಿ ನೀರು ಕುಡಿದರೆ ಸಕರಾತ್ಮಕ ಪರಿಣಾಮಗಳು ನಿಮಗಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?