ದೇವರ ದರ್ಶನ ಹೇಗೆ ಪಡೆಯಬೇಕು?

Webdunia
ಬುಧವಾರ, 10 ಏಪ್ರಿಲ್ 2019 (07:16 IST)
ಬೆಂಗಳೂರು: ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಹೇಗೆ ಪಡೆಯಬೇಕು ಎನ್ನುವುದಕ್ಕೆ ನಮ್ಮ ಪೂರ್ವಜರು ಕೆಲವೊಂದು ನಿಯಮ ರೂಪಿಸಿದ್ದಾರೆ. ಅದರಂತೆ ನಡೆದರೆ ನಮಗೆ ದೇವರ ದರ್ಶನ ಫಲ ಸಿಗುವುದು.


ಯಾವುದೇ ಯಾತ್ರೆಗೆ ಹೋದಾಗ ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ನೂರು ಕೋಟಿ ತೀರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವನಿಂದ ತತ್ವ ಉಪದೇಶಿಸು, ವೈಕುಂಠಕ್ಕೆ ಕರೆದೊಯ್ದು ನಿನ್ನ ದರ್ಶನ ಮಾಡಿಸು ಎಂದು ಪ್ರಾರ್ಥಿಸಬೇಕು.

ನಂತರ ಹೊರಗಿನಿಂದಲೇ ದೇವರ ದರ್ಶನ ಮಾಡಬೇಕು. ಅದಕ್ಕೆ ಧೂಳಿ ದರ್ಶನ ಎನ್ನುತ್ತಾರೆ. ಧೂಳಿದರ್ಶನಂ ಪಾಪನಾಶನಂ ಎಂದರೆ ಪಾಪ ನಾಶವಾಗುತ್ತದೆ.

ನಂತರ ದೇವಾಲಯದ ಒಳಗೆ ಹೋಗುವಾಗ ಕೈಕಾಲುಗಳನ್ನು ತೊಳೆದು ಪ್ರವೇಶ ಮಾಡಿ. ಆದರೆ ತಕ್ಷಣವೇ ವಿಗ್ರಹವನ್ನು ನೋಡಬೇಡಿ. ಅದಕ್ಕೂ ಒಂದು ಕ್ರಮವಿದೆ. ಮೊದಲು ಪಾದ ದರ್ಶನ ಮಾಡಿ. ನಂತರ ಕಟಿ ದರ್ಶನ, ನಂತರ ನಾಭಿ, ತದನಂತರ ಕಂಠ, ಅದಾದ ಬಳಿಕ ಮುಖ ದರ್ಶನ, ಕಿರೀಟ ದರ್ಶನ ಮಾಡಬೇಕು. ಸರ್ವಾಂಗ ದರ್ಶನ ಮಾಡಿ ದೇವರಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಣಪತಿ ತಾಳಂ ಸ್ತೋತ್ರ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ

ಸಂಜೆ ಸಮಯದಲ್ಲಿ ಈ ಸ್ತೋತ್ರಗಳನ್ನು ಕೇಳಿದ್ರೆ ಮನೆಯಲ್ಲಿ ಶಾಂತಿ ನೆಲೆಸುತ್ತೆ

ದುರ್ಗಾ ದೇವಿಯ ಪವರ್ ಫುಲ್ ಮಂತ್ರವನ್ನು ಇಂದು ತಪ್ಪದೇ ಪಠಿಸಿ

ಶಿವ ಅಷ್ಟೋತ್ತರ ಶತನಾಮಾವಾಳಿ ತಪ್ಪದೇ ಪಠಿಸಿ

ಸುಬ್ರಹ್ಮಣ್ಯ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments