Publish Date: Mon, 08 Apr 2019 (08:38 IST)
Updated Date: Mon, 08 Apr 2019 (08:39 IST)
ಬೆಂಗಳೂರು: ಭಗವಂತನನ್ನ ಕಾಣಲು, ಸಂಪ್ರೀತಗೊಳಿಸಲು ಪ್ರಾಚಿನ ಕಾಲದಿಂದಲೂ ಋಷಿ ಮುನಿಗಳು ಕಂಡುಕೊಂಡ ಉಪಾಯಗಳು ಹೀಗಿವೆ.
1. ಶರೀರವನ್ನು ನೀರು ಮತ್ತು ಯೋಗದಿಂದ ಮಡಿ ಮಾಡಿ.
2. ಉಸಿರನ್ನು ಪ್ರಾಣಾಯಾಮದಿಂದ ಮಡಿ ಮಾಡಿ.
3. ಮನಸ್ಸನ್ನು ಧ್ಯಾನದಿಂದ ಮಡಿ ಮಾಡಿ.
4. ಬುದ್ಧಿಯನ್ನು ಆಧ್ಯಾತ್ಮಿಕ ಚಿಂತನೆಗಳಿಂದ ಮಡಿ ಮಾಡಿ.
5. ನೆನಪುಗಳನ್ನು ಮನನ, ಸಚ್ಚಿಂತನೆಗಳಿಂದ ಮಡಿ ಮಾಡಿ.
6. ಅಹಂಕಾರವನ್ನು ಸೇವೆಯಿಂದ ಮಡಿ ಮಾಡಿ.
7. ಆತ್ಮವನ್ನು ಮೌನದಿಂದ ಮಡಿ ಮಾಡಿ.
8. ಆಹಾರವನ್ನು ತಯಾರಿಸುವಾಗ, ಬಡಿಸುವಾಗ ಮತ್ತು ಭುಂಜಿಸುವಾಗ ಸಕಾರಾತ್ಮಕ ಚಿಂತನೆಗಳಿಂದ ಮಡಿ ಮಾಡಿ.
9. ಸಂಪತ್ತನ್ನು ದಾನದಿಂದ ಮಡಿ ಮಾಡಿ.
10. ಭಾವನೆಗಳನ್ನು ಭಗವಂತನಲ್ಲಿ ನಿಷ್ಕಾಮ ಪ್ರೇಮ ಮತ್ತು ಶರಣಾಗತಿ ಮೂಲಕ ಮಡಿ ಮಾಡಿ.
ಮಡಿ ಅಂದರೆ ಈ ರೀತಿ ಮಡಿ ಮಾಡಬೇಕು. ಅದು ನಿಜವಾದ ಮಡಿ. ಮನಸ್ಸಲ್ಲಿ ಬೇರೆ ರೀತಿ ಅಶಾಸ್ತ್ರೀಯ ಆಲೋಚನೆ, ಚಿಂತನೆ ತುಂಬಿಕೊಂಡರೆ ಭಗವಂತ ಒಲಿಯನು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.