Webdunia - Bharat's app for daily news and videos

Install App

ಗ್ರಹಮಾಲಿಕಾ ಯೋಗ: ನಿಮ್ಮ ರಾಶಿಗೆ ಯಾವ ಮಾಲಿಕೆ ಯೋಗ

Webdunia
ಶುಕ್ರವಾರ, 1 ಡಿಸೆಂಬರ್ 2017 (14:02 IST)
ಸೌರವ್ಯೂಹದಲ್ಲಿ, ಅಪೂರ್ವ ಪ್ರಕೃತಿಯ ವಿದ್ಯಮಾನ, ಆಗಸ್ಟ್ 16 ರಂದು ಸಂಜೆ 5 ಗಂಟೆ 35 ನಿಮಿಷಕ್ಕೆ ಚಂದ್ರನು ಮೀನರಾಶಿಗೆ ಪ್ರವೇಶಿಸುವುದರೊಂದಿಗೆ ಗ್ರಹಮಾಲಿಕಾ ಯೋಗ ಪ್ರಾರಂಭವಾಗುತ್ತದೆ. ಎಂಟು ಗ್ರಹಗಳು ಅನುಕ್ರಮವಾಗಿ ಮೀನ ರಾಶಿಯಿಂದ ಕನ್ಯಾ ರಾಶಿಯವರೆಗೆ ಸಾಲಾಗಿಬರುತ್ತವೆ. ಈ ವಿದ್ಯಮಾನಕ್ಕೆ ಗ್ರಹಮಾಲಿಕಾ ಯೋಗವೆಂದು ಕರೆಯಲಾಗುತ್ತದೆ. 
ಮೀನರಾಶಿಯಲ್ಲಿ ಚಂದ್ರ, ಮೇಷ ರಾಶಿಯಲ್ಲಿ ಗುರು, ವೃಷಭ ರಾಶಿಯಲ್ಲಿ ಕೇತು, ಮಿಥುನ ರಾಶಿಯಲ್ಲಿ ಕುಜ ಕಟಕ ರಾಶಿಯಲ್ಲಿ ರವಿ ಮತ್ತು ಶುಕ್ರ, ಸಿಂಹ ರಾಶಿಯಲ್ಲಿ ವಕ್ರೀ ಬುಧ, ಕನ್ಯಾರಾಶಿಯಲ್ಲಿ ಶನಿ ಹೀಗೆ 7 ರಾಶಿಯಲ್ಲಿ 8 ಗ್ರಹಗಳು ಅನುಕ್ರಮವಾಗಿ ಬರುತ್ತದೆ. 
 
ಈ ಗ್ರಹ ಮಾಲಿಕಾಯೋಗ ಆಗಸ್ಟ್ 16ರ ಮಧ್ಯರಾತ್ರಿ 12 ಗಂಟೆ 36 ನಿಮಿಷದವರೆಗೆ ಇರುತ್ತದೆ. ವಕ್ರೀ ಬುಧನು ಸಿಂಹ ರಾಶಿಯಿಂದ ಪುನಃ ಕಟಕ ರಾಶಿಗೆ ಹೋಗುತ್ತಾನೆ. ಇಲ್ಲಿಗೆ ಗ್ರಹಮಾಲಿಕಾ ಯೋಗ ಮುಗಿಯುತ್ತದೆ. ನಂತರ ಆಗಸ್ಟ್ 17ರ ಬೆಳಗಿನ ಜಾವ 7 ಗಂಟೆ 45 ನಿಮಿಷಕ್ಕೆ ಶುಕ್ರನು ಸಿಂಹ ರಾಶಿಗೆ ಪ್ರವೇಶ ಮಾಡುವುದರಿಂದ ಪುನಃ ಗ್ರಹಮಾಲಿಕಾ ಯೋಗ ಉಂಟಾಗುತ್ತದೆ. ಈ ಯೋಗವು ಆಗಸ್ಟ್ 19ರ ಬೆಳಗಿನ ಜಾವ 5 ಗಂಟೆ 59 ನಿಮಿಷದವರೆಗೆ ಇರುತ್ತದೆ. ಚಂದ್ರನು ಮೇಷ ರಾಶಿಗೆ ಪ್ರವೇಶಿಸುವುದರೊಂದಿಗೆ ಗ್ರಹಮಾಲಿಕಾ ಯೋಗ ಮುಕ್ತಾಯವಾಗುತ್ತದೆ. ಗ್ರಹಮಾಲಿಕಾ ಯೋಗದ ಅವಧಿಯಲ್ಲಿ ಜನಿಸುವವರಿಗೆ ವಿವಿಧ 12 ವಿಶೇಷ ಗ್ರಹಮಾಲಿಕಾ ಯೋಗ ಉಂಟಾಗುತ್ತದೆ. 
 
 
ಲಗ್ನದಿಂದ, ಗ್ರಹಗಳು ಅನುಕ್ರಮವಾಗಿ ರಾಶಿಗಳಲ್ಲಿ ಸಾಲಾಗಿಬಂದರೆ ಲಗ್ನಮಾಲಿಕಾ ಯೋಗ. ಈ ಯೋಗದವರು ಪ್ರಖ್ಯಾತ ವ್ಯಕ್ತಿಯಾಗಿದ್ದು, ಅನೇಕ ವಾಹನಗಳನ್ನು ಹೊಂದಿರುವವರಾಗಿರುತ್ತಾರೆ. 
 
2ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾಯೋಗವು ವಿತ್ತಮಾಲಿಕಾ ಯೋಗ. ಈ ಯೋಗದವರು ಐಶ್ವರ್ಯವಂತ, ಪಿತೃಭಕ್ತಿಯುತ, ಧೈರ್ಯ, ಸಿಟ್ಟು, ರೂಪವಂತ, ರಾಜಯೋಗ ಅನುಭವಿಸುವವರಾಗಿರುತ್ತಾರೆ. 
 
3ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ವಿಕ್ರಮ ಮಾಲಿಕಾ ಯೋಗ. ಈ ಯೋಗದವರು ಧೈರ್ಯ, ಸಾಹಸ, ಧನಿಕ ಆದರೆ ಅನಾರೋಗ್ಯ ಉಂಟಾಗಿರುತ್ತದೆ. 
 
4ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ಸುಖ ಮಾಲಿಕಾ ಯೋಗ. ಈ ಯೋಗದವರು ಪ್ರಸಿದ್ಧ ವ್ಯಕ್ತಿ, ಮುಖ್ಯಾಧಿಕಾರಿ, ಮಹಾದಾನಿ, ವಿದೇಶ ಪ್ರವಾಸ ಹಾಗೂ ವ್ಯವಹಾರ ಮಾಡುವವರಾಗುತ್ತಾರೆ. 
 
5ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ಸುತಮಾಲಿಕಾ ಯೋಗ. ಈ ಯೋಗದವರು ಧಾರ್ಮಿಕ ಶ್ರದ್ದೆ, ಒಳ್ಳೆಯ ಕೆಲಸಗಳನ್ನು ಮಾಡುವವನು, ಅನೇಕ ಪ್ರಶಸ್ತಿಗಳನ್ನು ಪಡೆಯುವವರಾಗಿರುತ್ತಾರೆ.
 
6ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ರಿಪು ಮಾಲಿಕಾ ಯೋಗ. ಈ ವರ್ಗದವರು ಸುಖ-ದುಃಖಗಳನ್ನು ಸಮಾನವಾಗಿ ಅನುಭವಿಸುವವರಾಗಿರುತ್ತಾರೆ. 
 
7ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ಕಳತ್ರಮಾಲಿಕಾ ಯೋಗ. ಈ ಯೋಗದವರು ಬಹುಜನ ಸ್ತ್ತ್ರೀವಲ್ಲಭ ರಾಗುತ್ತಾರೆ. 
 
8ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ರಂಧ್ರಮಾಲಿಕಾ ಯೋಗ. ಈ ಯೋಗದವರು ದೀರ್ಘಾಯು, ಧನಹೀನ, ಪ್ರಮುಖ ವ್ಯಕ್ತಿಯಾಗುತ್ತಾರೆ.
 
9ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾಯೋಗವು, ಧರ್ಮಮಾಲಿಕಾ ಯೋಗ. ಈ ಯೋಗದವರು ಗುಣವಂತ, ತೀರ್ಥಯಾತ್ರೆ ಮಾಡುವವರು, ಸಾಧನೆ, ತಪಸ್ಸು ಆಚರಿಸುವವರಾಗುತ್ತಾರೆ ಹಾಗೂ ಧರ್ಮಾಧಿಕಾರಿಯಾಗುತ್ತಾರೆ.
 
10ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ಕರ್ಮಮಾಲಿಕಾ ಯೋಗ. ಈ ಯೋಗದವರು ಧರ್ಮ - ಕರ್ಮ ಅನುಷ್ಠಾನ ಮಾಡುವವರು, ಹಿರಿಯರಿಗೆ ಗೌರವ ಕೊಡುವವರು, ಉತ್ತಮ ವ್ಯಕ್ತಿತ್ವಉಳ್ಳವರಾಗುತ್ತಾರೆ. 
 
11ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ಭಮಾಲಿಕಾ ಯೋಗ. ಈ ಯೋಗದವರು ಎಲ್ಲಾ ಕಾರ್ಯಗಳನ್ನು ದಕ್ಷತೆಯಿಂದ ಮಾಡುವವರಾಗುತ್ತಾರೆ. 
 
12ನೇ ಭಾವದಿಂದ ಪ್ರಾರಂಭವಾಗುವ ಮಾಲಿಕಾ ಯೋಗವು ವ್ಯಯಮಾಲಿಕಾ ಯೋಗ.ಈ ಯೋಗದವರು ದುಂದುವೆಚ್ಚ ಮಾಡುವವರು ಎಲ್ಲರಿಗೂ ಬೇಕಾಗುವವರು ಹಾಗೂ ಆರಾಧಿಸುವವರಾಗಿರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2025: ಮೀನ ರಾಶಿಯವರು 2025 ರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ

Horoscope 2025: ಕುಂಭ ರಾಶಿಯವರಿಗೆ 2025 ರಲ್ಲಿ ಆರೋಗ್ಯವನ್ನು ಹಗುರವಾಗಿ ಪರಿಗಣಿಸುವಂತಿಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ಬಗ್ಗೆ ಚಿಂತೆ ಬೇಡ

Horoscope 2025: ಧನು ರಾಶಿಯವರಿಗೆ ಆರೋಗ್ಯದಲ್ಲಿ ಕುಟುಂಬಕ್ಕೂ ತೊಂದರೆ

ಮುಂದಿನ ಸುದ್ದಿ
Show comments