Select Your Language

Notifications

webdunia
webdunia
webdunia
webdunia

ವೃಷಭ ರಾಶಿಗೆ ಗುರು ಪ್ರವೇಶ; ನಿಮ್ಮ ಗ್ರಹಗತಿ ಹೇಗಿದೆ ಗೊತ್ತಾ?

ವೃಷಭ ರಾಶಿಗೆ ಗುರು ಪ್ರವೇಶ; ನಿಮ್ಮ ಗ್ರಹಗತಿ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 1 ಡಿಸೆಂಬರ್ 2017 (13:56 IST)
ಗ್ರಹಗಳಲ್ಲಿ ಹೆಚ್ಚು ಶುಭಫಲ ನೀಡುವ ಗ್ರಹ ಗುರು. ಗುರುವಿಗೆ ಅರ್ಥವತ್ತಾದ ಶಬ್ದವೆಂದರೆ ವಿಕಾಸ ಅಥವಾ ವಿಸ್ತರಣೆ. ಗುರು ಗ್ರಹವು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷ ಸಂಚರಿಸುತ್ತಾನೆ. ರಾಶಿ ಚಕ್ರವನ್ನು ಒಂದು ಸುತ್ತು ಸುತ್ತಿಬರಲು ಸುಮಾರು 12 ವರ್ಷಗಳಾಗುತ್ತದೆ.
ಗುರು ಮೇ 17ರಂದು ಭಾರತೀಯ ಕಾಲಮಾನ ಬೆಳೆಗ್ಗೆ 9 ಗಂಟೆ 34 ನಿಮಿಷಕ್ಕೆ ವೃಷಭ ರಾಶಿಗೆ ಪ್ರವೇಶಿಸುತ್ತಾನೆ. 2013 ರ ಮೇ 31 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆ 49 ನಿಮಿಷಕ್ಕೆ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ವೃಷಭ ರಾಶಿಯಲ್ಲಿ ಒಟ್ಟು 379 ದಿವಸಗಳವರೆಗೆ ಇರುತ್ತಾನೆ. ಈ ಅವಧಿಯಲ್ಲಿ ಮೇ 1ರಂದು ಗುರು ಅಸ್ತವಾಗಿ ಮೇ 29ರಂದು ಉದಯವಾಗುತ್ತಾನೆ. ಒಟ್ಟು 28 ದಿವಸಗಳವರೆಗೆ ಅಸ್ತವಾಗುತ್ತಾನೆ. ಅಕ್ಟೋಬರ್ 4 ರಂದು ವಕ್ರಿಯಾಗಿ ಜನವರಿ 30 ರಂದು ಋಜುಮಾರ್ಗ ಪಡೆಯುತ್ತಾನೆ. ಒಟ್ಟು 117 ದಿವಸಗಳವರೆಗೆ ವಕ್ರಿಯಾಗಿರುತ್ತಾನೆ. 
 
ಮೇಷ ರಾಶಿಯವರಿಗೆ 2ನೇ ಗುರುವಿನ ಪ್ರಭಾವದಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿಕೆ. ಒಳ್ಳೆಯ ಗುಣಧರ್ಮಗಳು ಮೈಗೂಡಿಸಿಕೊಳ್ಳುವುದು. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ವಿ ಶತ್ರುಗಳು ಸಹಾ ಗೌರವದಿಂದ ವರ್ತಿಸುತ್ತಾರೆ. ಧಾರ್ಮಿಕ ಭಾವನೆಯಿಂದ ಮುಂದುವರಿಯುವಿರಿ. ಸಂತಾನಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ಪ್ರಾಪಂಚಿಕ ಆಸ್ತಿ ಮತ್ತು ದುಡಿಮೆಯ ಬಲ ಹೆಚ್ಚುತ್ತದೆ. ಇದು ಮೇಷ ರಾಶಿಯವರಿಗೆ ಉತ್ಪಾದನೆಯ ವರ್ಷ. ಬರಿಯ ಅದೃಷ್ಟವನ್ನು ಅವಲಂಬಿಸದೆ ಭವಿಷ್ಯಕ್ಕೆ ಗಟ್ಟಿಯಾದ ಮತ್ತು ಬಲವಾದ ಬುನಾದಿಯನ್ನು ಹಾಕಬೇಕಾದ ಅವಶ್ಯಕತೆಯಿದೆ. ಶಿಕ್ಷಣದಿಂದ ಮತ್ತು ಪ್ರಯಾಣದಿಂದ ಆದಾಯವನ್ನು ಹೆಚ್ಚಿಸಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ.
 
ವೃಷಭರಾಶಿಯವರಿಗೆ ಜನ್ಮ ಗುರುವಿನಿಂದ ಶುಭಫಲ ದೊರೆಯುತ್ತದೆ. ಕೆಲಸಕಾರ್ಯಗಳು ಸುಗಮವಾಗಿಸಾಗುತ್ತದೆ. ಧಾರ್ಮಿಕ ಕ್ಷೇತ್ರಗಳ ಯಾತ್ರೆಯೋಗ ಅಪವಾದಗಳಿಂದ ಮುಕ್ತಿ ದೂರ ಪ್ರಯಾಣ, ಕೋರ್ಟ್ ಪ್ರಕರಣಗಳೇನಿದ್ದರೂ ನಿಮ್ಮಂತೆ ಆಗುವುದನ್ನು ನಿರೀಕ್ಷಿಸಬಹುದು. ಗುರುವಿನ ಸುಲಭ ಜೀವನದ ಮೇಲಿನ ಪ್ರೀತಿ ಮತ್ತು ವೃಷಭ ರಾಶಿಯ ವಿಷಯಾಸಕ್ತ, ಐಂದ್ರಿಯ ಲೋಲ ಸ್ವಭಾವ ಇವೆರಡೂ ಒಟ್ಟೊಟ್ಟಾಗಿಯೇ ಸೇರಿ ಈ ಅವಧಿ ಸಂತಸದಿಂದ ಕೂಡಿರುತ್ತದೆ.
 
ಉತ್ಸಾಹ, ಹುಮ್ಮಸ್ಸು, ಓದಾರ್ಯ, ಆಶಾವಾದದಿಂದ ಕೂಡಿದ ಮನಃಸ್ಥಿತಿ ಈ ವರ್ಷದಲ್ಲಿ ಈ ರಾಶಿಯವರಿಗಿರುತ್ತದೆ.
 
ಅಡ್ಡಿ-ಆತಂಕಗಳಿಂದ ಮುಂದುವರಿಯದೆ, ನಿಂತ ಎಲ್ಲ ಕೆಲಸಗಳನ್ನು ಗುರು ಸುಧಾರಿಸಿ ಮುಂದುವರಿಯುವಂತೆ ಮಾಡುವುದಲ್ಲದೇ, ಬಹುಕಾಲದ ಕನಸಿನ ವೈಯಕ್ತಿಕ ಯೋಜನೆಗಳಿಗೆ ಚಾಲನೆ ದೊರೆಯುವಂತೆ ಮಾಡುತ್ತಾರೆ. ತಮ್ಮ ಆಂತರಿಕ ಪ್ರತಿಭೆಗಳನ್ನು ಹೊರ ಸೂಸಿ ಬೆಳೆಸಲು ಇದು ಒಳ್ಳೆಯ ಸಮಯ, ಅದಲ್ಲದೆ ಇದಕ್ಕೆ ಇವರಿಗೆ ಮಾನಸಿಕ ಮತ್ತು ಆರ್ಥಿಕವಾಗಿ ಬಹಳ ಬೆಂಬಲ ಸಿಗುತ್ತದೆ. ಈ ರಾಶಿಯವರಿಗೆ ಒಂದೇ ಅಡ್ಡಿ ಎಂದರೆ ಪ್ರಾಪಂಚಿಕ ವಿಷಯಾಸಕ್ತ ಸ್ವಭಾವ.
 
ಮಿಥುನ ರಾಶಿಯವರಿಗೆ 12ನೇ ಗುರುವಿನಿಂದ ಹೊರದೇಶದಲ್ಲಿ ಉದ್ಯೋಗಗಳು ದೊರೆಯುತ್ತದೆ. ವೃತ್ತಿ ಬದಲಾವಣೆಯಿಂದ ಅನುಕೂಲ. ಗುರು ವೃಷಭರಾಶಿಯಲ್ಲಿ ಸಂಚರಿಸುವುದರಿಂದ ಧ್ಯಾನ ಜೀವನದ ಆಳವಾದ ಅರ್ಥವನ್ನು ತಿಳಿದುಕೊಳ್ಳುವತ್ತ ಆಕರ್ಷಿತರಾಗಿ ಅದರ ಚಿಂತನೆಯಲ್ಲಿ ಏಕಾಂಗಿಯಾಗಿ ಸಮಯ ಕಳೆಯಲು ಬಯಸಬಹುದು. ಆಧ್ಯಾತ್ಮಿಕತೆ, ಗಹನ ಮತ್ತು ಗೂಢವಾದ ವಿಷಯಗಳಲ್ಲಿ ಹೊಸ ಆಸಕ್ತಿಯನ್ನು ಹೊಂದಿ ಪ್ರಾವೀಣ್ಯರಾಗಬಹುದು. ಮತ್ತು ನೀವು ಸ್ವಯಂ ಸೇವೆ, ದಾನ ಧರ್ಮ ಅಥವಾ ಸಣ್ಣ ಸಹಾಯಗಳಂತಹ ವಿಷಯಗಳಲ್ಲಿ ಅಥವಾ ಯೋಜನೆಗಳಲ್ಲಿ ತೊಡಗಬಹುದು. ಗುರು ನಿಮ್ಮ 7ನೇ ಮನೆಯ ಅಧಿಪತಿಯಾಗಿರುವುದರಿಂದ ಶೃಂಗಾರ, ಸಮಯದ ಯೋಗವಿದೆ. ಮದುವೆಯಾದವರು ತಮ್ಮ ಸಂಬಂಧವನ್ನು ಭದ್ರಗೊಳಿಸಲು ಸ್ವಲ್ಪ ಹೆಚ್ಚಿನ ಸಮಯ ಮತ್ತು ಗಮನವನ್ನು ವಿನಿಯೋಗಿಸುವಂತಹ ಸನ್ನಿವೇಶಗಳು ಎದುರಾಗಬಹುದು.
 
ಕಟಕ ರಾಶಿಯವರಿಗೆ 11ನೇ ಗುರುವಿನಿಂದ ಉದ್ಯೋಗಗಳಲ್ಲಿ, ಉತ್ತಮ ಸ್ಪರ್ಧೆಗಳಲ್ಲಿ ಜಯ, ಹೆಚ್ಚಿನದೇನೂ ನಿರೀಕ್ಷೆಬೇಡ, ಧಾರ್ಮಿಕ ಸ್ಥಳಗಳಿಗೆ ಯಾತ್ರೆ ಯೋಗ, ಧಾರ್ಮಿಕ ಚಟುವಟಿಕೆಯಲ್ಲಿ ತೊಡಗುವಿರಿ, ಕಟಕ ರಾಶಿಯವರು ಗುರು ವೃಷಭ ರಾಶಿಗೆ ಪ್ರವೇಶಿಸುವುದರ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ನೀವು ಸಾಮಾಜಿಕ ಕಾರ್ಯಗಳಲ್ಲಿ ತೊಡಗುತ್ತೀರಿ. ಸ್ನೇಹಿತರ ಗುಂಪು ಹೆಚ್ಚಾಗುವುದರಿಂದ ದೀರ್ಘಕಾಲಿಕ ಗುರಿಗಳನ್ನು ತಲುಪಲು ಸಹಾಯವಾಗುವುದಲ್ಲದೆ ಸಹಕಾರ ಮತ್ತು ಪ್ರೋತ್ಸಾಹ ಹೆಚ್ಚಾಗಿ ಸಿಗುತ್ತದೆ. ಸ್ನೇಹಿತರ ಗುಂಪು (ಕ್ಲಬ್), ಸಂಘ ಸಂಸ್ಥೆಗಳ ಮೂಲಕ ಸ್ವಯಂ ಸೇವೆ ಮಾಡಿದ್ದಲ್ಲಿ ಒಳ್ಳೆಯ ಲಾಭವಿದೆ.
 
ಸಿಂಹರಾಶಿಯವರಿಗೆ 10ನೇ ಗುರುವಿನಿಂದ ಭಾಗ್ಯಶಾಲಿಗಳು, ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶಗಳು, ವಿದ್ಯಾಕ್ಷೇತ್ರಗಳಲ್ಲಿರುವವರಿಗೆ ಗೌರವ, ಸನ್ಮಾನಗಳು ದೊರೆಯುತ್ತವೆ, ಆರ್ಥಿಕ ಪ್ರಗತಿ, ಹಣಕಾಸು ವ್ಯವಹಾರಗಳು ಸುಗಮ, ಅವಕಾಶವಿದ್ದಲ್ಲಿ ಮುಂಬಡ್ತಿ ಹೊಂದುವಿರಿ, ಧಾರ್ಮಿಕ ಕಾರ್ಯಗಳು ಶುಭಕಾರ್ಯಗಳು ಜರುಗುವುವು. ನಂತರ ಕೋರ್ಟಿನ ಪ್ರಕರಣಗಳಿದ್ದಲ್ಲಿ ನಿಮ್ಮ ಪರ ಆಗುತ್ತದೆ. ಪದವಿ ಅಥವಾ ದರ್ಜೆಯಲ್ಲಿ ಬದಲಾವಣೆಯ ಸಮಯ, ವೃತ್ತಿಯಲ್ಲಿ ಉನ್ನತಿ, ಹೊಸ ಕೆಲಸ (ಉದ್ಯೋಗ), ಸಮಾಜದಲ್ಲಿ ಉನ್ನತ ಸ್ಥಾನ, ಮುಖ್ಯವಾದ ಬಹುಮಾನ ದೊರೆಯುವಂತಹ ಅವಕಾಶಗಳು ದೊರೆಯುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಸಿಂಹ ರಾಶಿಯವರು ತಮ್ಮ ಕೆಲಸದಲ್ಲಿ ಸಂತೋಷವನ್ನು ಹೊಂದುವುದಲ್ಲದೆ ಕ್ರಿಯಾತ್ಮಕ ವಿಷಯವನ್ನು ಬೆಳೆಸಿ ಪೋಷಿಸಲು ಹೆಚ್ಚಿನ ಅವಕಾಶಗಳು ದೊರೆಯುತ್ತದೆ.
 
ಕನ್ಯಾ ರಾಶಿಯವರಿಗೆ 9ನೇ ಗುರುವಿನಿಂದ ಆಕಸ್ಮಿಕ ಸ್ಥಳ ಬದಲಾವಣೆ ಉದ್ಯೋಗದಲ್ಲಿರುವವರಿಗೆ ವರ್ಗಾವಣೆ, ಮಾನಸಿಕ ಅಸಮದಾನ, ಹಣಕಾಸಿನ ವ್ಯವಹಾರಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬರುತ್ತದೆ. ಅನಾರೋಗ್ಯದಿಂದಿದ್ದವರಿಗೆ ಆರೋಗ್ಯ ಸುಧಾರಣೆ ಉಂಟಾಗುತ್ತದೆ. ಆಕಸ್ಮಿಕ ಧನಯೋಗ, ಉತ್ಸುಕತೆಯಿಂದ ಮುಂದುವರಿಯುವಿರಿ. ಪ್ರಯಾಣ, ಅಧ್ಯಯನ, ವಿದೇಶ ಪ್ರಯಾಣ, ವಿವಿಧ ಸಂಸ್ಕೃತಿಯ ಜನರೊಡನೆ ಬೆರೆಯುವಂತಹ ವಿಷಯಗಳ ಮೇಲೆ ಗುರುವಿನ ದೃಷ್ಠಿ ಕನ್ಯಾರಾಶಿಯವರ ಮೇಲಿದೆ. ವೃತ್ತಿಯಲ್ಲಿ, ಅಂತಾರಾಷ್ಟ್ರೀಯ ಒಪ್ಪಂದ ಜಾಹಿರಾತು ಮತ್ತು ಅಭಿವೃದ್ದಿ ಮೂಲಕ ಲಾಭವನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಸಣ್ಣ ವಿಷಯಗಳಿಗೆ ಚಿಂತಿಸುವುದು ಕಡಿಮೆಯಾಗುತ್ತದೆ.
 
ತುಲಾ ರಾಶಿಯವರಿಗೆ 8ನೇ ಗುರುವಿನಿಂದ ಅದಿಯೋಗ ಮತ್ತು ವಿಪರೀತ ರಾಜಯೋಗ ಉಂಟಾಗುತ್ತದೆ. ವಾದ-ವಿವಾದಗಳಲ್ಲಿ ಮುಂದುವರೆಯುವುದು ಒಳ್ಳೆಯದಲ್ಲ. ಆಕಸ್ಮಿಕ ಆಪಾದನೆಗೊಳಗಾಗುವಿರಿ. ಸಮತೋಲನದಲ್ಲಿ ಮುಂದುವರೆಯುವುದು ಸೂಕ್ತ. ಉದ್ಯೋಗದಲ್ಲಿ ಉತ್ತಮ ಸಮಾದಾನದಿಂದ ಮುಂದುವರೆಯುವುದು ಸೂಕ್ತ. ವಿದ್ಯಾರ್ಥಿಗಳಿಗೆ ಅನುಕೂಲ ಅನಾರೋಗ್ಯ ಸಂಭವ, ಸೂಕ್ತ ಚಿಕಿತ್ಸೆ ಅಗತ್ಯ. ಗುರು ನಿಮ್ಮ 8ನೇ ಮನೆಗೆ ಪ್ರವೇಶಿಸುವುದರಿಂದ ಜೊತೆಯಾಗಿ ಮಾಡುವ ಹಣಕಾಸಿನ ವ್ಯವಸ್ಥೆ, ಮೂಲದಲ್ಲಿ ಪಾಲು, ಸಾಲ, ತೆರಿಗೆ, ಲೈಂಗಿಕತೆ, ಸಲಿಗೆ, ವೈಯಕ್ತಿಕ ಪರಿವರ್ತನೆ, ಸಂಶೋಧನೆ, ತನಿಖೆ, ಮತ್ತು ಮಾನಸಿಕ ವಿಷಯಗಳಲ್ಲಿ ಯೋಗವಿದೆ. ಯಾವುದೇ ವಸ್ತುವಿನ ಹೆಚ್ಚಳ ನಿಮ್ಮೊಬ್ಬರ ಬದಲಾಗಿ ನಿಮ್ಮ ಸಂಗಾತಿಯ ಮುಖಾಂತರ ಬರುವುದು.
 
ನಿಮ್ಮ ಪ್ರೀತಿ ಪಾತ್ರರೊಡನೆ ಸಲಿಗೆ ಹೆಚ್ಚುವಂತಹ ಅವಕಾಶಗಳು ದೊರೆಯುತ್ತದೆ. ಇದು ಮೇಲೆ ನಮೂದಿಸಿರುವ ವಿಷಯಗಳಿಗೆ ಸಂಬಂಧಿಸಿದ ಭೂತಕಾಲದ ಮಾನಸಿಕ ನೋವುಗಳನ್ನು ನಿವಾರಿಸಿಕೊಳ್ಳುವ ವರ್ಷವಾಗಿದೆ.
 
ವೃಶ್ಚಿಕ ರಾಶಿಯವರಿಗೆ 7ನೇ ಗುರುವಿನಿಂದ ವಿವಾದಾತ್ಮಕ ಸ್ಪರ್ಧೆಗಳುಂಟಾಗುತ್ತದೆ. ವಾದ-ವಿವಾದ, ಉದ್ಯೋಗದಲ್ಲಿ ಉನ್ನತಿ, ವ್ಯವಹಾರಗಳಲ್ಲಿ ಅಭಿವೃದ್ದಿ ಕಂಡುಬರುತ್ತದೆ. ತೀರ್ಥಯಾತ್ರೆ, ಪ್ರಯಾಣಯೋಗ ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಬೇಕು ವಿದ್ಯಾಭ್ಯಾಸದಲ್ಲಿ ಪ್ರಗತಿ. ಉತ್ತಮ ಉದ್ಯೋಗ ದೊರೆಯುತ್ತದೆ. ಉತ್ತಮ ಪದವಿ ಪಡೆಯುವಿರಿ. ಎಲ್ಲಾ ವ್ಯಾವಹರಿಕ ಅಥವಾ ಹತ್ತಿರದ ಸಂಬಂಧಗಳ ಮೇಲೆ ಒತ್ತಡ ಬೀಳುತ್ತದೆ. ಬಲವಾದ ವಿಚಾರ ವಿನಿಮಯದಿಂದ ಮತ್ತು ವೈಯಕ್ತಿಕ ಚಾತುರ್ಯದಿಂದ ಅದನ್ನು ಉಳಿಸಬಹುದು.
 
ಒಟ್ಟಿನಲ್ಲಿ ಹೇಳುವುದಾದರೆ ಇದು ಸದ್ಯದಲ್ಲಿ ಇರುವ ಪಾಲುಗಾರಿಕೆಯನ್ನು ಬಲಗೊಳಿಸುವುದರೊಡನೆ ಹೊಸ ಪಾಲುಗಾರಿಕೆಯನ್ನು ಸ್ಥಾಪಿಸುವುದರಿಂದ ಯಶಸ್ಸು, ಬೆಳವಣಿಗೆಯನ್ನು ಕಾಣುವ ಸಮಯ.
 
ಧನಸ್ಸು ರಾಶಿಯವರಿಗೆ 6ನೇ ಗುರುವಿನಿಂದ ಗೃಹ ನಿರ್ಮಾಣ ಯೋಜನೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ, ಹಣಕಾಸಿನ ವ್ಯವಹಾರಗಳು ಉತ್ತಮವಾಗಿ ಮುಂದುವರಿಯುತ್ತದೆ. ವಿದೇಶಯಾತ್ರೆ, ತೀರ್ಥಯಾತ್ರೆ, ಶುಭಕಾರ್ಯಗಳು ಜರುಗುವುವು. ಈ ಸಮಯದಲ್ಲಿ ಈ ರಾಶಿಯವರ ಕೆಲಸ, ದೈನಂದಿನ ಕಾರ್ಯಗಳು ಮತ್ತು ಆರೋಗ್ಯ ಸಂಬಂಧಿ ವಿಚಾರಗಳು ಹೆಚ್ಚುತ್ತದೆ. ಆರೋಗ್ಯಕರ ಹವ್ಯಾಸಗಳು ಬೆಳೆಸಿ ರೂಢಿಸಿಕೊಳ್ಳುವ ಯೋಗವಿದೆ ಗುರು ನಿಮ್ಮ 6ನೇ ಮನೆಯಲ್ಲಿ ಸಂಚರಿಸುವುದರಿಂದ ಸೇವಾ ಚಟುವಟಿಕೆಗಳಿಗೆ ಒತ್ತು ಕೊಟ್ಟಲ್ಲಿ ಸಂತೋಷ ತೃಪ್ತಿಯನ್ನು ಕಾಣಬಹುದು. ಸಣ್ಣ ಸಂಗತಿಗಳೂ ಸಂತೋಷವನ್ನು ನೀಡುತ್ತದೆ. ಕೆಲಸದಲ್ಲಿ ಸಾಮಾನ್ಯ ಉನ್ನತಿಯನ್ನು ಕಾಣಬಹುದು. ಸ್ವಉದ್ಯೋಗಿಗಳಾಗಿದ್ದಲ್ಲಿ ಯಾವುದೇ ತರಹದ ಸೇವಾ ಮೂಲದ ಚಟುವಟಿಕೆಗಳಿಂದ ಹೆಚ್ಚಿನ ವರಮಾನವನ್ನು ಹೊಂದಬಹುದು.
 
ಮಕರ ರಾಶಿಯವರಿಗೆ 5ನೇ ಗುರುವಿನಿಂದ ಗೃಹಬದಲಾವಣೆ, ಹೊಸಗೃಹ ನಿರ್ಮಾಣಯೋಜನೆ ನಿಮ್ಮದು, ಸಹೋದರರಲ್ಲಿ ಭಿನ್ನಾಭಿಪ್ರಾಯ, ಉದ್ಯೋಗದ ಅವಕಾಶಗಳು ಹೊಸ ವೃತ್ತಿಯಿಂದ ಸಮಾದಾನ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಉಂಟಾಗುತ್ತದೆ. ಮನೆಯಲ್ಲಿ ಶುಭಕಾರ್ಯಗಳು ಜರುಗುವುವು. ಈ ರಾಶಿಯವರಿಗೆ ಕ್ರಿಯಾತ್ಮಕ ಯೋಜನೆಗಳಲ್ಲಿ ಮತ್ತು ಹವ್ಯಾಸಗಳಲ್ಲಿ ತೊಡಗುವುದರಿಂದ ಉತ್ಕೃಷ್ಟ ಲಾಭವಿದೆ. ಮೋಜು, ಆನಂದವನ್ನು ಕಾಣಬಹುದು. ಹೊಸ ಪ್ರತಿಭೆ ಮನರಂಜನೆ ಸಂತೋಷಮಯ ಸಾಮಾಜಿಕ ಜೀವನವನ್ನು ಕಾಣಬಹುದು. ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯ ಸಾಧ್ಯತೆಯಿದೆ.
 
ಕುಂಭರಾಶಿಯವರಿಗೆ 4ನೇ ಗುರುವಿನಿಂದ ಅವಿವಾಹಿತರಿಗೆ ವಿವಾಹಯೋಗ ಸಹೋದರರುಗಳಿಂದ ಅನುಕೂಲ ಶುಭಕಾರ್ಯಗಳು ನಡೆಯುತ್ತವೆ. ಹೆಚ್ಚಿನ ಪ್ರಯತ್ನದಿಂದ ನಿಮ್ಮ ಕಾರ್ಯಗಳು ಮುಂದುವರಿಯುತ್ತವೆ. ಪ್ರಯಾಣಯೋಗ, ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚಿನ ಪ್ರಯತ್ನದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ. ಈ ರಾಶಿಯವರು ಮನೆ, ಆಸ್ತಿ ಮತ್ತು ಮನೆಯ ಸುಖ ಸಾಧನಗಳಿಂದ ಲಾಭವನ್ನು ಕಾಣುತ್ತಾರೆ. ಪೋಷಕರೊಡನೆ, ಮಕ್ಕಳೊಡನೆ ಮತ್ತು ಸಂಬಂಧಿಕರೊಡನೆಯ ಸಂಬಂಧ ಬಲಗೊಳ್ಳುತ್ತದೆ. ಭೂಮಿ ಕೊಡು-ಕೊಳ್ಳುವಿಕೆಯ ಅವಕಾಶವಿದೆ. ಮನೆಯ ಸುಧಾರೀಕರಣವಾಗುತ್ತದೆ. ಒಟ್ಟಿನಲ್ಲಿ ಗುರುವಿನ ವಕ್ರದೃಷ್ಟಿಯ ಹೊರತಾಗಿಯೂ ಸುಖಕರವಾದ ಗೃಹಜೀವನವಿರುತ್ತದೆ.
 
ಮೀನ ರಾಶಿಯವರಿಗೆ 3ನೇ ಗುರುವಿನಿಂದ ವ್ಯವಹಾರಗಳು ಉತ್ತಮಮಟ್ಟದಲ್ಲಿ ಪ್ರಗತಿಹೊಂದುತ್ತದೆ. ವಿದ್ಯಾಕ್ಷೇತ್ರಗಳಲ್ಲಿರುವವರಿಗೆ ಹೆಚ್ಚಿನ ಅನುಕೂಲಗಳುಂಟಾಗುತ್ತದೆ. ಕುಟುಂಬದಲ್ಲಿ ಸಂತೋಷ ಹಾಗೂ ಶುಭಕಾರ್ಯಗಳ ಚಟುವಟಿಕೆ, ಹೊರದೇಶ ಪ್ರಯಾಣಯೋಗ. ಅವಿವಾಹಿತರಿಗೆ ವಿವಾಹಯೋಗ. ಅಧ್ಯಯನ, ಭೋಧನೆ, ಸಾರ್ವಜನಿಕ ಭಾಷಣ, ಬರವಣಿಗೆಯ ಮೂಲಕ ಕೌಶಲ್ಯ ಜ್ಞಾನವನ್ನು ಬಳಸಿಕೊಂಡು ಶೈಕ್ಷಣಿಕ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಉನ್ನತಿಯನ್ನು ಹೊಂದುವ ಅವಕಾಶ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ನೆರೆಹೊರೆಯವರಿಂದ, ಸಂಬಂಧಿಕರಿಂದ, ಸಹಪಾಠಿಗಳಿಂದ ಹೆಚ್ಚಿನ ಸಹಕಾರ ಸಿಗುತ್ತದೆ. ಶಿಕ್ಷಕರು, ಲೇಖಕರು ಅಥವಾ ವೃತ್ತಿಪರರು ಸಂಪರ್ಕ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳ ಲಾಭ ಹೊಂದುತ್ತಾರೆ. ಕ್ರಿಯಾತ್ಮಕ ಯೋಜನೆಗಳು ಫಲಕಾರಿಯಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುತ್ತಾರೆ. ವಿಶೇಷವಾಗಿ ಸ್ವಉದ್ಯೋಗಿಗಳಿಗೆ ಬಲವಾದ ವ್ಯಾಪಾರದ ಯೋಗವಿದೆ. ಸಾಮಾನ್ಯವಾಗಿ ಸಂಪರ್ಕದಲ್ಲಿ, ಕಲಿಯುವಿಕೆ ಮತ್ತು ಸಾಮಾಜಿಕತೆಯಲ್ಲಿ ಸಂತೋಷವನ್ನು ಕಾಣುತ್ತೀರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮನೆಗೆ ಸುಖ ಶಾಂತಿ ತರಲು ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು