ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ಆರೋಗ್ಯವೂ ಚೆನ್ನಾಗಿರುತ್ತದೆ.
									
										
								
																	
ವಾತಾವರಣದ ಬದಲಾವಣೆಗೆ ನಮ್ಮನ್ನು ಹೊಂದಿಕೊಳ್ಳಲು ಮನುಷ್ಯ ಆಹಾರದಲ್ಲಿ ಬದಲಾವಣೆ ಮಾಡಲೇಬೇಕಾಗುತ್ತದೆ. ನಮ್ಮ ದೇಶದಲ್ಲಿ ಮಳೆ, ಚಳಿ ಮತ್ತು ಬೇಸಿಗೆಗಾಲ ಎಂಬ ಮೂರು ಮುಖ್ಯ ಋತುಗಳಿವೆ. ಪ್ರತಿಯೊಂದು ಮುಖ್ಯ ಋತುವು ಎರಡು ಋತುಗಳಲ್ಲಿ ವಿಭಜನೆಯಾಗುತ್ತದೆ. ವಿಭಜನೆಯಾದ ಋತುವಿನಲ್ಲಿ ಎರಡು ತಿಂಗಳಿರುತ್ತವೆ. ಆರು ಋತುಗಳು ಸೇರಿ ಒಂದು ವರ್ಷವಾಗುತ್ತದೆ.
									
			
			 
 			
 
 			
			                     
							
							
			        							
								
																	ಗ್ರೀಷ್ಮ ಋತುವಿನಲ್ಲಿನ ಆಹಾರ
ಈ ಋತುವಿನಲ್ಲಿ ಜೀರ್ಣ ಶಕ್ತಿಯು ಮಂದವಾಗಿರುತ್ತದೆ. ಈ ಕಾಲದಲ್ಲಿ ಹಾಲು, ತುಪ್ಪ, ಬೆಣ್ಣೆಯಂತಹ ಸ್ನಿಗ್ಧ ಪದಾರ್ಥಗಳನ್ನು ಸೇವಿಸಬೇಕು. ಏಲಕ್ಕಿ, ಕೊತ್ತಂಬರಿ, ಜೀರಿಗೆ ಇವುಗಳನ್ನು ಬಳಸಿದ ಪದಾರ್ಥಗಳು, ಹಾಗೆಯೇ ಸಿಹಿ ಮತ್ತು ಹುಳಿ ರಸಾತ್ಮಕ, ಉದಾಹರಣೆಗೆ ನೆಲ್ಲಿಕಾಯಿ, ದಾಳಿಂಬೆಯಂತಹ ಹಣ್ಣುಗಳನ್ನು ತಿನ್ನಬೇಕು. ಅತೀ ತಣ್ಣನೆಯ ಮತ್ತು ಬಿಸಿ ಪದಾರ್ಥಗಳನ್ನು ಸೇವಿಸಬಾರದು.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ