Publish Date: Fri, 25 Jan 2019 (08:57 IST)
Updated Date: Fri, 25 Jan 2019 (08:59 IST)
ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ಆರೋಗ್ಯವೂ ಚೆನ್ನಾಗಿರುತ್ತದೆ.
ವಾತಾವರಣದ ಬದಲಾವಣೆಗೆ ನಮ್ಮನ್ನು ಹೊಂದಿಕೊಳ್ಳಲು ಮನುಷ್ಯ ಆಹಾರದಲ್ಲಿ ಬದಲಾವಣೆ ಮಾಡಲೇಬೇಕಾಗುತ್ತದೆ. ನಮ್ಮ ದೇಶದಲ್ಲಿ ಮಳೆ, ಚಳಿ ಮತ್ತು ಬೇಸಿಗೆಗಾಲ ಎಂಬ ಮೂರು ಮುಖ್ಯ ಋತುಗಳಿವೆ. ಪ್ರತಿಯೊಂದು ಮುಖ್ಯ ಋತುವು ಎರಡು ಋತುಗಳಲ್ಲಿ ವಿಭಜನೆಯಾಗುತ್ತದೆ. ವಿಭಜನೆಯಾದ ಋತುವಿನಲ್ಲಿ ಎರಡು ತಿಂಗಳಿರುತ್ತವೆ. ಆರು ಋತುಗಳು ಸೇರಿ ಒಂದು ವರ್ಷವಾಗುತ್ತದೆ.
ವಸಂತ ಋತುವಿನಲ್ಲಿನ ಆಹಾರ
ಈ ಋತುವಿನಲ್ಲಿ ಜಡ, ಎಣ್ಣೆ-ತುಪ್ಪಯುಕ್ತ, ಹುಳಿ ಮತ್ತು ಸಿಹಿ ಪದಾರ್ಥಗಳನ್ನು ಸೇವಿಸದೇ, ಅರಳು, ಹುರಿದ ಕಡಲೆ, ಗೋಧಿ, ಹೆಸರು, ಮೆಂತ್ಯ, ಸುವರ್ಣಗಡ್ಡೆ, ತಾಜಾ ಅರಿಶಿನ, ಹಸಿ ಶುಂಠಿ, ಇಂತಹ ಜೀರ್ಣಿಸಲು ಸುಲಭವಾದ, ಒಣಗಿದ, ಕಹಿ, ಒಗರು ಮತ್ತು ಖಾರದ ಪದಾರ್ಥಗಳನ್ನು ಸೇವಿಸಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ