Publish Date: Mon, 12 Oct 2020 (09:18 IST)
Updated Date: Mon, 12 Oct 2020 (09:20 IST)
ಬೆಂಗಳೂರು: ಮನೆಯಲ್ಲಿ ಪ್ರತಿನಿತ್ಯ ಶಂಖ ಊದುವ ಪದ್ಧತಿ ನಿಮ್ಮಲ್ಲಿರಬಹುದು. ಹಾಗಾಗಿ ದೇವರ ಮನೆಯಲ್ಲಿ ಶಂಖವಿಟ್ಟುಕೊಂಡಿರಬಹುದು. ಆದರೆ ಶಂಖ ಎಷ್ಟು ಇಟ್ಟುಕೊಂಡಿರಬೇಕು.
ಮನೆಯ ದೇವರ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಇಡಬಾರದು ಎಂಬುದು ಶಾಸ್ತ್ರ. ಯಾಕೆಂದರೆ ಶಂಖ ಹೇಗೆ ಶುಭ ಶಕುನವೋ ಅಶುಭವೂ ಹೌದು. ಅಲಂಕಾರಿಕ ವಸ್ತುವಿನಂತೆ ಎರಡಕ್ಕಿಂತ ಹೆಚ್ಚು ಇಟ್ಟುಕೊಂಡರೆ ಮನೆಯ ಸದಸ್ಯರಲ್ಲಿ ಕಲಹ, ದುಃಖ, ನೆಮ್ಮದಿ ಭಂಗವಾಗಬಹುದು. ಹೀಗಾಗಿ ಎರಡಕ್ಕಿಂತ ಹೆಚ್ಚು ಶಂಖ ಇಟ್ಟುಕೊಳ್ಳಬಾರದು ಎಂದು ಶಾಸ್ತ್ರ ಹೇಳುತ್ತದೆ.