Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 10 ಆಗಸ್ಟ್ 2023 (08:00 IST)

ಬೆಂಗಳೂರು: ಇಂದಿನ ರಾಶಿ ಭವಿಷ್ಯ, ದಿನ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ.

ಮೇಷ:- ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ತಕ್ಕ ಮನ್ನಣೆ ಸಿಗಲಿದೆ. ನಿಮ್ಮ ಉತ್ಸಾಹವನ್ನು ನಿಯಂತ್ರಿಸುವುದು ಒಳ್ಳೆಯದು. ಹಿಂದಿನ ವಿಷಯಗಳನ್ನು ನೆನಪಿಸಿಕೊಳ್ಳಬಹುದು. ಕೆಲಸದಲ್ಲಿ ಕಠಿಣ ಪರಿಶ್ರಮ ಮತ್ತು ಕೌಶಲ್ಯಕ್ಕೆ ಉತ್ತಮ ಮನ್ನಣೆ. ಚೆನ್ನಾಗಿ ಮಾಡಿದರೂ ಟೀಕೆ ಎದುರಿಸಬೇಕಾಗಬಹುದು. ನೆರೆಹೊರೆಯವರ ವರ್ತನೆ ಕೆಲವು ತೊಂದರೆಗಳನ್ನು ಉಂಟುಮಾಡುತ್ತದೆ.

ವೃಷಭ ರಾಶಿ :- ಪತ್ರಿಕೆ ಮತ್ತು ಖಾಸಗಿ ಸಂಸ್ಥೆಗಳಲ್ಲಿರುವವರಿಗೆ ಬದಲಾವಣೆಗಳು ಅನುಕೂಲಕರ. ನಿರುದ್ಯೋಗಿಗಳು ಹೊಸ ಕೆಲಸ ಹುಡುಕಿಕೊಳ್ಳುತ್ತಾರೆ. ಇತರರೊಂದಿಗೆ ಮುಕ್ತವಾಗಿ ಸಂವಹನ ನಡೆಸಲಿದ್ದೀರಿ. ಪೀಠೋಪಕರಣ, ವಾಹನ, ಬೆಲೆಬಾಳುವ ವಸ್ತುಗಳ ವ್ಯವಸ್ಥೆ ನಿಮ್ಮದಾಗಲಿದೆ. ಶತ್ರುಗಳೂ ಮಿತ್ರರಾಗುತ್ತಾರೆ.

ಮಿಥುನ:- ಶಿಕ್ಷಕರಿಗೆ ಒತ್ತಡ ಮತ್ತು ಚಿಂತೆಗಳು ಅಧಿಕ. ರಾಜಕೀಯದಲ್ಲಿ ಹೆಚ್ಚು ಪ್ರತಿಸ್ಪರ್ಧಿಗಳಿರಲಿದ್ದಾರೆ ಎಂಬುದನ್ನು ಗಮನಿಸಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಿ ಯಶಸ್ಸು ಪಡೆಯಿರಿ. ವೈದ್ಯರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ನಿಮ್ಮ ಉತ್ಸಾಹ ಮತ್ತು ಮಹತ್ವಾಕಾಂಕ್ಷೆಗಳಿಗೆ ಹೊಂದಿಕೆಯಾಗುವ ಜನರೊಂದಿಗೆ ಸಂಪರ್ಕ ಮಾಡಿ.

ಕರ್ಕ ರಾಶಿ :- ಮನೆಯಲ್ಲಿ ಹೊಸ ಬದಲಾವಣೆ ಕೆಲಸಗಳು ಮುಂದೂಡಲ್ಪಡುತ್ತವೆ. ಗುತ್ತಿಗೆದಾರರಿಗೆ ಏಕಾಗ್ರತೆ ಅತ್ಯಗತ್ಯ. ಮಹಿಳೆಯರು ದ್ವಿಚಕ್ರ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಬೇಕು. ಪ್ರಮುಖ ವ್ಯವಹಾರಗಳಲ್ಲಿ ಅಡಚಣೆಗಳು ದೂರವಾಗುತ್ತವೆ. ಬರಲಿರುವ ಹಣದಿಂದ ಉಳಿತಾಯದ ಕಡೆಗೆ ಆಲೋಚನೆಗಳು ಇರುತ್ತದೆ.

ಸಿಂಹ :- ತೆಂಗಿನಕಾಯಿ, ಹಣ್ಣು, ಹೂವಿನ ವ್ಯಾಪಾರಿಗಳಿಗೆ ಲಾಭದಾಯಕ. ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿರುವವರು ವಿಜ್ಞಾನಿಗಳ ಸಲಹೆ ಸೂಚನೆ ಪಾಲಿಸುವುದು ಒಳ್ಳೆಯದು. ಸಾಲ ಮಾಡಿಕೊಳ್ಳಲಿದ್ದೀರಿ. ನ್ಯಾಯಾಲಯದ ವಿಚಾರಗಳಲ್ಲಿ  ಮುನ್ನಡೆ. 

ಕನ್ಯಾ :- ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದರೂ ನಿಧಾನವಾಗಿ ಬಗೆಹರಿಯಲಿದೆ. ಇತರರು ನಿಮ್ಮ ಸಾಮರ್ಥ್ಯವನ್ನು ನಂಬುತ್ತಾರೆ. ಮಹಿಳೆಯರು ಇತರರೊಂದಿಗೆ ಹೆಚ್ಚು ಮಾತನಾಡಲು ಇಷ್ಟಪಡದಿರಬಹುದು. ಸರ್ಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸದ ಯಶಸ್ಸಿಗೆ ನೀವು ಪರಿಶ್ರಮಪಡಬೇಕಾಗುತ್ತದೆ. ಬಾಯಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ತುಲಾ:- ಪರರಿಗೆ ವಾಹನ ಕೊಟ್ಟು ತೊಂದರೆಗೆ ಸಿಲುಕುವಿರಿ. ವ್ಯಾಪಾರಗಳು ಹೊಸ ಯೋಜನೆಗಳೊಂದಿಗೆ ಖರೀದಿದಾರರನ್ನು ಆಕರ್ಷಿಸುತ್ತಾರೆ. ಯಾರನ್ನೂ ಅತಿಯಾಗಿ ನಂಬುವುದು ಒಳ್ಳೆಯದಲ್ಲ. ಮಕ್ಕಳಿಗಾಗಿ ಖರ್ಚುವೆಚ್ಚ ಮಾಡಬೇಕಾಗುತ್ತದೆ.

ವೃಶ್ಚಿಕ ರಾಶಿ :- ಸ್ತ್ರೀಯರು ಸಣ್ಣಮಟ್ಟಿನ ಅನಾರೋಗ್ಯದಿಂದ ಬಳಲಬಹುದು. ವಿದೇಶಕ್ಕೆ ಹೋಗುವ ಪ್ರಯತ್ನಗಳು ಫಲ ನೀಡುತ್ತವೆ. ಸಾಲ ಬಾಕಿ ವಸೂಲಿ ಮಾಡಲಿದ್ದೀರಿ. ಹಣವನ್ನು ಉಳಿಸುವ ನಿಮ್ಮ ಆಲೋಚನೆಗೆ ಹಿನ್ನಡೆಯಾದೀತು. ಸಹಾಯಕ್ಕಾಗಿ ನಿಮ್ಮ ಸಂಬಂಧಿಕರನ್ನು ಕೇಳುವ ಬದಲು, ಪರ್ಯಾಯವನ್ನು ನೀವೇ ಕಂಡುಕೊಳ್ಳುವುದು ಉತ್ತಮ.

ಧನು ರಾಶಿ :- ಉದ್ಯೋಗಸ್ಥರಿಗೆ ವ್ಯವಹಾರಗಳಲ್ಲಿ ಮುನ್ನಡೆ.  ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರಿಗೆ ಕೌಶಲ್ಯ ಮತ್ತು ಏಕಾಗ್ರತೆಯ ಅಗತ್ಯವಿರುತ್ತದೆ. ಅಕಾಲಿಕ ಆಹಾರ ಮತ್ತು ವಿಶ್ರಾಂತಿ ಕೊರತೆಯಿಂದ ಆರೋಗ್ಯವು ಏರುಪೇರಾದೀತು. ವಿದ್ಯಾರ್ಥಿಗಳು ಕ್ರಮೇಣ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಾರೆ.

ಮಕರ:- ಪಾಲುದಾರಿಕೆ ಉದ್ಯಮಗಳಿಂದ ಮುನ್ನಡೆ ಕಂಡುಕೊಳ್ಳಲಿದ್ದೀರಿ. ನಿಮ್ಮ ಆಂತರಿಕ ಸಮಸ್ಯೆಗಳು ನಿಧಾನವಾಗಿ ಪರಿಹಾರವಾಗಲಿದೆ. ಸಂಸಾರದಲ್ಲಿ ಸಣ್ಣ ಪುಟ್ಟ ಕಲಹಗಳು ಬರುವ ಸಂಭವವಿದ್ದು, ಎಚ್ಚರಿಕೆಯಿಂದಿರಿ. ಆಧ್ಯಾತ್ಮಿಕ ವಿಷಯಗಳ ಮೇಲೆ ಗಮನ ಹರಿಯಲಿದೆ. ಸರ್ಕಾರಿ ನೌಕರರು ವರ್ಗಾವಣೆ ಪಡೆಯಬಹುದು.

ಕುಂಭ :- ಸ್ತ್ರೀಯರ ಮರೆವು ಮತ್ತು ನಿರ್ಲಕ್ಷ್ಯದಿಂದ ಬೆಲೆಬಾಳುವ ವಸ್ತುಗಳ ಕಾಣೆಯಾಗುವ ಸಂಭವವಿದೆ. ನಿರುದ್ಯೋಗಿಗಳಿಗೆ ಸಂದರ್ಶನಗಳಲ್ಲಿ ಏಕಾಗ್ರತೆ ಮತ್ತು ಕ್ರಿಯಾತ್ಮಕತೆ ಅಗತ್ಯ. ರಾಜಕಾರಣಿಗಳು ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಸಹೋದ್ಯೋಗಿಗಳೊಂದಿಗಿನ ಸಭೆಗಳು ಫಲಪ್ರದವಾಗಬಹುದು.

ಮೀನ :- ಇತರರನ್ನು ಕೀಳಾಗಿ ನಡೆಸಿಕೊಳ್ಳುವುದರಿಂದ ಸಮಸ್ಯೆಗಳನ್ನು ಎದುರಿಸಬೇಕಾದೀತು. ಹಠಕ್ಕೆ ಬಿದ್ದು ನಿರ್ಧಾರಗಳನ್ನು ಮಾಡಲು ಹೋಗಬೇಡಿ. ಬ್ಯಾಂಕ್ ವ್ಯವಹಾರಗಳು ಮಂದಗತಿಯಲ್ಲಿ ಇರುತ್ತವೆ. ನಿಮ್ಮ ವಾಕ್ಚಾತುರ್ಯ ಮತ್ತು ಬುದ್ಧಿವಂತಿಕೆಯನ್ನು ಗುರುತಿಸಲಾಗುತ್ತದೆ. ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳ ಸಾಧ್ಯತೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?