Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 7 ಆಗಸ್ಟ್ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಮಾನಸಿಕ ನೆಮ್ಮದಿಗಾಗಿ ದೇವಾಲಯ ಸಂದರ್ಶನ ಮಾಡಲಿದ್ದೀರಿ. ಇಷ್ಟಮಿತ್ರರನ್ನು ಭೇಟಿಯಾಗುವ ಯೋಗ. ಸಂಗಾತಿಯ ಧೋರಣೆ ಅಸಮಾಧಾನಕ್ಕೆ ಕಾರಣವಾದೀತು. ತಾಳ್ಮೆ ತಂದುಕೊಳ್ಳಿ.

ವೃಷಭ: ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆದಾಯದಲ್ಲಿ ಅತೃಪ್ತಿ ಭಾವ ಕಾಡಲಿದೆ. ಹಣ ಗಳಿಕೆಗೆ ಹೊಸ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಮಿಥುನ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಗುರುಹಿರಿಯರ ಆಶೀರ್ವಾದದೊಂದಿಗೆ ಹೊಸ ಕೆಲಸಕ್ಕೆ ಕೈ ಹಾಕುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಬೇರೆಯವರಿಂದ ಮುಚ್ಚಿಟ್ಟ ರಹಸ್ಯಗಳು ಬಯಲಾಗುವ ಸಮಯ. ಕೆಲಸದ ಮೇಲಿನ ನಿಮ್ಮ ಅಸಡ್ಡೆ ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಲಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ.

ಸಿಂಹ: ನಾಲ್ಕು ಜನರ ಮಧ್ಯೆ ನಿಮ್ಮ ನಾಯಕತ್ವದ ಗುಣ ಎದ್ದು ಕಾಣಲಿದೆ. ಹಿರಿಯರಿಗೆ ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುದುವು. ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಮುನ್ನಡೆ ಸಿಗುವುದು.

ಕನ್ಯಾ: ಇಷ್ಟು ದಿನದ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವ ಸಂದರ್ಭ. ಸಹೋದರಾದಿ ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯಗಳಾಗುವ ಸಾಧ್ಯತೆ. ಮಾತಿನ ಮೇಲೆ ನಿಗಾ ಇರಲಿ. ಮಕ್ಕಳಿಂದ ಸಂತೋಷ.

ತುಲಾ: ಕಾರ್ಯರಂಗದಲ್ಲಿ ನಿಮ್ಮ ಎದುರಾಳಿಗಳನ್ನು ಮೀರಿಸುವ ಹಠ ಕಂಡುಬರಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗುವುದು. ಯಂತ್ರೋಪಕರಣಗಳಿಂದ ತೊಂದರೆ ಎದುರಾಗುವ ಸಾಧ‍್ಯತೆ.

ವೃಶ್ಚಿಕ: ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲು ಖರ್ಚು ವೆಚ್ಚ ಮಾಡಲಿದ್ದೀರಿ. ಇಷ್ಟ ಭೋಜನ ಮಾಡುವ ಯೋಗ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಧನು: ಮೇಲಧಿಕಾರಿಗಳಿಂದ ಕೆಲಸ ಪೂರ್ತಿ ಮಾಡುವ ವಿಚಾರದಲ್ಲಿ ಒತ್ತಡಗಳು ಎದುರಾದೀತು. ಅನಿರೀಕ್ಷಿತವಾಗಿ ಬಂಧು ಮಿತ್ರರ ಭೇಟಿ ಮಾಡುವ ಯೋಗ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ತಾಳ್ಮೆಯಿರಲಿ.

ಮಕರ: ಕ್ರಿಯಾತ್ಮಕ ಕೆಲಸಗಳಿಂದ ಬೇರೆಯವರ ಗಮನ ಸೆಳೆಯಲಿದ್ದೀರಿ. ಭೂಮ್ಯಾದಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಸರಕಾರೀ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಂಡುಬರಲಿದೆ.

ಕುಂಭ: ಸಾಂಸಾರಿಕವಾಗಿ ಸುಖ, ಸಮೃದ್ಧಿ ಕಂಡುಬರಲಿದೆ. ಮಹಿಳೆಯರು ವಾಕ್ಚತುರತೆಯಿಂದ ಮೇಲುಗೈ ಸಾಧಿಸಲಿದ್ದಾರೆ. ಸರಕಾರಿ ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ ಮಾಡಲಿದ್ದೀರಿ.

ಮೀನ: ಬಹಳ ದಿನಗಳ ನಂತರ ಆತ್ಮೀಯರನ್ನು ಭೇಟಿಯಾಗುವ ಯೋಗ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ದಾಂಪತ್ಯದಲ್ಲಿ ಮಧ‍್ಯಮ ಸುಖ ಕಂಡುಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?