ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಉದ್ಯೋಗ, ವ್ಯವಹಾರದಲ್ಲಿ ಅನಿರೀಕ್ಷಿತ ಬದಲಾವಣೆಗೆ ಸಿದ್ಧರಾಗಬೇಕಾಗುತ್ತದೆ. ಹೊಸ ಮಿತ್ರರಿಂದ ನಿಮಗೆ ಉಪಕಾರವಾದೀತು. ಸಾಂಸಾರಿಕವಾಗಿ ತಾಳ್ಮೆ ಅಗತ್ಯ. ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.
ವೃಷಭ: ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಹಣಕಾಸಿನ ಖರ್ಚು ವೆಚ್ಚಗಳಿದ್ದರೂ ಅಷ್ಟೇ ಆದಾಯವೂ ಇರಲಿದೆ. ದೇವತಾ ಪ್ರಾರ್ಥನೆ ಮಾಡಿ.
ಮಿಥುನ: ವ್ಯಾಪಾರೀ ವರ್ಗದವರಿಗೆ ಉನ್ನತಿಯ ಯೋಗ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಪಾಲುದಾರಿಕಾ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಸಿಗಲಿವೆ.
ಕರ್ಕಟಕ: ಕಾರ್ಯರಂಗದಲ್ಲಿ ಪರಿಶ್ರಮದಾಯಕ ದಿನವಾಗಿರಲಿದೆ. ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭಿಸಲಿದೆ. ಕಿರು ಸಂಚಾರ ಮಾಡಲಿದ್ದೀರಿ.
ಸಿಂಹ: ಕೆಲಸದ ನಿಮಿತ್ತ ಅನ್ಯ ಊರಿಗೆ ಸಂಚರಿಸುವ ಅನಿವಾರ್ಯತೆ ಎದುರಾಗಲಿದೆ. ಆಸ್ತಿ ಖರೀದಿ ಯೋಗ ಸದ್ಯದಲ್ಲೇ ಕೂಡಿಬರುವುದು. ಜಲೋತ್ಪನ್ನಗಳ ವ್ಯವಹಾರ ಮಾಡುವವರಿಗೆ ಕೊಂಚ ಹಿನ್ನಡೆಯಾದೀತು. ತಾಳ್ಮೆಯಿರಲಿ.
ಕನ್ಯಾ: ನಿಮ್ಮಲ್ಲಿರುವ ಕ್ರಿಯಾತ್ಮಕ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಿದ್ಧೀರಿ. ಸಂಗಾತಿಯ ಸಹಕಾರ ಸಿಗುವುದು. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆಗಳ ಮೂಲಕ ಸಂತೋಷ ನೀಡಲಿದ್ದೀರಿ. ಅನಗತ್ಯ ಚಿಂತೆ ಬೇಡ.
ತುಲಾ: ಹೊಸದಾಗಿ ಮದುವೆಯಾಗಿದ್ದವರಿಗೆ ಮಧು ಚಂದ್ರ ಯೋಗ. ಕೃಷಿಕರಿಗೆ ಬೆಳೆ ನಷ್ಟ ಭೀತಿ. ಧನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಹಿರಿಯರಿಗೆ ದೇವತಾ ಕಾರ್ಯಗಳಿಂದ ನೆಮ್ಮದಿ.
ವೃಶ್ಚಿಕ: ಗೃಹೋಪಯೋಗಿ ವಸ್ತುಗಳ ಖರೀದಿ ಯೋಗ. ಉತ್ತಮ ವಾಕ್ಚತುರತೆ ಪ್ರದರ್ಶಿಸಲಿದ್ದೀರಿ. ಪಾಲುದಾರರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಮಾಡುವ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಧನು: ಮಕ್ಕಳ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ವಿದ್ಯಾರ್ಥಿಗಳು ಹೊಸ ಪರೀಕ್ಷೆಗಳಿಗೆ ತಯಾರಿ ನಡೆಸಲಿದ್ದಾರೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು. ದೇವತಾ ಪ್ರಾರ್ಥನೆ ಮಾಡಿ.
ಮಕರ: ಬಹಳ ದಿನಗಳ ನಂತರ ಆಪ್ತರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಸಾಹಸ ಪ್ರವೃತ್ತಿಯಿಂದ ಕೂಡಿದ ದಿನ. ಹಣ ಗಳಿಕೆಯ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ದಾಂಪತ್ಯದಲ್ಲಿ ಮಧ‍್ಯಮ ಸುಖವಿರಲಿದೆ.
ಕುಂಭ: ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ ಅಗತ್ಯ. ಆಪ್ತರೊಂದಿಗೆ ಮನಸ್ಸಿನ ಮಾತು ಹಂಚಿಕೊಳ್ಳಲಿದ್ದೀರಿ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ದಿನದಂತ್ಯಕ್ಕೆ ನೆಮ್ಮದಿಯಿರಲಿದೆ.
ಮೀನ: ಎಷ್ಟೇ ಸಂಪಾದನೆಯಿದ್ದರೂ ಮನಸ್ಸಿಗೆ ತೃಪ್ತಿಯಿರದು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದು ಉತ್ತಮ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಬಂಧು ಮಿತ್ರರ ಭೇಟಿ ಸಾಧ‍್ಯತೆ.