ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ವ್ಯಾವಹಾರಿಕವಾಗಿ ನಿಮ್ಮ ಹಿತಶತ್ರುಗಳಿಂದ ತೊಂದರೆಗಳು ಎದುರಾದೀತು. ಸಂಗಾತಿಯೊಂದಿಗೆ ಅನಗತ್ಯ ಮಾತು, ವಾದ ಬೇಡ. ಮಾತಿನ ಮೇಲೆ ನಿಗಾ ಇರಲಿ.
ವೃಷಭ: ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ಯೋಗ್ಯತೆಗೆ ಅನುಸಾರವಾಗಿ ಉದ್ಯೋಗ ಲಭಿಸಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು.
ಮಿಥುನ: ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿಯಿರಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಕಾರ್ಯರಂಗದಲ್ಲಿ ಮೇಲಧಿಕಾರಿಗಳಿಂದ ಒತ್ತಡ ಕಂಡುಬಂದೀತು. ಕಿರು ಸಂಚಾರ ಮಾಡಲಿದ್ದೀರಿ.
ಕರ್ಕಟಕ: ದೂರದ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ. ಹಣಕಾಸಿನ ಹರಿವಿಗೆ ತೊಂದರೆಯಾಗದು. ವ್ಯಾಪಾರೀ ವರ್ಗದವರಿಗೆ ಲಾಭ ಕಂಡುಬರಲಿದೆ.
ಸಿಂಹ: ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಆರ್ಥಿಕವಾಗಿ ಇತರರಿಗೆ ಸಹಾಯ ಮಾಡಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.
ಕನ್ಯಾ: ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣವಿರಲಿದೆ. ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟು ಅಗತ್ಯ. ಹಿರಿಯರಿಂದ ಮಾರ್ಗದರ್ಶನ ಕಂಡುಬರಲಿದೆ. ದಾಂಪತ್ಯದಲ್ಲಿ ಸುಖ, ಸಮೃದ್ಧಿ ಕಂಡುಬರುವುದು. ದೇವತಾ ಪ್ರಾರ್ಥನೆ ಮಾಡಿ.
ತುಲಾ: ಪಾಲುದಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವರಿಗೆ ಲಾಭ ಕಂಡುಬರುವುದು. ಹಣಕಾಸಿನ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶ ಕೊಡಬೇಡಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.
ವೃಶ್ಚಿಕ: ರಾಜಕೀಯ ರಂಗದಲ್ಲಿರುವವರಿಗೆ ವಿಶ್ರಾಂತಿಯ ಸಮಯ. ಕ್ರಯ-ವಿಕ್ರಯ ವ್ಯವಹಾರಗಳಲ್ಲಿ ಲಾಭ ಕಂಡುಬರಲಿದೆ. ಮನರಂಜನಾ ವೃತ್ತಿಯಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗ. ಹಿರಿಯರೊಂದಿಗೆ ಸಂಘರ್ಷ ಬೇಡ.
ಧನು: ಬಹಳ ದಿನಗಳ ನಂತರ ಆತ್ಮೀಯರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಆದಾಯದಷ್ಟೇ ಖರ್ಚೂ ಇರಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಕಟ್ಟಡ ಕಾಮಗಾರಿ ಕೆಲಸಕ್ಕೆ ಚಾಲನೆ ನೀಡಲಿದ್ದೀರಿ.
ಮಕರ: ಭೂಮ್ಯಾದಿ ವ್ಯವಹಾರಗಳಲ್ಲಿ ಲಾಭ ಕಂಡುಬರಲಿದೆ. ಸರಕಾರೀ ವೃತ್ತಿಯಲ್ಲಿರುವವರಿಗೆ ಕೊಂಚ ಬಿಡುವು ಸಿಕ್ಕೀತು. ಹೊಸ ವ್ಯವಹಾರಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಉತ್ತಮ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.
ಕುಂಭ: ಉದ್ಯೋಗ, ವ್ಯವಹಾರದಲ್ಲಿ ಸಹೋದ್ಯೋಗಿಗಳ ಸಹಕಾರ ಕಂಡುಬರಲಿದೆ. ಹಣಕಾಸಿನ ವಿಚಾರದಲ್ಲಿ ಗೊಂದಲಗಳಾಗದಂತೆ ಎಚ್ಚರಿಕೆ ವಹಿಸಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ.
ಮೀನ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಯೋಗ. ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭವಾದೀತು. ಸಾಂಸಾರಿಕವಾಗಿ ಮಧ್ಯಮ ಸುಖವಿರಲಿದೆ. ವಿದ್ಯಾರ್ಥಿಗಳಿಗೆ ಸವಾಲುಗಳು ಎದುರಾದೀತು.