ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಉತ್ತಮ ಧನಾರ್ಜನೆಯಿದ್ದರೂ ಖರ್ಚಿನ ಬಗ್ಗೆ ಚಿಂತೆಯಾಗಲಿದೆ. ನೆರೆಹೊರೆಯವರೊಡನೆ ಬಾಂಧವ್ಯ ವೃದ್ಧಿಗೆ ಮುಂದಾಗಲಿದ್ದೀರಿ. ಯಂತ್ರೋಪಕರಣಗಳಿಂದ ತೊಂದರೆ ಸಾಧ‍್ಯತೆ. ಆಪ್ತರನ್ನು ಭೇಟಿಯಾಗಲಿದ್ದೀರಿ.
ವೃಷಭ: ನೀವು ಬಯಸಿದ್ದು ಒಂದು ಆಗುವುದು ಇನ್ನೊಂದು ಎಂಬ ಪರಿಸ್ಥಿತಿಯಾಗಲಿದೆ. ಕಾರ್ಯರಂಗದಲ್ಲಿ ಮೇಲಧಿಕಾರಿಗಳಿಂದ ಒತ್ತಡ ಎದುರಾಗಲಿದೆ. ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ.
ಮಿಥುನ: ವಿಶೇಷ ವ್ಯಕ್ತಿಗಳು ನಿಮ್ಮ ಜೀವನಕ್ಕೆ ಹೊಸ ತಿರುವು ನೀಡಲಿದ್ದಾರೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಸಹೋದರಾದಿ ಸಂಬಂಧಿಗಳ ಜೊತೆ ಸಂಬಂಧ ಸುಧಾರಣೆಯಾಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.
ಕರ್ಕಟಕ: ಉದ್ಯೋಗ ರಂಗದಲ್ಲಿ ನಿರೀಕ್ಷಿತ ಸ್ಥಾನ ಮಾನ ಯೋಗ. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಅನಗತ್ಯ ಚಿಂತೆ ಬೇಡ.
ಸಿಂಹ: ಮಾತಿನ ಮೇಲೆ ಹಿಡಿತವಿರಲಿ. ದೇಹಾರೋಗ್ಯದ ವಿಚಾರದಲ್ಲಿ ಸುಧಾರಣೆ ಕಂಡುಬರಲಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಬೇಕಾಗುತ್ತದೆ. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆ ಕಂಡುಬರಲಿದೆ.
ಕನ್ಯಾ: ನೂತನ ಮಿತ್ರರನ್ನು ಸಂಪಾದಿಸಲಿದ್ದೀರಿ. ಬಂಧು ಮಿತ್ರರಿಂದ ಸಹಕಾರ ಕಂಡುಬರಲಿದೆ. ಆಸ್ತಿ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ. ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ತುಲಾ: ಜಲೋತ್ಪನ್ನಗಳ ಕ್ರಯ-ವಿಕ್ರಯ ವ್ಯವಹಾರ ಮಾಡುವವರಿಗೆ ಮುನ್ನಡೆ ಯೋಗ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ದೇವತಾ ಕಾರ್ಯಗಳಲ್ಲಿ ಆಸಕ್ತಿ ಕಂಡುಬರುವುದು.
ವೃಶ್ಚಿಕ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಲಾಭವಾಗಲಿದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಬಂಧು ಮಿತ್ರರ ಸಮಾಗಮವಾಗಲಿದೆ. ಕೌಟುಂಬಿಕವಾಗಿ ಸುಖ, ಸಂತೋಷವಿರಲಿದೆ. ಚಿಂತೆ ಬೇಡ.
ಧನು: ಸಂಗಾತಿಯ ಕೆಲವೊಂದು ವಿಚಾರಗಳಿಗೆ ತಕರಾರು ತೆಗೆಯುವಿರಿ. ಮಾತಿನ ಮೇಲೆ ಹಿಡಿತವಿರಲಿ. ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆ ಬೇಡ. ಕುಟುಂಬ ಸಮೇತ ಪ್ರಯಾಣ ಮಾಡಲಿದ್ದೀರಿ.
ಮಕರ: ನಿಮಗೆ ಬರಬೆಕಾಗಿದ್ದ ಬಾಕಿ ಹಣ ಸಂದಾಯವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ.
ಕುಂಭ: ನಿಮ್ಮ ವಾಕ್ಚತುರತೆಯಿಂದ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಕಂಡುಬರಲಿದೆ. ವಿಶೇಷ ಭೋಜನ ಮಾಡುವ ಯೋಗ. ವಾಹನ, ಭೂಮಿ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು.
ಮೀನ: ಧನಾರ್ಜನೆಗಾಗಿ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಸಂಗಾತಿಯ ಸಲಹೆ ಪಾಲಿಸುವುದು ಉತ್ತಮ. ಬಂಧು ಮಿತ್ರರ ಆಗಮನ ಸಾಧ‍್ಯತೆ. ವ್ಯವಹಾರ ನಿಮಿತ್ತ ಸಂಚಾರ ಮಾಡಬೇಕಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.