ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 9 ಮೇ 2023 (07:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನೂತನ ಮಿತ್ರರ ಸಮಾಗಮ. ಆಪ್ತರೊಂದಿಗೆ ಸಂತೋಷದಿಂದ ಕಾಲ ಕಳೆಯುವ ಯೋಗ ನಿಮ್ಮದಾಗಲಿದೆ. ವೈವಾಹಿಕ ಜೀವನದಲ್ಲಿ ಭಿನ್ನಾಬಿಪ್ರಾಯಗಳು ಬಾರದಂತೆ ಎಚ್ಚರಿಕೆ ವಹಿಸಬೇಕು. ತಾಳ್ಮೆಯಿರಲಿ.

ವೃಷಭ: ಕೆಲಸ ಕಾರ್ಯಗಳಿಗೆ ಆಪ್ತರ ಸಹಾಯ ಪಡೆಯಲಿದ್ದೀರಿ. ಸರಕಾರೀ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಉತ್ತಮ ಧನಾರ್ಜನೆಗೆ ಅವಕಾಶಗಳು ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧಗಳು ಕೂಡಿಬರಲಿದೆ.

ಮಿಥುನ: ಸಹೋದರಾದಿ ವರ್ಗದವರಿಗೆ ಸಹಾಯ ಮಾಡುವ ಮನೋಭಾವ ತೋರಲಿದ್ದೀರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಐಡಿಯಾಗಳು ಬರಲಿವೆ.

ಕರ್ಕಟಕ: ಮಕ್ಕಳಿಂದ ನಿಮ್ಮ ಸಂತೋಷ ವೃದ್ಧಿಯಾಗಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬಂದೀತು. ಪಾಲುದಾರರೊಂದಿಗೆ ಸಂಘರ್ಷವಾಗದಂತೆ ಎಚ್ಚರಿಕೆ ವಹಿಸಿ.

ಸಿಂಹ: ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ತಾಂತ್ರಿಕ ವೃತ್ತಿಯವರಿಗೆ  ಬಿಡುವಿಲ್ಲದ ಕೆಲಸದಿಂದ ದೇಹಾಯಾಸವಾದೀತು. ಮಕ್ಕಳಿಗೆ ಉಡುಗೊರೆ ಮೂಲಕ ಸಂತೋಷ ನೀಡಲಿದ್ದೀರಿ.

ಕನ್ಯಾ: ಸಹೋದ್ಯೋಗಿಗಳಿಗೆ ಸಲಹೆ ನೀಡುವ ಮೂಲಕ ಸಹಾಯ ಮಾಡಲಿದ್ದೀರಿ. ಸಂಗಾತಿಯ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಮಕ್ಕಳಿಂದ ಸಂತೋಷ ಸಿಗಲಿದೆ. ಕಿರು ಸಂಚಾರ ಮಾಡಬೇಕಾಗುತ್ತದೆ.

ತುಲಾ: ಸಾಲ ಮಾಡಿದ್ದವರಿಗೆ ಮರು ಪಾವತಿ ಚಿಂತೆ ಕಾಡೀತು. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆಯಿರಲಿ.

ವೃಶ್ಚಿಕ: ನೀವು ಇಂದು ಕೈಗೊಳ್ಳುವ ತೀರ್ಮಾನಗಳು ನಿಮ್ಮ ಭವಿಷ್ಯಕ್ಕೆ ಪೂರಕವಾಗಲಿದೆ. ಹೊಸ ಕೆಲಸಗಳಿಗೆ ಕೈ ಹಾಕುವ ಮುನ್ನ ಹಿರಿಯರ ಸಲಹೆ ಪಡೆಯಿರಿ. ದೇವತಾ ಕಾರ್ಯಗಳಿಗೆ ನೇತೃತ್ವ ವಹಿಸಲಿದ್ದೀರಿ.

ಧನು: ಮನೆಯಲ್ಲಿ ನಿಮ್ಮ ಅಗತ್ಯತೆ ಇತರರ ಅರಿವಿಗೆ ಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಯೋಗ. ಹಣಕಾಸಿನ ವಿಚಾರದಲ್ಲಿ ಕಟ್ಟು ನಿಟ್ಟು ಅಗತ್ಯ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ಮಕರ: ಸಾಲ ಮಾಡಿಯಾದರೂ ತುಪ್ಪ ತಿನ್ನುವ ಬಯಕೆಯಾಗಲಿದೆ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ವಾಕ್ಚತುರತೆಯಿಂದ ಕಾರ್ಯಸಾಧನೆ ಮಾಡಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಕುಂಭ: ವೃತ್ತಿ ಜೀವನದಲ್ಲಿ ಮುನ್ನಡೆಯಿದ್ದರೂ ಒಂದು ರೀತಿಯ ಅತೃಪ್ತಿ ಕಾಡೀತು. ಸಂಗಾತಿಯೊಂದಿಗೆ ಮನಸ್ಸಿನ ಮಾತು ಹಂಚಿಕೊಳ್ಳಲಿದ್ದೀರಿ. ಸರಕಾರೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ದಿನದಂತ್ಯಕ್ಕೆ ನೆಮ್ಮದಿಯಾಗುವುದು.

ಮೀನ: ಹಿರಿಯರಿಗೆ ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾದೀತು. ಕುಟುಂಬ ಸದಸ್ಯರ ಶ್ರೇಯಸ್ಸಿಗಾಗಿ ಕೆಲವೊಂದು ಕೆಲಸ ಮಾಡಬೇಕಾಗುತ್ತದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆ. ದೇವತಾ ಪ್ರಾರ್ಥನೆ ಮಾಡಿ.

  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಬುಧವಾರ ಗಣೇಶನ ಅನುಗ್ರಹಕ್ಕೆ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments