ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 8 ಮೇ 2023 (06:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಅಧಿಕ ಧನವ್ಯಯವಾಗಲಿರುವ ದಿನವಿಂದು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಕಂಡುಬಂದೀತು. ಹೊಸ ವ್ಯವಹಾರಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಉತ್ತಮ ಧನಾಗಮನವಾಗಲಿದ್ದರೂ ಖರ್ಚಿಗೆ ಹಲವು ದಾರಿಗಳಾದೀತು. ಮನೆ, ವಾಹನ ರಿಪೇರಿ ಕೆಲಸಗಳಿಗೆ ಕೈ ಹಾಕಬೇಕಾಗುತ್ತದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ನೆರೆಹೊರೆಯವರೊಡನೆ ಸಂಬಂಧ ಸುಧಾರಣೆಯಾಗಲಿದೆ. ಅಧ್ಯಯನ ಪ್ರವೃತ್ತರಿಗೆ ಮುನ್ನಡೆಯ ಯೋಗ.  ಧಾರ್ಮಿಕ ಕೆಲಸಗಳಿಗೆ ನೇತೃತ್ವ ವಹಿಸಲಿದ್ದೀರಿ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗುವುದು.

ಕರ್ಕಟಕ: ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗ, ವ್ಯವಹಾರದಲ್ಲಿ ಮೇಲಧಿಕಾರಿಗಳಿಂದ ಪ್ರೋತ್ಸಾಹ ಸಿಗುವುದು. ಹಣಕಾಸಿನ ಹರಿವಿಗೆ ತೊಂದರೆಯಾಗದು. ದೂರ ಸಂಚಾರ ಮಾಡಲಿದ್ದೀರಿ.

ಸಿಂಹ: ನಿಮ್ಮ ಮಾತಿನಿಂದಲೇ ಇತರರಿಗೆ ಮೋಡಿ ಮಾಡಲಿದ್ದೀರಿ. ಸಕಾಲದಲ್ಲಿ ಸನ್ಮಿತ್ರರ ಸಹಾಯ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ದಾಂಪತ್ಯದಲ್ಲಿ ನೆಮ್ಮದಿ.

ಕನ್ಯಾ: ಸಹೋದರರೊಂದಿಗೆ ಸಂತೋಷದ ವಾರ್ತೆ ಕೇಳಿಬರಲಿದೆ. ದಂಪತಿಗಳಲ್ಲಿ ಪರಸ್ಪರ ತಾಳ್ಮೆ ಅಗತ್ಯ. ಮಕ್ಕಳ ವಿಚಾರದಲ್ಲಿ ಚಿಂತೆಯಾದೀತು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ತಾಳ್ಮೆಯಿರಲಿ.

ತುಲಾ: ವ್ಯಾಪಾರಿಗಳಿಗೆ ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ನೂತನ ಮಿತ್ರರ ಭೇಟಿಯಾಗಲಿದ್ದೀರಿ.

ವೃಶ್ಚಿಕ: ಮನೆಯಲ್ಲಿ ಸಣ್ಣ ಪುಟ್ಟ ಸಂಘರ್ಷಗಳಾಗುವ ಸಾಧ‍್ಯತೆ. ಸಹೋದರರಿಂದ ಸಂತೋಷದ ವಾರ್ತೆ ಕೇಳಿಬರುವುದು. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ದೇವತಾ ಪ್ರಾರ್ಥನೆ ಮಾಡಿ.

ಧನು: ಜಲೋತ್ಪನ್ನಗಳ ಕ್ರಯ-ವಿಕ್ರಯದಿಂದ ಲಾಭವಾಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಮಕ್ಕಳಿಗೆ ಸಂತೋಷದಾಯಕ ದಿನವಾಗಿರಲಿದೆ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಮಕರ: ಮಕ್ಕಳ ಜೀವನದ ಬಗ್ಗೆ ಅನಗತ್ಯ ಚಿಂತೆ ಮಾಡುವುದನ್ನು ಬಿಡಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಯಾತ್ರಾರ್ಥಿಗಳಿಗೆ ಅಡೆತಡೆಗಳು ಕಂಡುಬಂದೀತು. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಕುಂಭ: ಸರಕಾರೀ ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯದೊತ್ತಡ ಕಂಡುಬರಲಿದೆ. ಕ್ರಿಯಾತ್ಮಕವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ದೇವತಾ ಕಾರ್ಯಗಳಿಗೆ ಧನವ್ಯಯವಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವಾಣಿಜ್ಯೋದ್ಯಮಿಗಳಿಗೆ ಲಾಭಕರ ದಿನವಾಗಿರಲಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಅಗತ್ಯ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಸಹಸ್ರನಾಮ ಪೂರ್ತಿ ಓದಲು ಕಷ್ಟವಾದರೆ ಇದೊಂದು ಮಂತ್ರ ಪಠಿಸಿ ಸಾಕು

ಸೂರ್ಯಾಷ್ಟಕಂ ಸ್ತೋತ್ರವನ್ನು ಇಂದು ತಪ್ಪದೇ ಓದಿ

ಶನಿ ಸಪ್ತನಾಮಾವಳಿ ಯಾವುದು ಇದನ್ನು ಪಠಿಸುವುದರಿಂದ ಏನು ಫಲ

ಇಂದಿನ ದಿನಭವಿಷ್ಯ: ಈ ರಾಶಿಯವರು ಇಂದು ತುಂಬಾನೆ ಹುಷಾರಾಗಿರಬೇಕು

ಸಂಪತ್ತಿನ ವೃದ್ಧಿಗಾಗಿ ಲಕ್ಷ್ಮೀ ನರಸಿಂಹ ಅಷ್ಟೋತ್ತರ ಸ್ತೋತ್ರ

ಮುಂದಿನ ಸುದ್ದಿ
Show comments