ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 5 ಮಾರ್ಚ್ 2023 (08:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಪೂರ್ವನಿಯೋಜಿತ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಡಬೇಕಾದೀತು. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ.

ವೃಷಭ: ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಸ್ಥಾನ ಮಾನ ಸಿಗಲಿದೆ. ಗುರುಹಿರಿಯರ ಸಲಹೆ ಸೂಚನೆಗಳನ್ನು ಪಾಲಿಸುವುದು ಉತ್ತಮ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಯೋಜನಾ ಬದ್ಧವಾಗಿ ಕೆಲಸ ಮಾಡಿ.

ಮಿಥುನ: ಅಪರಿಚಿತರಿಂದ ನಿಮಗೆ ವಂಚನೆಗೊಳಗಾಗುವ ಸಾಧ‍್ಯತೆ. ಎಚ್ಚರಿಕೆಯಿಂದಿರಿ. ಸಂಗಾತಿಯ ಬಹುದಿನಗಳ ಬೇಡಿಕೆ ಈಡೇರಿಸಲಿದ್ದೀರಿ. ಮಕ್ಕಳೊಂದಿಗೆ ಸಂತೋಷದ ಕಾಲ ಕಳೆಯಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ನಿಮ್ಮನ್ನು ಬಹುವಾಗಿ ಪ್ರೀತಿಸುವ ವ್ಯಕ್ತಿಗಳೊಂದಿಗೆ ಸಮಯ ಕಳೆಯಲಿದ್ದೀರಿ. ಸಾಂಸಾರಿಕವಾಗಿ ಸುಖ, ಸಮೃದ್ಧಿಯ ದಿನವಾಗಿರಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾದೀತು.

ಸಿಂಹ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಕೋರ್ಟು ಕಚೇರಿ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಲಿದ್ದೀರಿ. ಮಕ್ಕಳ ಕೆಲವೊಂದು ತುಂಟಾಟ ನಿಮಗೆ ಕೋಪ ತರಿಸೀತು.

ಕನ್ಯಾ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗೆ ಪರಿಹಾರ ದೊರಕಲಿದೆ. ಸಂಗಾತಿಗೆ ಗೃಹಕೃತ್ಯಗಳಿಂದ ನೆರವಾಗಲಿದ್ದೀರಿ. ಉದ್ಯೋಗ, ವ್ಯವಹಾರದಲ್ಲಿ ಆದಾಯ ಹೆಚ್ಚಳವಾಗಲಿದೆ. ದಿನದಂತ್ಯಕ್ಕೆ ನೆಮ್ಮದಿ.

ತುಲಾ: ಆಪ್ತರ ಕಷ್ಟಗಳಿಗೆ ಸ್ಪಂದಿಸುವ ನಿಮ್ಮ ಗುಣ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಆದರೆ ಊರಿಗೆ ಉಪಕಾರಿಯಾದರೂ ಮನೆಯಲ್ಲಿ ಸಂಗಾತಿಯ ಅಸಮಾಧಾನ ಎದುರಿಸಬೇಕಾದೀತು. ತಾಳ್ಮೆಯಿರಲಿ.

ವೃಶ್ಚಿಕ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಬಹುದಿನಗಳ ನಂತರ ಆಪ್ತರನ್ನು ಭೇಟಿ ಮಾಡುವ ಯೋಗ. ಚಿಂತೆ ಬೇಡ.

ಧನು: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ. ಹಣಕಾಸಿನ ಹರಿವಿದ್ದರೂ ಅಷ್ಟೇ ಖರ್ಚೂ ಇರಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ಮಕ್ಕಳ ಆರೋಗ್ಯ ಚಿಂತೆಯಾದೀತು.

ಮಕರ: ಧಾರ್ಮಿಕ ಹರಕೆ, ಕಾರ್ಯಗಳ ನಿಮಿತ್ತ ದೀರ್ಘ ಪ್ರಯಾಣ ಮಾಡಬೇಕಾದೀತು. ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಆಸ್ತಿ ವಿಚಾರದಲ್ಲಿ ಅಡೆತಡೆಗಳು ಕಂಡುಬಂದೀತು.

ಕುಂಭ: ಸರಕಾರೀ ನೌಕರರು ಬಿಡುವಿನ ದಿನದ ಸಂತೋಷ ಅನುಭವಿಸಲಿದ್ದಾರೆ. ಮನಸ್ಸಿಗೆ ಉಲ್ಲಾಸ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಗೃಹ, ವಾಹನ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚವಾದೀತು. ಅನಗತ್ಯ ಚಿಂತೆ ಬೇಡ.

ಮೀನ: ಕ್ರಯ-ವಿಕ್ರಯ ವ್ಯವಹಾರಗಳಲ್ಲಿ ಲಾಭ ಕಂಡುಬರಲಿದೆ. ನೆರೆಹೊರೆಯವರೊಂದಿಗೆ ಹಿಂದಿನ ಮನಸ್ತಾಪ ಮರೆತು ಕೈ ಜೋಡಿಸಿ ಕೆಲಸ ಮಾಡಬೇಕಾಗುತ್ತದೆ. ಮನೆಯಲ್ಲಿ ಆದರಣೀಯರಾಗಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments