ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಅತಿಯಾಗಿ ಇನ್ನೊಬ್ಬರ ಮೇಲೆ ನಿರೀಕ್ಷೆಯಿಟ್ಟುಕೊಂಡಿದ್ದರೆ ನಿರಾಸೆ ಖಂಡಿತಾ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ನಿಮ್ಮ ಬಗ್ಗೆ ಬೇರೆಯವರು ಹಗುರವಾಗಿ ಕಾಣಲು ಅವಕಾಶ ಕೊಡಬೇಡಿ.
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಬೆನ್ನ ಹಿಂದೆ ಪಿತೂರಿ ನಡೆಸುವವರಿರುತ್ತಾರೆ. ನಿಮ್ಮ ಆದರ್ಶಗಳನ್ನು ಮರೆಯಬೇಡಿ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿದೆ. ವಿದೇಶಗಳಿಂದ ಉದ್ಯೋಗಾವಕಾಶಗಳು ಬರಲಿವೆ.
ಮಿಥುನ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಸಾಧನೆಗೆ ತಕ್ಕ ಫಲ ಸಿಗಲಿದೆ. ಹಣಕಾಸಿನ ಹರಿವಿಗೆ ತೊಂದರೆಯಾಗದು. ವಾಹನಾದಿ ಸೌಕರ್ಯಗಳು ನಿಮ್ಮದಾಗಲಿವೆ. ತಾಳ್ಮೆಯಿರಲಿ.
ಕರ್ಕಟಕ: ಕಾರ್ಯರಂಗದಲ್ಲಿ ಇನ್ನೊಬ್ಬರಿಗೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಎಚ್ಚರಿಕೆ ಅಗತ್ಯ.
ಸಿಂಹ: ಹೆಚ್ಚಿನ ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ಸಿಗುವುದು. ಕಿರು ಓಡಾಟ ನಡೆಸಬೇಕಾಗುತ್ತದೆ.
ಕನ್ಯಾ: ಎದುರಾಗಲಿದ್ದ ಬಹುದೊಡ್ಡ ಸಮಸ್ಯೆಯೊಂದು ಕರಗಲಿದೆ. ಸಂಗಾತಿಯ ಸಾಂತ್ವನ ಮನಸ್ಸಿಗೆ ನೆಮ್ಮದಿ ನೀಡುವುದು. ಮಕ್ಕಳಿಗೆ ಅಚ್ಚರಿಯ ಉಡುಗೊರೆ ನೀಡಲಿದ್ದೀರಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ.
ತುಲಾ: ವಿಶೇಷ ವ್ಯಕ್ತಿಗಳು ನಿಮ್ಮ ಜೀವನಕ್ಕೆ ಹೊಸ ತಿರುವು ನೀಡಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಅಸಹಕಾರ ಕಂಡುಬಂದೀತು. ವ್ಯಾಪಾರೀ ವರ್ಗದವರಿಗೆ ಅಡೆತಡೆಗಳಿದ್ದರೂ ದಿನದಂತ್ಯಕ್ಕೆ ಶುಭವಾಗುವುದು.
ವೃಶ್ಚಿಕ: ಅವಿವಾಹಿತರಿಗೆ ಮನೆಯಲ್ಲಿ ವಿವಾಹಕ್ಕೆ ಒತ್ತಡ ಹೆಚ್ಚಾದೀತು. ವಾಹನ ಸಂಚಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.
ಧನು: ಮನೆಗೆ ಸಂಬಂಧಪಟ್ಟಂತೆ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ದೇವತಾ ಪ್ರಾರ್ಥನೆ ಮಾಡಿ.
ಮಕರ: ಸರಕಾರೀ ನೌಕರರಿಗೆ ಕಾರ್ಯದೊತ್ತಡ ಕಂಡುಬಂದೀತು. ಹೊಸ ಜನರ ಭೇಟಿ ಮಾಡಲಿದ್ದೀರಿ. ಯಂತ್ರೋಪಕರಣಗಳ ಕೆಲಸ ಮಾಡುವವರಿಗೆ ಮುನ್ನಡೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಕುಂಭ: ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ ನಿಮ್ಮದಾಗಲಿದೆ. ಮನೆಯ ಮೂಲ ಸೌಕರ್ಯಾಭಿವೃದ್ಧಿಗೆ ಮುಂದಾಗಲಿದ್ದೀರಿ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಮಾತಿನ ಮೇಲೆ ನಿಗಾ ಇರಲಿ.
ಮೀನ: ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಮುನ್ನಡೆ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಉತ್ತಮ ವಾಕ್ಚತುರತೆಯಿಂದ ಕಾರ್ಯಸಾಧನೆ ಮಾಡಲಿದ್ದೀರಿ. ಹಿರಿಯರ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.