ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಆಪ್ತರ ದೇಹಾರೋಗ್ಯದ ಬಗ್ಗೆ ಚಿಂತೆಯಾದೀತು. ನೆರೆಹೊರೆಯವರ ಸಹಾಯಕ್ಕೆ ಧಾವಿಸಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿಯಾದೀತು. ತಾಳ್ಮೆಯಿಲ್ಲದೇ ಕೆಲಸವಾಗದು.
ವೃಷಭ: ಹಿಂದೆ ಒಬ್ಬರಿಂದ ಪಡೆದ ಸಹಾಯಕ್ಕೆ ಪ್ರತ್ಯುಪಕಾರ ಮಾಡುವ ಅವಕಾಶ ಒದಗಿಬರಲಿದೆ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಗುರುಹಿರಿಯರಿಂದ ಸಲಹೆ ಸೂಚನೆಗಳು ಸಿಗಲಿವೆ. ಕಿರು ಸಂಚಾರ ಮಾಡಬೇಕಾಗುತ್ತದೆ.
ಮಿಥುನ: ಉದ್ಯೋಗ, ವ್ಯವಹಾರದಲ್ಲಿ ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ. ಆಸ್ತಿ ವಿಚಾರದಲ್ಲಿ ಮುನ್ನಡೆ ಕಂಡುಬರಲಿದೆ. ತಾಳ್ಮೆಯಿರಲಿ.
ಕರ್ಕಟಕ: ನಿಮ್ಮ ಕೆಲಸ ಕಾರ್ಯಗಳಿಗೆ ಬಂಧು ಮಿತ್ರರಿಂದ ಸಹಕಾರ ಕಂಡುಬರಲಿದೆ. ಆಸ್ತಿ ವಿವಾದಗಳು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಯಲಿವೆ. ದೂರದ ಮಿತ್ರರ ಭೇಟಿಯಾಗಲಿದ್ದೀರಿ. ದಿನದಂತ್ಯಕ್ಕೆ ಸಂತೋಷದ ಸುದ್ದಿ.
ಸಿಂಹ: ಪಾಲುದಾರಿಕಾ ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ಇಷ್ಟಮಿತ್ರರೊಂದಿಗೆ ಸಮಯ ಕಳೆಯುವ ಯೋಗ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲಿದ್ದೀರಿ.
ಕನ್ಯಾ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಾಂಸಾರಿಕವಾಗಿ ಸುಖ ಸಮೃದ್ಧಿ ಕಂಡುಬಂದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.
ತುಲಾ: ಹಣಕಾಸಿನ ವಿಚಾರದಲ್ಲಿ ಅನಗತ್ಯ ವಿವಾದಕ್ಕೆ ಅನುವು ಮಾಡಿಕೊಡಬೇಡಿ. ಸಹೋದ್ಯೋಗಿಗಳಿಗೆ ಸಹಾಯ ಮಾಡಲಿದ್ದೀರಿ. ಅನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ವೃಶ್ಚಿಕ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಕಂಡುಬರಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಮಹತ್ವದ ಯೋಜನೆ ಕಂಡುಬರಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ದೂರ ಸಂಚಾರಕ್ಕೆ ಸಿದ್ಧತೆ.
ಧನು: ಹೊಸದಾಗಿ ಮದುವೆಯಾದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ಹಿರಿಯರ ಮಾತುಗಳನ್ನು ಅಸಡ್ಡೆ ಮಾಡದಿರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗ.
ಮಕರ: ಕೆಲಸ ಕಾರ್ಯಗಳಲ್ಲಿ ಪರಿಶ್ರಮದಿಂದ ದೇಹಾಯಾಸವಾದೀತು. ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಯೋಗ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಆಸ್ತಿ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ.
ಕುಂಭ: ಧಾರ್ಮಿಕ ಚಟುವಟಿಕೆಗಳಿಂದ ನಿಮ್ಮ ಮನಸ್ಸಿನ ಭಾರ ಕಡಿಮೆಯಾದೀತು. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಮನೆಗೆ ಬಂಧು ಮಿತ್ರರ ಆಗಮನವಾಗಲಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ.
ಮೀನ: ಹಣಕಾಸಿನ ವಿಚಾರದಲ್ಲಿ ಆಪ್ತರಿಂದಲೇ ವಂಚನೆಗೊಳಗಾಗುವ ಭೀತಿ ಎದುರಾದೀತು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.