ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಅನಿರೀಕ್ಷಿತ ಧನಸಂಪತ್ತು ನಿಮ್ಮದಾಗುವುದು. ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೀರಿ. ಸ್ವಯಂ ವೃತ್ತಿಯವರಿಗೆ ಮುನ್ನಡೆಯ ಯೋಗ. ಆಸ್ತಿ ವಿಚಾರದಲ್ಲಿ ಹಿರಿಯರ ಮಧ್ಯಸ್ಥಿಕೆ ಪಡೆಯಲಿದ್ದೀರಿ.
ವೃಷಭ: ಕೆಲಸ ಕಾರ್ಯಗಳಲ್ಲಿ ಮುನ್ನಡೆಯಿದ್ದರೂ ಮಾನಸಿಕವಾಗಿ ಒಂದು ರೀತಿಯ ಅತೃಪ್ತಿ ಕಂಡುಬಂದೀತು. ಬೇರೆಯವರ ಕಷ್ಟಕ್ಕೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.
ಮಿಥುನ: ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗ. ಮಹಿಳೆಯರಿಂದ ಸಹಾಯ ಪಡೆಯಲಿದ್ದೀರಿ. ಬಂಧು ಮಿತ್ರರನ್ನು ಭೇಟಿಯಾಗುವ ಯೋಗ. ಹಣಕಾಸಿನ ವಿಚಾರದಲ್ಲಿ ಅಡೆತಡೆ ಇದ್ದರೂ ತೊಂದರೆಯಾಗದು.
ಕರ್ಕಟಕ: ಕಾರ್ಯರಂಗದಲ್ಲಿ ನಿಮ್ಮ ಕನಸುಗಳು ನನಸಾಗಲಿವೆ. ಹಣಕಾಸಿನ ವಿಚಾರದಲ್ಲಿ ಅಪರಿಚಿತರನ್ನು ನಂಬಿ ಮೋಸ ಹೋಗಬೇಡಿ. ಸಾಂಸಾರಿಕವಾಗಿ ಸುಖ ಸಮೃದ್ಧಿ ಕಂಡುಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಸಿಂಹ: ಎಷ್ಟೇ ಕಷ್ಟಗಳಿದ್ದರೂ ಕಾರ್ಯರಂಗದಲ್ಲಿ ನಿಮ್ಮ ಯಶಸ್ಸು ತಡೆಯಲು ಯಾರಿಂದಲೂ ಸಾಧ‍್ಯವಾಗದು. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ವ್ಯಾಪಾರಿಗಳಿಗೆ ಮುನ್ನಡೆಯ ಯೋಗ.
ಕನ್ಯಾ: ಬಹಳ ದಿನಗಳಿಂದ ಬಾಕಿಯಿದ್ದ ಧಾರ್ಮಿಕ ಕಾರ್ಯಗಳನ್ನು ಮಾಡಲು ಮುಂದಾಗಲಿದ್ದೀರಿ. ಕಾರ್ಯನಿಮಿತ್ತ ಪರವೂರಿಗೆ ಸಂಚರಿಸಬೇಕಾಗುತ್ತದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.
ತುಲಾ: ಉನ್ನತ ಸ್ಥಾನಕ್ಕೇರುವ ನಿಮ್ಮ ಕನಸು ಸದ್ಯದಲ್ಲೇ ನನಸಾಗುವುದು. ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಕಂಡುಬರಲಿದೆ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಅನಗತ್ಯ ಚಿಂತೆ ಬೇಡ.
ವೃಶ್ಚಿಕ: ಸರಕಾರೀ ನೌಕರರಿಗೆ ಕಾರ್ಯದೊತ್ತಡ ಕಂಡುಬಂದೀತು. ಮನೆಗೆ ವಿಶೇಷ ಅತಿಥಿಗಳನ್ನು ಸ್ವಾಗತಿಸಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಆದರೆ ಅಷ್ಟೇ ಖರ್ಚು ವೆಚ್ಚಗಳೂ ಇರಲಿವೆ.
ಧನು: ಮನಸ್ಸಿನಲ್ಲಿರುವ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಅನಗತ್ಯ ಮಾತುಗಳಿಂದ ಕೌಟುಂಬಿಕವಾಗಿ ಭಿನ್ನಾಭಿಪ್ರಾಯಗಳು ಬಂದೀತು. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಬಿಡುವು ಸಿಗದು. ತಾಳ್ಮೆಯಿರಲಿ.
ಮಕರ: ಕೌಟುಂಬಿಕವಾಗಿ ಏನೇ ತೀರ್ಮಾನ ಕೈಗೊಳ್ಳುವುದಿದ್ದರೂ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಉತ್ತಮ. ಅಪರಿಮಿತ ಕೆಲಸದಿಂದ ದೇಹಾಯಾಸವಾದೀತು. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.
ಕುಂಭ: ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಒತ್ತು ನೀಡಿದರೆ ಉತ್ತಮ. ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ದಾಂಪತ್ಯದಲ್ಲಿ ಮಧ್ಯಮ ಸುಖ. ನೆರೆಹೊರೆಯವರೊಂದಿಗೆ ಕಿರಿ ಕಿರಿ ಬೇಡ.
ಮೀನ: ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ ಕಂಡುಬಂದರೂ ನಿರೀಕ್ಷಿಸಿದಷ್ಟು ಧನಾದಾಯವಿಲ್ಲದೇ ಬೇಸರವಾದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬಂದೀತು. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.