Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 12 ಜನವರಿ 2023 (08:20 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಮನಸ್ಸಿನ ಸಂತೋಷಕ್ಕೆ ನಿಮ್ಮಲ್ಲೇ ಪರಿಹಾರವಿದೆ. ನೆರೆಹೊರೆಯವರ ಅನಗತ್ಯ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ವೃಷಭ: ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣವಿರಲಿದೆ. ಬಂಧು ಮಿತ್ರರನ್ನು ಭೇಟಿ ಮಾಡಲಿದ್ದೀರಿ. ವ್ಯಾಪಾರೀ ವರ್ಗದವರಿಗೆ ಹಿತಶತ್ರುಗಳ ಕಾಟ ಕಂಡುಬಂದೀತು. ಹೊಸ ಕೆಲಸಕ್ಕೆ ಕೈ ಹಾಕಲು ಇದು ಸೂಕ್ತ ಸಮಯವಲ್ಲ.

ಮಿಥುನ: ಬಹಳ ದಿನಗಳಿಂದ ಉದ್ಯೋಗ ಸಂಬಂಧವಾಗಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಅದಕ್ಕೆ ತಕ್ಕ ಫಲ ಸಿಗಲಿದೆ. ಆಪ್ತರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ವಾಹನ, ಆಸ್ತಿ ಖರೀದಿ ಯೋಗ ಸದ್ಯದಲ್ಲೇ ಕೂಡಿಬರುವುದು.

ಕರ್ಕಟಕ: ಅವಿವಾಹಿತರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿದೆ.  ಮನೋರಂಜನೆಯ ಕೆಲಸಗಳು ನಿಮ್ಮ ಮನಸ್ಸಿಗೆ ಉಲ್ಲಾಸ ನೀಡಲಿದೆ. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ಚಿಂತೆ ಬೇಡ.

ಸಿಂಹ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ಯಶಸ್ಸಿನ ಹಾದಿಯಲ್ಲಿ ಹಲವು ಅಡೆತಡೆಗಳು ಕಂಡುಬಂದೀತು. ಅದನ್ನು ನಿಭಾಯಿಸುವುದನ್ನು ಕಲಿಯಬೇಕಾಗುತ್ತದೆ. ತಾಳ್ಮೆಯಿರಲಿ.

ಕನ್ಯಾ: ಕಾರ್ಯರಂಗದಲ್ಲಿ ಕೀರ್ತಿ ಸಂಪಾದಿಸುವ ಯೋಗ ನಿಮ್ಮದು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಇನ್ನೊಬ್ಬರಿಗೆ ಸಹಾಯ ಮಾಡುವ ಉದಾರಿಗಳಾಗಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಯೋಗವಿದ್ದರೂ ಹಣಕಾಸಿನ ಅಡಚಣೆ ತಲೆನೋವಾಗಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ. ಕಿರು ಸಂಚಾರ ಮಾಡಬೇಕಾಗುತ್ತದೆ.

ವೃಶ್ಚಿಕ: ಸರಕಾರೀ ಕೆಲಸಗಳಲ್ಲಿ ಜಯ ಸಿಗಲಿದೆ. ದಾಯಾದಿ ಕಲಹಗಳು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಯಲಿವೆ. ಸಂಗಾತಿಯ ಪ್ರೀತ್ಯಾದರಗಳಿಗೆ ಪಾತ್ರರಾಗಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.

ಧನು: ಬಹಳ ದಿನಗಳಿಂದ ಬರಬೇಕಾಗಿದ್ದ ಬಾಕಿ ಹಣ ಸಂದಾಯವಾಗಲಿದೆ. ಕೆಲಸದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಆಪ್ತರನ್ನು ಭೇಟಿಯಾಗಲಿದ್ದೀರಿ.

ಮಕರ: ಸಹೋದರಾದಿ ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯಗಳು ಉಪಶಮನವಾಗಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ  ಸಿದ್ಧರಾಗಬೇಕಾಗುತ್ತದೆ. ತಾಂತ್ರಿಕ ವೃತ್ತಿಯವರಿಗೆ ಅಡಚಣೆ ಕಂಡುಬಂದೀತು.

ಕುಂಭ: ಒಳ್ಳೆಯ ಕೆಲಸಕ್ಕೆ ಕೈ ಹಾಕುವಾಗ ನೂರೆಂಟು ವಿಘ್ನಗಳು ಸಾಮಾನ್ಯ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಸ್ಥಾನ ಮಾನ ದೊರೆಯುವುದು.

ಮೀನ: ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗುವ ಸಾಧ‍್ಯತೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ದಾಂಪತ್ಯದಲ್ಲಿ ಮಧ‍್ಯಮ ಸುಖ. ಜವಾಬ್ಧಾರಿಯುತ ನಡೆಯಿಂದ ವ್ಯವಹಾರದಲ್ಲಿ ಅಭಿವೃದ್ಧಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?