Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 21 ಸೆಪ್ಟಂಬರ್ 2022 (07:34 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಅನಿರೀಕ್ಷಿತ ಧನ ಲಾಭವಾಗಲಿದೆ. ಹಿರಿಯರ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ.

ವೃಷಭ: ದೂರದ ಮಿತ್ರರ ಭೇಟಿ ಸಂಭವ. ಸಾಂಸಾರಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಯಂತ್ರೋಪಕರಣಗಳೊಂದಿಗೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ಪಾಲುದಾರಿಕಾ ವ್ಯವಾಹರದಲ್ಲಿ ಲಾಭ ಕಂಡುಬರುವುದು.

ಮಿಥುನ: ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಧನಾರ್ಜನೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಕುಲದೇವರ ಪ್ರಾರ್ಥನೆ ಮಾಡಿ.

ಕರ್ಕಟಕ: ಕಾರ್ಯನಿಮಿತ್ತ ಪರವೂರಿಗೆ ಪ್ರಯಾಣ ಮಾಡುವ ಸಾಧ‍್ಯತೆಯಿದೆ. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರಲಿದೆ. ಸಾಂಸಾರಿಕವಾಗಿ ಸುಖ, ಸಮೃದ್ಧಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ ಕಂಡುಬರಲಿದೆ.

ಸಿಂಹ: ಬಂಧು ಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಕಿರಿ ಕಿರಿಯಾಗುವ ಸಾಧ‍್ಯತೆಯಿದೆ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಸಣ್ಣ ಪ್ರಮಾಣದಲ್ಲಿ ದೇಹಾಯಾಸವಾಗುವ ಸಾಧ‍್ಯತೆಯಿದೆ. ದೇವತಾ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷ ಬೇಡ.

ತುಲಾ: ಬೇರೆಯವರ ಕಷ್ಟಕ್ಕೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಅಪರೂಪದ ಮಿತ್ರರನ್ನು ಭೇಟಿಯಾಗುವ ಯೋಗ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ತಾಳ್ಮೆಯಿರಲಿ.

ವೃಶ್ಚಿಕ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗೆ ಸಿದ್ಧರಾಗಬೇಕಾಗುತ್ತದೆ. ಮಹಿಳೆಯರಿಗೆ ಮಂಗಲ ವಸ್ತ್ರ ಖರೀದಿ ಯೋಗ. ಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆಯ ಯೋಗವಿದೆ.

ಧನು: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂದು ಅನಗತ್ಯ ಚಿಂತೆ ಬೇಡ. ವಿಶೇಷ ಭೋಜನ ಮಾಡುವ ಯೋಗ. ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷ ಬೇಡ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ.

ಮಕರ: ಮಕ್ಕಳಿಗೆ ನೀವು ನೀಡುವ ಸಮಯೋಚಿತ ಸಲಹೆ ಉಪಯೋಗಕ್ಕೆ ಬರಲಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಸಂಗಾತಿಯೊಂದಿಗೆ ಚರ್ಚಿಸಿ ಮುನ್ನಡೆಯಿರಿ.

ಕುಂಭ: ಸರಕಾರಿ ಉದ್ಯೋಗಿಗಳಿಗೆ ಬಡ್ತಿ ಯೋಗ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಆಪ್ತರೊಂದಿಗೆ ಮನದಾಳ ಹಂಚಿಕೊಳ್ಳಲು ಅವಕಾಶ ಸಿಗಲಿದೆ.

ಮೀನ: ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿ ಬರಲಿದೆ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವ ಸಾಧ‍್ಯತೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ