Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಮಂಗಳವಾರ, 20 ಸೆಪ್ಟಂಬರ್ 2022 (07:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಮಾಹಿತಿ ಕೊರತೆಯಿಂದ ಕೆಲವು ತಪ್ಪುಗಳಾಗುವ ಸಂಭವ. ಮೇಲಧಿಕಾರಿಗಳೊಂದಿಗೆ ಕಿರಿ ಕಿರಿಗಳಾದೀತು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನದ ನಿರೀಕ್ಷೆ. ಮಹಿಳೆಯರಿಗೆ ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಲಿದೆ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ನಾಲಿಗೆ ಚಪಲಕ್ಕೆ ಕಡಿವಾಣವಿರಲಿ.

ಮಿಥುನ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ಪಾಲು ಬಂಡವಾಳ ಹೂಡಿಕೆಯಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ. ವ್ಯಾವಹಾರಿಕವಾಗಿ ಶತ್ರು ಬಾಧೆ ಕಂಡುಬಂದೀತು. ಸಂಗಾತಿಯಿಂದ ನೆಮ್ಮದಿ ಸಿಗುವುದು.

ಕರ್ಕಟಕ: ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಾದೀತು. ವ್ಯಾಪಾರ, ವ್ಯವಹಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ.

ಸಿಂಹ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಭೀತಿ. ಮಕ್ಕಳ ವಿಚಾರದಲ್ಲಿ ಅಸಡ್ಡೆ ಮಾಡಬೇಡಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ಕನ್ಯಾ: ವಿಶೇಷವಾದ ಉಡುಗೊರೆಗಳ ಮೂಲಕ ಆಪ್ತರಿಗೆ ಸಂತೋಷ ಕೊಡಲಿದ್ದೀರಿ. ನಿಮ್ಮಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಲಾಭವಾಗಲಿದೆ.

ತುಲಾ: ದೂರದ ಮಿತ್ರರಿಂದ ನಿಮಗೆ ಲಾಭವಾದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳಿಗೆ ಶುಭ ದಿನ. ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ತಾಳ್ಮೆಯಿರಲಿ.

ವೃಶ್ಚಿಕ: ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನಾಲ್ಕಾರು ಬಾರಿ ಯೋಚಿಸಿ ಹೆಜ್ಜೆಯಿಡುವುದು ಉತ್ತಮ. ಕೈ ಹಿಡಿದ ಕೆಲಸ ಪೂರ್ತಿ ಮಾಡದೇ ನೆಮ್ಮದಿ ಸಿಗದು. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಅಧಿಕವಾಗಲಿದೆ.

ಧನು: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಬಹಳ ದಿನಗಳ ನಂತರ ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ವಾಕ್ಚತುರತೆಯಿಂದ ಜನಮನ್ನಣೆ ಪಡೆಯಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಮಕರ: ಹಿರಿಯರಿಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡುವ ಅವಕಾಶ ಸಿಗಲಿದೆ. ಸಂಗಾತಿಯೊಂದಿಗೆ ಅನಗತ್ಯ ವಾದ-ವಿವಾದ ಬೇಡ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ.

ಕುಂಭ: ಕೈ ಹಿಡಿದ ಕೆಲಸಗಳಲ್ಲಿ ಯಶಸ್ಸು ಸಿಗಬೇಕಾದರೆ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ ಮುನ್ನಡೆಯಿರಿ. ಸಂಗಾತಿಯಿಂದ ಸಮಯೋಚಿತ ಸಲಹೆ ಸಿಗಲಿದೆ. ಮನೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಕಂಡಿಬರಲಿದೆ. ಚಿಂತೆ ಬೇಡ.

ಮೀನ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡುಬರಲಿದೆ. ಆರ್ಥಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದೆ. ಮನೆಗೆ ನೆಂಟರಿಷ್ಟರ ಆಗಮನ ಸಾಧ‍್ಯತೆ. ಆಸ್ತಿ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಬೇಕು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ