ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 12 ಜುಲೈ 2022 (07:50 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಹಿರಿಯರಿಂದ ಸುಖ ಸಂತೋಷ ನಿಮ್ಮದಾಗಲಿದೆ. ಯಾವುದೇ ಯೋಜನೆಗಳಿಗೆ ಕೈ ಹಾಕುವ ಮೊದಲು ಪರಾಮರ್ಶಿಸುವುದು ಉತ್ತಮ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ತಾಳ್ಮೆಯಿರಲಿ.

ವೃಷಭ: ಕುಲದೇವರಾಧಾನೆಯಿಂದ ಯಶಸ್ಸು ಸಿಗಲಿದೆ. ವ್ಯವಾಹರದಲ್ಲಿ ಆರ್ಥಿಕವಾಗಿ ಲಾಭ ಕಂಡುಬರಲಿದೆ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಸಹೋದ್ಯೋಗಿಗಳ ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನಡೆ ಕಂಡುಬರಲಿದೆ. ವ್ಯಾಪಾರಿಗಳಿಗೆ ಹಿತಶತ್ರುಗಳ ಕಾಟ ಕಂಡುಬಂದೀತು. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕರ್ಕಟಕ: ಬಂಧು ಮಿತ್ರರ ಸಹಕಾರದಿಂದ ಅಭಿವೃದ್ಧಿ ಕಂಡುಬರಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಸ್ಥಾನ ಮಾನದ ಯೋಗ. ವ್ಯಾಪಾರಿಗಳು ವ್ಯವಹಾರದಲ್ಲಿ ಕಠೋರವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಸಂಪತ್ತು ಪಡೆಯುವ ವಿಚಾರದಲ್ಲಿ ಹೊಸ ಸಾಹಸಕ್ಕೆ ಕೈಹಾಕಲಿದ್ದೀರಿ.

ಕನ್ಯಾ: ಸಾಂಸಾರಿಕವಾಗಿ ಸುಖ ಸಮೃದ್ಧಿಯಿರಲಿದ್ದು, ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಜನರ ಒಡನಾಟದಿಂದ ಮಾನಸಿಕವಾಗಿ ಕೊರೆಯುತ್ತಿದ್ದ ಚಿಂತೆಗಳು ದೂರವಾಗಲಿದೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗ.

ತುಲಾ: ಉದ್ಯೋಗ, ವ್ಯವಹಾರದಲ್ಲಿ ಸುಧಾರಣೆ ಕಂಡುಬರಲಿದ್ದು, ವ್ಯಾಪಾರಿಗಳು ಹೊಸ ಯೋಜನೆಗಳಿಗೆ ಬಂಡವಾಳ ಹಾಕುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿದ್ದೀರಿ. ನಿರುದ್ಯೋಗಿಗಳಿಗೆ ಸಂದರ್ಶನ ಕರೆ ಬರಲಿದ್ದು, ಅವಕಾಶ ಬಳಸಿಕೊಳ್ಳಬೇಕು.

ವೃಶ್ಚಿಕ: ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ತಿಳಿದು ಮುನ್ನಡೆಯುವುದು ಉತ್ತಮ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ. ತಾಳ್ಮೆಯಿರಲಿ.

ಧನು: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನ ನಡೆಸಲಿದ್ದೀರಿ. ಹೊಸದಾಗಿ ಮದುವೆಯಾಗಿದ್ದವರಿಗೆ
ಸುಂದರ ಕ್ಷಣ ಕಳೆಯುವ ಯೋಗ. ವಿಶೇಷ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.

ಮಕರ: ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ಕೆಲಸಗಳನ್ನು ಪೂರ್ತಿ ಮಾಡಲು ಪ್ರಯತ್ನಿಸಲಿದ್ದೀರಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸುವ ನಿಮ್ಮ ಗುಣ ಪ್ರಶಂಸೆಗೊಳಗಾಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಫಲತೆ ಪ್ರಾಪ್ತಿಯಾಗುವುದು.

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇರಲಿದ್ದು, ಉದ್ಯೋಗ ಬದಲಾವಣೆಗೆ ಪ್ರಯತ್ನ ನಡೆಸಲಿದ್ದೀರಿ. ಹಿರಿಯರು ಕೈಲಾದ ರೀತಿಯಲ್ಲಿ ದಾನ ಧರ್ಮ ಮಾಡಲಿದ್ದಾರೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ಮೀನ: ಅರ್ಧಕ್ಕೇ ನಿಂತಿದ್ದ ಕೆಲಸಗಳಿಗೆ ಮರು ಚಾಲನೆ ನೀಡಲಿದ್ದೀರಿ. ಸಾಹಿತ್ಯ, ಕಲಾ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗ. ಸರಕಾರಿ ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ಕುಲದೇವರ ಪ್ರಾರ್ಥನೆಯಿಂದ ನೆಮ್ಮದಿ ಸಿಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಓದಿ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments