Select Your Language

Notifications

webdunia
webdunia
webdunia
webdunia

ಗುರು ಶಾಪ ನಮಗೆ ಯಾವ ರೀತಿ ತಟ್ಟುತ್ತದೆ?

ಗುರು ಶಾಪ ನಮಗೆ ಯಾವ ರೀತಿ ತಟ್ಟುತ್ತದೆ?
ಬೆಂಗಳೂರು , ಸೋಮವಾರ, 11 ಜುಲೈ 2022 (08:40 IST)
ಬೆಂಗಳೂರು: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಸಾಲೇ ಇದೆ. ಆದರೆ ಗುರು ಸ್ಥಾನದಲ್ಲಿರುವವರಿಗೆ ತೊಂದರೆ ಮಾಡಿದರೆ ಆ ಶಾಪ ನಮ್ಮ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ವಿದ್ಯೆ ಕಲಿಸುವ, ಸರಿಯಾದ ದಾರಿಯಲ್ಲಿ ನಡೆಸುವ ನಮ್ಮ ಗುರುಸ್ಥಾನದಲ್ಲಿರುವ ವ್ಯಕ್ತಿಗಳನ್ನು ಆದರದಿಂದ ನೋಡಬೇಕು. ಅವರಿಗೆ ಅಪಮಾನವಾಗುವಂತೆ, ನಿಂದಿಸಿ ಮಾತನಾಡಿದರೆ, ಮಂತ್ರ ದೀಕ್ಷೆ ಪಡೆದು ದಕ್ಷಿಣೆ ನೀಡದೇ ಹೋದರೆ, ಗುರು ವಾಕ್ಯ ಪಾಲಿಸದೇ ಹೋದರೆ ಅದರ ಶಾಪ ನಮಗೆ ತಟ್ಟುತ್ತದೆ.

ಗುರುವಿನ ಶಾಪಕ್ಕೊಳಗಾದವರಿಗೆ ಜೀವನದಲ್ಲಿ ಅಭಿವೃದ್ಧಿಯಾಗದು. ಸಂತಾನ ಭಾಗ್ಯ ಕಷ್ಟವಾಗಬಹುದು. ಅಂತಹವರ ಮಕ್ಕಳಿಗೂ ವಿದ್ಯೆ ತಲೆಗೆ ಹತ್ತದು. ಅನಾರೋಗ್ಯ, ವಂಶಪಾರಂಪರ್ಯವಾಗಿ ಅಧಃಪತನಕ್ಕೊಳಗಾಗುವ ಪರಿಸ್ಥಿತಿ ಬರಬಹುದು. ಹೀಗಾಗಿ ನಮಗೆ ವಿದ್ಯೆ ಕೊಡುವ ಗುರುವನ್ನು ಆದರಣೀಯವಾಗಿ ಕಾಣುವುದು, ಅವರ ಮಾತುಗಳನ್ನು ಪರಿಪಾಲಿಸುವುದು ಮುಖ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ