Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 27 ಜನವರಿ 2022 (08:24 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಕೆಲಸ ಕಾರ್ಯಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ನಿರ್ಧಾರ ಕೈಗೊಳ್ಳುವ ಮುನ್ನ ಸಂಗಾತಿಯೊಂದಿಗೆ ಪರಾಮರ್ಶಿಸಿ. ದೇಹಾರೋಗ್ಯದ ಹೊಸ ಸಮಸ್ಯೆಗಳು ಚಿಂತೆಗೆ ಕಾರಣವಾಗಲಿದೆ.

ವೃಷಭ: ನಿಮ್ಮ ಸುತ್ತಮುತ್ತಲಿದ್ದವರಿಂದಲೇ ವಂಚನೆಗೊಳಗಾಗುವ ಅಪಾಯವಿದೆ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಅನುಭವಕ್ಕೆ ಬರಲಿದೆ. ಪ್ರೇಮಿಗಳಿಗೆ ವಿರಹ ವೇದನೆ ಕಂಡುಬಂದೀತು. ತಾಳ್ಮೆಯಿರಲಿ.

ಮಿಥುನ: ನೀವು ಬಯಸಿದ್ದು ಒಂದು ಆಗುವುದು ಇನ್ನೊಂದು ಎನ್ನುವ ಪರಿಸ್ಥಿತಿ ಎದುರಾಗಲಿದೆ. ವ್ಯಾವಹಾರಿಕವಾಗಿ ಲಾಭ ಮಾಡಿಕೊಳ್ಳಲು ನಾನಾ ದಾರಿಗಳು ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ.

ಕರ್ಕಟಕ: ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಒಳ್ಳೆಯತನ ದುರುಪಯೋಗಪಡಿಸಿಕೊಳ್ಳುವವರಿರುತ್ತಾರೆ. ಎಚ್ಚರಿಕೆಯಲ್ಲಿರಬೇಕು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

ಸಿಂಹ: ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಮೆಚ್ಚಿನ ವ್ಯಕ್ತಿಗಳ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗುವುದು. ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡವರಿಗೆ ಚೇತರಿಕೆ ಕಂಡುಬರುವುದು.

ಕನ್ಯಾ: ನಿಮ್ಮನ್ನು ಅವಗಣಿಸಿದವರಿಗೆ ತಕ್ಕ ಪಾಠ ಕಲಿಸಲಿದ್ದೀರಿ. ಮಹಿಳೆಯರಿಗೆ ಸಾಂಸಾರಿಕ ವಿಚಾರದಲ್ಲಿ ಕುಟುಂಬ ಸದಸ್ಯರ ಅಸಹಕಾರ ಕಂಡುಬರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ.

ತುಲಾ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಹಿಂದೆ ನಿಮ್ಮ ಕಷ್ಟಗಳಿಗೆ ಆಗಿಬಂದವರಿಗೆ ಪ್ರತ್ಯುಪಕಾರ ಮಾಡುವ ಅವಕಾಶ ಸಿಗಲಿದೆ. ವಾಹನ ಖರೀದಿ ವ್ಯವಹಾರ ಮುಂದೂಡುವುದು ಉತ್ತಮ.

ವೃಶ್ಚಿಕ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ಕಾಡದಂತೆ ಎಚ್ಚರಿಕೆ ವಹಿಸಿ. ನಿಮ್ಮ ಯೋಗ್ಯತೆಗೆ ಅನುಸಾರವಾಗಿ ಕೆಲಸ ಸಿಗಲಿದೆ. ಅನ್ಯರ ವಿಚಾರದಲ್ಲಿ ಅನಗತ್ಯ ಮೂಗು ತೂರಿಸುವುದು ಬೇಡ. ದೇವತಾ ಪ್ರಾರ್ಥನೆ ಮಾಡಿ.

ಧನು: ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಭೇಟಿಯಾಗಲಿದೆ. ಕೌಟುಂಬಿಕವಾಗಿ ಸಂತೋಷದಾಯಕ ದಿನಗಳಾಗಲಿವೆ. ಬಹುದಿನಗಳಿಂದ ನೀವು ಅಂದುಕೊಂಡಿದ್ದು ಇಂದು ತಾನಾಗಿಯೇ ನೆರವೇರಲಿದೆ. ಚಿಂತೆ ಬೇಡ.

ಮಕರ: ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ಉದ್ಯೋಗ ಕ್ಷೇತ್ರದಲ್ಲಿ ವೃತ್ತಿ ಮಾತ್ಸರ್ಯ ಕಂಡುಬಂದೀತು. ಹೊಸ ಜನರ ಭೇಟಿಯಿಂದ ನಿಮ್ಮ ಕೆಲಸಕ್ಕೆ ಅನುಕೂಲವಾಗಲಿದೆ. ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ.

ಕುಂಭ: ಸರಕಾರಿ ಉದ್ಯೋಗಿಗಳು ಮುಂಬಡ್ತಿ ಕಾಣಲಿದ್ದಾರೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಮೀನ: ನೆರೆಹೊರೆಯವರ ಚುಚ್ಚು ಮಾತುಗಳು ನಿಮ್ಮ ಮನಸ್ಸು ನೋಯಿಸೀತು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳುವಿರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕುಲದೇವರ ಪ್ರಾರ್ಥನೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ