Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 26 ಜನವರಿ 2022 (08:33 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವ ಯೋಚೆನಗಳಿಂದ ಸಾಂಸಾರಿಕವಾಗಿ ನೆಮ್ಮದಿ ಹಾಳಾದೀತು. ತಾಳ್ಮೆ, ಸಂಯಮ ಅಗತ್ಯ. ಸಂಪತ್ತು, ಧನಾದಾಯ ವೃದ್ಧಿಗೆ ಹೊಸ ದಾರಿಗಳನ್ನು ಹುಡುಕಲಿದ್ದೀರಿ.

ವೃಷಭ: ನಿಮ್ಮ ಹೊಸ ಪ್ರಯತ್ನಗಳಿಗೆ ಮನೆಯವರ ಸಾಥ್ ಸಿಗಲಿದೆ. ಭೂಮಿ ಖರೀದಿ ವ್ಯವಹಾರದಲ್ಲಿ ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಮಿಥುನ: ಸರಕಾರಿ ಉದ್ಯೋಗಿಗಳಿಗೆ ಬಿಡುವಿನ ದಿನದ ಖುಷಿ ಸಿಗುವುದು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ಪಾಲು ಬಂಡವಾಳ ಹೂಡಿಕೆ ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ.

ಕರ್ಕಟಕ: ವೃತ್ತಿರಂಗದಲ್ಲಿ ನಿಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನಗಳು ನಡೆದೀತು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ದೊರೆಯಲಿವೆ.

ಸಿಂಹ: ವಿಶೇಷವಾದ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ಕೋರ್ಟು ಕಚೇರಿ ಕಲಾಪಗಳಿಗೆ ಸಿದ್ಧತೆ ನಡೆಸುವಿರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಇಷ್ಟಭೋಜನ ಮಾಡುವ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಮಕ್ಕಳಿಗೆ ವಿಶೇಷ ಉಡುಗೊರೆ ಮೂಲಕ ಸಂತೋಷ ತರಲಿದ್ದೀರಿ. ವೈಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಶುಭ ದಿನ.

ತುಲಾ: ಮನಸ್ಸಿನಲ್ಲಿರುವ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಜಾಗರೂಕತೆ ಅಗತ್ಯ. ವಾಹನ ಸಂಚಾರದಲ್ಲಿ ಎಚ್ಚರಿಕೆ.

ವೃಶ್ಚಿಕ: ನಿಮ್ಮ ಬಹು ದಿನಗಳ ಕನಸು ನನಸು ಮಾಡಿಕೊಳ್ಳಲಿದ್ದೀರಿ. ಗೃಹ, ವಾಹನ ರಿಪೇರಿ ಇತ್ಯಾದಿ ಕೆಲಸಗಳಿಗೆ ಖರ್ಚು ವೆಚ್ಚಗಳಾದೀತು. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಚಿಂತೆ ಬೇಡ.

ಧನು: ನೆರೆಹೊರೆಯವರು ನಿಮ್ಮ ಗುಟ್ಟು ತಿಳಿದುಕೊಳ್ಳಲು ಪ್ರಯತ್ನಿಸಲಿದ್ದಾರೆ. ಸಂಗಾತಿಯ ಮಾತುಗಳಿಗೆ ಕಿವಿಗೊಡುವುದು ಉತ್ತಮ. ಮನೆಗೆ ನೆಂಟರಿಷ್ಟರ ಆಗಮನ ಸಾಧ‍್ಯತೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ನಿಮ್ಮ ವಾಕ್ಚತುರತೆಯಿಂದ ಕಾರ್ಯಸಾಧನೆ ಮಾಡಿಕೊಳ್ಳಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕಗಳು ಎದುರಾದರೂ ಅಂತಿಮ ಜಯ ನಿಮ್ಮದಾಗುವುದು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ.

ಕುಂಭ: ಮನಸ್ಸಿನ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಬಂಧು ಮಿತ್ರರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಅನ್ಯರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ.

ಮೀನ: ಇನ್ನೊಬ್ಬರ ಮಾತು ಕೇಳಿ ನಿಮ್ಮ ನಿರ್ಧಾರದಲ್ಲಿ ದಿಡೀರ್ ಬದಲಾವಣೆ ಮಾಡುವ ಸಂದರ್ಭಗಳು ಎದುರಾದೀತು. ಆಸ್ತಿ ಖರೀದಿ ಯೋಗ ಸದ್ಯದಲ್ಲೇ ನನಸಾಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ತಾಳ್ಮೆಯಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ