Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 5 ಸೆಪ್ಟಂಬರ್ 2021 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಗೃಹಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಹಣಕಾಸಿನ ಹರಿವು ಬರಲಿದೆ. ಉದ್ಯೋಗ ಸಂಬಂಧೀ ಕೆಲಸಗಳಲ್ಲಿ ಇತರರ ಸಹಾಯ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಆಗಾಗ ದೇಹಾರೋಗ್ಯ ಕೈಕೊಡುವುದರಿಂದ ಮನಸ್ಸಿಗೆ ಕಿರಿ ಕಿರಿಯಾದೀತು. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಕ್ಕೆ ಕೆಲವು ದಿನ ಕಾಯುವುದು ಒಳಿತು.

ಮಿಥುನ: ಮನೆಯಲ್ಲಿ ನಡೆಸಲುದ್ದೇಶಿಸಿದ್ದ ಶುಭ ಮಂಗಲ ಕಾರ್ಯಗಳಿಗೆ ದಿನ ಕೂಡಿಬರಲಿದೆ. ಆರ್ಥಿಕವಾಗಿ ಅಗತ್ಯ ವಿಚಾರಗಳಿಗೆ ಹಣಕಾಸಿನ ಖರ್ಚು ವೆಚ್ಚಗಳಾದೀತು. ಪ್ರೀತಿ ಪಾತ್ರರನ್ನು ಭೇಟಿಯಾದ ಸಂತೋಷ ಸಿಗಲಿದೆ.

ಕರ್ಕಟಕ: ವೃತ್ತಿರಂಗದಲ್ಲಿ ನಿಮ್ಮ ಸ್ಥಾನ ಸುಧಾರಣೆಗೆ ಕೆಲವು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೀರಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ದಾಯಾದಿ ಕಲಹಗಳಿಗೆ ಹಿರಿಯರ ಮಧ್ಯಸ್ಥಿಕೆ ಪಡೆದುಕೊಳ್ಳಿ.

ಸಿಂಹ: ಬಹುದಿನಗಳ ಕನಸು ನನಸು ಮಾಡಿಕೊಳ್ಳಲಿದ್ದೀರಿ. ಪ್ರೀತಿ ಪಾತ್ರರ ಕಷ್ಟಗಳಿಗೆ ಹೆಗಲು ಕೊಡಲಿದ್ದೀರಿ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ.

ಕನ್ಯಾ: ಹೆಚ್ಚು ಆತ್ಮೀಯರೆನಿಸಿಕೊಂಡವರಿಂದ ನೋವುಂಟಾಗುವ ಪ್ರಸಂಗಗಳು ಎದುರಾದೀತು. ಮನೆಗೆ ನೆಂಟರಿಷ್ಟರ ಆಗಮನವಾಗಲಿದ್ದು, ಅನಿರೀಕ್ಷಿತ ಖರ್ಚುಗಳಾದೀತು. ಕೃಷಿಕರಿಗೆ ವ್ಯವಹಾರಕ್ಕೆ ಅಡೆತಡೆಯಿರದು.

ತುಲಾ: ಬೇರೆಯವರು ನಿಮ್ಮ ಬಗ್ಗೆ ಹೇಳುವ ಅಭಿಪ್ರಾಯಗಳಿಗೆ ಅತಿಯಾಗಿ ಕಿವಿಗೊಡಬೇಡಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಬಹಳ ದಿನಗಳಿಂದ ಬಾಕಿಯಿದ್ದ ದೇವರ ಹರಕೆ ತೀರಿಸಲಿದ್ದೀರಿ. ಕಿರು ಸಂಚಾರ ಮಾಡುವಿರಿ.

ವೃಶ್ಚಿಕ: ದೂರ ಪ್ರಯಾಣದಿಂದ ದೇಹಾಯಾಸವಾದೀತು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಬಂಧು ಮಿತ್ರರ ಸಹಕಾರದಿಂದ ಸಂಭಾವ್ಯ ಸಮಸ್ಯೆಗಳು ಪರಿಹಾರವಾಗಲಿದೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ.

ಧನು: ನಿಮ್ಮ ಸಕಾರಾತ್ಮಕ ಮನೋಭಾವನೆಯಿಂದ ಇತರರಿಗೂ ಸ್ಪೂರ್ತಿ ತುಂಬಲಿದ್ದೀರಿ. ಸಂಗಾತಿಯ ಕಷ್ಟಗಳಿಗೆ ಹೆಗಲು ಕೊಡುವಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಇನ್ನಷ್ಟು ಗಮನ ಅಗತ್ಯ. ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ.

ಮಕರ: ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಂಡುಬರುವುದು. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಅವಕಾಶವಿದೆ. ದಿನದಂತ್ಯಕ್ಕೆ ನೆಮ್ಮದಿ.

ಕುಂಭ: ಪಾಲು ಬಂಡವಾಳ ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಬರುವುದು. ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.

ಮೀನ: ಮೆಚ್ಚಿನ ವ್ಯಕ್ತಿಗಳ ಭೇಟಿ, ಒಡನಾಟದಿಂದ ಮನಸ್ಸಿಗೆ ಖುಷಿಯಾಗಲಿದೆ. ಕಳೆದು ಹೋಯಿತೆಂದುಕೊಂಡಿದ್ದ ವಸ್ತುಗಳ ಮರಳಿ ಕೈ ಸೇರಲಿದೆ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ