Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 3 ಸೆಪ್ಟಂಬರ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಿರಿಯರಿಂದ ಸುಖ-ಸಂತೋಷ ನೆಮ್ಮದಿ ಸಿಗುವುದು. ಪರ ಸ್ಥಳಗಳಿಗೆ ಭೇಟಿಯಾಗುವ ಸಂದರ್ಭ ಎದುರಾದೀತು. ಕಾರ್ಯದೊತ್ತಡದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಕುಲದೇವರ ಪ್ರಾರ್ಥನೆ ಮಾಡಿದರೆ ಒಳಿತು.

ವೃಷಭ: ಸಹೋದರರ ಸಹಕಾರದಿಂದ ಭೂ ಸಂಬಂಧೀ ವ್ಯಾಜ್ಯಗಳು ಬಗೆಹರಿಯಲಿವೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ನೆಮ್ಮದಿಯಿರುವುದು.

ಮಿಥುನ: ಸಾಲಗಾರರ ಬಳಿ ಬಾಕಿಯಾಗಿದ್ದ ಹಣಕಾಸಿನ ವ್ಯವಹಾರ ಪೂರ್ತಿಯಾಗಲಿದೆ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಇದು ಸಕಾಲ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಕಿರು ಸಂಚಾರ ಮಾಡುವಿರಿ.

ಕರ್ಕಟಕ: ವ್ಯವಹಾರದಲ್ಲಿ ನಿಮ್ಮ ಹೆಚ್ಚಿನ ಆಸಕ್ತಿ, ಚುರುಕುತನದಿಂದ ಇತರರ ಗಮನ ಸೆಳೆಯಲಿದ್ದೀರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.

ಸಿಂಹ: ಬೇರೆಯವರು ನಿಮ್ಮ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸಲು ಅವಕಾಶ ಕೊಡಬೇಡಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ‍್ಯಾಸಕ್ಕೆ ಅವಕಾಶಗಳು ತೋರಿಬರಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ.

ಕನ್ಯಾ: ಸಂಗಾತಿಯ ಕೆಲವೊಂದು ಮಾತುಗಳು ನಿಮಗೆ ಇಷ್ಟವಾಗದೇ ಹೋಗಬಹುದು. ಆದರೆ ಮಾತಿನ ಮೇಲೆ ನಿಗಾ ಇರಲಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ.

ತುಲಾ: ಸಂಶೋಧನೆ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ಮುನ್ನಡೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಬೇಕು. ಸಾಂಸಾರಿಕವಾಗಿ ಸುಖ, ಅಭಿವೃದ್ಧಿ ಕಂಡುಬರಲಿದೆ. ಸಜ್ಜನರ ಸಂಘ ಸನ್ಮಾರ್ಗದತ್ತ ಕರೆದೊಯ್ಯಲಿದೆ.

ವೃಶ್ಚಿಕ: ಬಹಳ ದಿನಗಳಿಂದ ಮಾಡಬೇಕೆಂದುಕೊಂಡಿದ್ದ ಕೆಲಸಗಳು ಇಂದು ಸುಲಲಿತವಾಗಿ ನೆರವೇರಲಿದೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವ್ಯಾಪಾರಿಗಳಿಗೆ ಧನ ಗಳಿಕೆಗೆ ನಾನಾ ಮಾರ್ಗ ಕಂಡುಬರಲಿದೆ.

ಧನು: ನಿಮ್ಮಿಂದ ಫಲಾಪೇಕ್ಷೆ ನಿರೀಕ್ಷೆಯಲ್ಲಿ ಜೊತೆಗಿದ್ದವರು ದೂರವಾಗಲಿದ್ದೀರಿ. ಅನಗತ್ಯವಾಗಿ ಮಾನಸಿಕ ಗೊಂದಲ ತಂದುಕೊಳ್ಳಬೇಡಿ. ಸಂಗಾತಿಯ ಸಲಹೆಗಳಿಗೆ ಕಿವಿಗೊಟ್ಟರೆ ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಹಲವು ಜನರ ಒಡನಾಟದಿಂದ ಹೊಸ ಐಡಿಯಾಗಳು ಹೊಳೆಯಲಿವೆ. ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗುವುದು. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಹೆಚ್ಚು ಆಪ್ತರು ಎನಿಸಿಕೊಂಡಿದ್ದವರಿಂದ ವಂಚನೆಗೊಳಗಾಗುವ ಅಪಾಯವಿದೆ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಋಣಾತ್ಮಕ ಚಿಂತನೆಗಳಿಗೆ ಅವಕಾಶಕೊಡಬೇಡಿ.

ಮೀನ: ದೇವತಾ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಕೌಟುಂಬಿಕವಾಗಿ ನೆಂಟರಿಷ್ಟರ ಆಗಮನದಿಂದ ಸಂತೋಷವಾಗಲಿದೆ. ಸರಕಾರಿ ಕೆಲಸಗಳಲ್ಲಿ ಮುನ್ನಡೆ ಕಂಡುಬಂದೀತು. ಆಪ್ತ ಮಿತ್ರರ ಭೇಟಿಯಾಗಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ