Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 13 ಆಗಸ್ಟ್ 2021 (09:01 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ನಿಮ್ಮ ಎದುರಾಳಿಗಳಿಂದ ತೊಂದರೆಗಳು ಎದುರಾಗುವುದು ಸಹಜ. ಆದರೆ ಅದನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಆರ್ಥಿಕವಾಗಿ ಹದ ತಪ್ಪಿದ ಭಾವನೆ ಬರಲಿದೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ವೃಷಭ: ನೂತನ ವೃತ್ತಿ ಜೀವನ ಆರಂಭಿಸಲು ಇದು ಸಕಾಲ. ಬೇರೆಯವರ ಜೀವನದಲ್ಲಿ ಅನಗತ್ಯ ಮೂಗು ತೂರಿಸಲು ಹೋಗಬೇಡಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗೆ ಅವಕಾಶ ಕೊಡಬೇಡಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ವ್ಯಾಪಾರಿಗಳಿಗೆ ಚೇತರಿಕೆಗೆ ಹೊಸ ದಾರಿಗಳು ಕಂಡುಬರಲಿವೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ‍್ಳಿ. ನಿಮ್ಮದಲ್ಲದ ತಪ್ಪಿಗೆ ಬೆಲೆ ತೆರುವ ಸಂದರ್ಭ ಎದುರಾದೀತು. ತಾಳ್ಮೆ, ಸಂಯಮವಿರಲಿ.

ಕರ್ಕಟಕ: ಯೋಗ್ಯ ವಯಸ್ಕರಿಗೆ ಸೂಕ್ತ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಅನಿವಾರ್ಯವಾಗಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಸಿಂಹ: ಹಿಂದೆ ಮಾಡಿದ್ದ ಹೂಡಿಕೆಗಳು ಫಲ ನೀಡಲಿವೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರಲಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಲಿದ್ದೀರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಕನ್ಯಾ: ಉದ್ಯೋಗ ಸಂಬಂಧವಾಗಿ ಕೆಲವೊಂದು ಮನಸ್ತಾಪಗಳು ಕಂಡುಬರಲಿವೆ. ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಅಗತ್ಯ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ. ಹಳೆಯ ಮಿತ್ರರ ಪುನರ್ ಮಿಲನ ಸಾಧ‍್ಯತೆಯಿದೆ.

ತುಲಾ: ಇನ್ನೊಬ್ಬರಿಗೆ ಸಹಾಯ ಮಾಡುವ ನಿಮ್ಮ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಇಷ್ಟಭೋಜನ ಮಾಡುವ ಯೋಗ ನಿಮ್ಮದಾಗಲಿದೆ.

ವೃಶ್ಚಿಕ: ಮನಸ್ಸಿನ ಮಾತುಗಳಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ವ್ಯವಹಾರದಲ್ಲಿ ಮುನ್ನಡೆಯಿರಲಿದೆ.

ಧನು: ಬೇರೆಯವರ ಕಷ್ಟಕ್ಕೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ‍್ಳಬೇಡಿ. ಇಂದು ನೀವು ಕೈಗೊಳ್ಳುವ ನಿರ್ಧಾರಗಳು ಭವಿಷ್ಯದ ಮೇಲೆ ಪರಿಣಾಮ ಬೀರುವುದು. ಸಂಗಾತಿಯ ಮಾತಿಗೆ ಬೆಲೆಕೊಡಬೇಕಾಗುತ್ತದೆ. ತಾಳ್ಮೆಯಿರಲಿ.

ಮಕರ: ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಚಿಂತಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಹೊಸ ಜನರ ಭೇಟಿಯಿಂದ ಹೊಸ ಯೋಜನೆಗಳು ಹೊಳೆಯಲಿವೆ. ಯಂತ್ರೋಪಕರಣಗಳ ವೃತ್ತಿಯಲ್ಲಿರುವವರಿಗೆ ಮುನ್ನಡೆಯ ಯೋಗವಿದೆ.

ಕುಂಭ: ಕಾರ್ಯಾರಂಭದಲ್ಲಿ ಇದ್ದ ಉತ್ಸಾಹ ಕಡಿಮೆಯಾದಂತೆ ತೋರುತ್ತದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಕಂಡುಬರಲಿದೆ. ಕೌಟುಂಬಿಕವಾಗಿ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಮೀನ: ಕಾರ್ಯನಿಮಿತ್ತ ಅಧಿಕ ಓಡಾಟ ನಡೆಸಬೇಕಾಗಬಹುದು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ಮನೆಗೆ ಅತಿಥಿಗಳ ಆಗಮನವಾದೀತು. ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ