Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 18 ಜುಲೈ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬಹುದಿನಗಳಿಂದ ಕಾಡುತ್ತಿದ್ದ ದೇಹಾರೋಗ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ನಿಮ್ಮದಲ್ಲದ ವಸ್ತುವಿನ ಬಗ್ಗೆ ಮೋಹ ಬೇಡ. ಆರ್ಥಿಕವಾಗಿ ಯೋಗ್ಯ ಕೆಲಸಗಳಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಹೆಚ್ಚಿನ ಹಣ ಗಳಿಕೆಗೆ ಅನ್ಯ ಮಾರ್ಗಗಳತ್ತ ಯೋಚಿಸಲಿದ್ದೀರಿ. ಕೌಟುಂಬಿಕವಾಗಿ ಮಕ್ಕಳಿಂದ ಸುಖ-ಸಂತೋಷ ಪಡೆಯಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ಸಂಗಾತಿಯ ಮಾತಿಗೆ ಕಿವಿಗೊಟ್ಟರೆ ಉತ್ತಮ.

ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಸ್ಥಾನ ಭದ್ರಪಡಿಸಲು ಯೋಜನೆಗಳನ್ನು ರೂಪಿಸಲಿದ್ದೀರಿ. ಶೈಕ್ಷಣಿಕ ರಂಗದಲ್ಲಿರುವವರಿಗೆ ಹೊಸ ದಾರಿಗಳು ಗೋಚರವಾಗಲಿದೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ.

ಕರ್ಕಟಕ: ನಿಮ್ಮ ಸಮೀಪವರ್ತಿಗಳ ಕಷ್ಟಕ್ಕೆ ಸಹಾಯ ಮಾಡಲಿದ್ದೀರಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಾದೀತು. ಕಟ್ಟಡ ಕಾಮಗಾರಿ ಕೆಲಸಗಳು ಅರ್ಧಕ್ಕೇ ನಿಲ್ಲಲಿವೆ. ಆದರೆ ಸಂಗಾತಿಯ ಸಹಕಾರ ಸಿಗಲಿದ್ದು, ನೆಮ್ಮದಿಯಾಗಲಿದೆ.

ಸಿಂಹ: ಕೋಪದ ಕೈಗೆ ಬುದ್ಧಿ ಕೊಟ್ಟು ನಿರ್ಧಾರ ತೆಗೆದುಕೊಳ್ಳಲು ಹೋದರೆ ಎಡವಟ್ಟಾಗಬಹುದು. ತಾಳ್ಮೆ, ಸಂಯಮದಿಂದ ವರ್ತಿಸಿದರೆ ಉತ್ತಮ. ಪ್ರೀತಿ ಪಾತ್ರರಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ಹಳೆಯ ಮಿತ್ರರ ಭೇಟಿ ಸಂಭವ.

ಕನ್ಯಾ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ. ಕಾರ್ಯಾರಂಭದಲ್ಲಿ ವಿಘ್ನಗಳು ಉಂಟಾದರೂ ಸತತ ಪ್ರಯತ್ನದಿಂದ ಫಲ ಸಿಕ್ಕೀತು. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ತುಲಾ: ನಿಮ್ಮ ವಿಚಾರಗಳಿಗೆ ಸಂಗಾತಿಯ ಸಹಕಾರ ಕಂಡುಬರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಬದಿಗೊತ್ತಿ ಕುಟುಂಬಕ್ಕಾಗಿ ದುಡಿಯಬೇಕಾಗುತ್ತದೆ. ತಾಳ್ಮೆಯಿರಲಿ.

ವೃಶ್ಚಿಕ: ಸಂತಾನ ಹೀನ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ಧಾರ್ಮಿಕ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಳೆಯ ಬಾಕಿ ತೀರಿಸಲಿದ್ದು, ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಧನು: ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಹಿತಶತ್ರುಗಳಿಂದ ದೂರವಿದ್ದರೆ ಉತ್ತಮ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕಿರು ಸಂಚಾರ ಮಾಡುವಿರಿ.

ಮಕರ: ಮನಸ್ಸು ನಡೆಸಿದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾದೀತು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.

ಕುಂಭ: ಕಾರ್ಯರಂಗದಲ್ಲಿ ಶತ್ರುಬಾಧೆ ಕಂಡುಬಂದೀತು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಕೌಟುಂಬಿಕವಾಗಿ ಮುನಿಸು ಮರೆಯಾಗಲಿದ್ದು, ಸಂತೋಷದ ವಾತಾವರಣವಿರಲಿದೆ. ಚಿಂತೆ ಬೇಡ.

ಮೀನ: ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ನಿಮ್ಮ ರೀತಿ ರಿವಾಜುಗಳು ಮನೆಯ ಇತರ ಸದಸ್ಯರಿಗೆ ಇಷ್ಟವಾಗದೇ ಹೋದೀತು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಬಹುದಿನಗಳ ಕನಸು ನನಸು ಮಾಡಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ