Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 17 ಜುಲೈ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಉನ್ನತಿಗೇರುವ ನಿಮ್ಮ ಕನಸು ನನಸಾಗಿಸಲು ಸಕಲ ಪ್ರಯತ್ನ ನಡೆಸಲಿದ್ದೀರಿ. ಕೌಟುಂಬಿಕವಾಗಿ ತಾಳ್ಮೆಯೇ ನಿಮ್ಮ ಅಸ್ತ್ರವಾಗಲಿದೆ. ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚಗಳಾದೀತು.

ವೃಷಭ: ಮನೆಯಲ್ಲಿ ನೆಮ್ಮದಿಯ ವಾತಾವರಣವಿದ್ದರೂ ಋಣಾತ್ಮಕ ಯೋಚನೆಗಳಿಂದ ನಿರುತ್ಸಾಹ ಕಂಡುಬರಲಿದೆ. ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಯೋಚಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಬಗ್ಗೆ ಚಿಂತಿಸಲಿದ್ದಾರೆ.

ಮಿಥುನ: ನಿಮ್ಮ ಕೆಲಸವಾಗಬೇಕಾದರೆ ಕತ್ತೆ ಕಾಲಾದರೂ ಹಿಡಿಯುವ ಪರಿಸ್ಥಿತಿ ಎದುರಾಗಲಿದೆ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ಜೋಪಾನವಾಗಿರಿ. ಮನೆಯ ಸದಸ್ಯರ ದೇಹಾರೋಗ್ಯದಲ್ಲಿ ಏರುಪೇರಾದೀತು. ಅನಿರೀಕ್ಷಿತ ಖರ್ಚು ವೆಚ್ಚಗಳಾಗಲಿದೆ.

ಕರ್ಕಟಕ: ನೀವು ಅಂದುಕೊಂಡಂತೇ ಯಾವುದೂ ನಡೆಯುತ್ತಿಲ್ಲ ಎಂಬ ಬೇಸರ ಕಾಡೀತು. ನಿಮ್ಮ ಸಮಸ್ಯೆಗಳಿಗೆ ಸಂಗಾತಿಯು ಕೊಡುವ ಸಲಹೆ ಉಪಯುಕ್ತವೆನಿಸಲಿದೆ. ಕಳೆದು ಹೋದ ವಸ್ತುವಿಗಾಗಿ ಹುಡುಕಾಟ ನಡೆಸಲಿದ್ದೀರಿ.

ಸಿಂಹ: ಮಕ್ಕಳ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಸಂಗಾತಿಯ ದೇಹಾರೋಗ್ಯದಲ್ಲಿ ಏರುಪೇರಾದೀತು, ಕಾಳಜಿ ವಹಿಸಬೇಕಾಗುತ್ತದೆ. ಕೃಷಿಕರು, ಸ್ವಯಂ ವ್ಯಾಪಾರಿಗಳ ವ್ಯವಹಾರಕ್ಕೆ ಅನುಕೂಲಕರ ವಾತಾವರಣವಿರಲಿದೆ.

ಕನ್ಯಾ: ನಿಮ್ಮ ಸಮಸ್ಯೆಗಳನ್ನು ಇತರರ ಮೇಲೆ ಹೇರುವುದು ನಿಮ್ಮ ಸ್ವಭಾವವಲ್ಲ. ಹಾಗಿದ್ದರೂ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಯಾಗುವ ಯೋಗ ಕೂಡಿಬರಲಿದೆ.

ತುಲಾ: ನಿಮ್ಮ ಬಗ್ಗೆ ಒಳಿತನ್ನೇ ಬಯಸುವವರ ಹಿತದ ಬಗ್ಗೆ ಚಿಂತೆ ಮಾಡಬೇಕಾಗಬಹುದು. ಆರ್ಥಿಕವಾಗಿ ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.

ವೃಶ್ಚಿಕ: ನಿಮ್ಮ ದೈನಂದಿನ ಕೆಲಸಗಳಿಗೆ ಸಣ್ಣ ಪುಟ್ಟ ಅಡೆತಡೆಗಳುಂಟಾದೀತು. ಪ್ರೀತಿ ಪಾತ್ರರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡುವಿರಿ.

ಧನು: ಕೆಲಸದ ವಿಚಾರದಲ್ಲಿ ಉದಾಸೀನ ಪ್ರವೃತ್ತಿ ಕಂಡುಬಂದೀತು. ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೋ ಎಂಬ ಕೀಳರಿಮೆ ಉಂಟಾದೀತು. ಸಂಗಾತಿಯ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಮಕರ: ವೃತ್ತಿರಂಗದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಯಾವುದೂ ನೀವಂದುಕೊಂಡಂತೆ ನಡೆಯುತ್ತಿಲ್ಲ ಎಂಬ ಬೇಸರ ಕಾಡಲಿದೆ. ಸಾಂಸಾರಿಕವಾಗಿ ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ಕೌಟುಂಬಿಕವಾಗಿ ಸಂತಸವಿರುವುದು.

ಕುಂಭ: ಅನಗತ್ಯ ಯೋಚನೆಗಳಿಂದ ಮನಸ್ಸು ಹೈರಾಣಾದೀತು. ಮಕ್ಕಳ ಸಂತೋಷದಲ್ಲಿ ನೆಮ್ಮದಿ ಕಾಣಲಿದ್ಧೀರಿ. ಸರಕಾರಿ ಉದ್ಯೋಗಿಗಳಿಗೆ ಉನ್ನತ ಸ್ಥಾನಕ್ಕೇರುವ ಯೋಗವಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.

ಮೀನ: ಭವಿಷ್ಯಕ್ಕಾಗಿ ಕೆಲವೊಂದು ಯೋಜನೆಗಳನ್ನು ಹಾಕಿಕೊಳ‍್ಳಲಿದ್ದೀರಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ನಿಮ್ಮ ಒಳ್ಳೆಯತನದ ದುರುಪಯೋಗಪಡಿಸಿಕೊಳ್ಳುವವರಿರುತ್ತಾರೆ. ಹಿತ್ರಶತ್ರುಗಳಿಂದ ದೂರವಿದ್ದರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ