ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 11 ಮೇ 2021 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವ್ಯಾಪಾರಿ ವರ್ಗದವರಿಗೆ ಸಾಕಷ್ಟು ಪ್ರಗತಿ ಕಂಡುಬರಲಿದೆ. ಚಿಂತಿತ ಕಾರ್ಯಗಳನ್ನು ನೆರವೇರಿಸಲಿದ್ದೀರಿ. ಹಿರಿಯರ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಮಹಿಳೆಯರಿಗೆ ಕೌಟುಂಬಿಕ ವಿಚಾರದಲ್ಲಿ ಚಿಂತೆಯಾದೀತು.

ವೃಷಭ: ಹಣಕಾಸಿನ ಪರಿಸ್ಥಿತಿ ನಿಮ್ಮನ್ನು ಚಿಂತೆಗೀಡುಮಾಡಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಕೆಲವು ದಿನ ಕಾಯುವುದು ಒಳಿತು. ತಾಳ್ಮೆಯಿರಲಿ.

ಮಿಥುನ: ವೃತ್ತಿರಂಗದಲ್ಲಿ ಹಿತಶತ್ರುಗಳ ಕಾಟ ಕಂಡುಬಂದೀತು. ಎಚ್ಚರಿಕೆಯಿಂದ ನಿಭಾಯಿಸಬೇಕಾದೀತು. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ಧೀರಿ. ಮನೆಯ ಸದಸ್ಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡೀತು.

ಕರ್ಕಟಕ: ಸಣ್ಣ ವಿಚಾರಕ್ಕೂ ಕೋಪ ತಾಪ ಮಾಡಿಕೊಳ್ಳುವುದನ್ನು ಬಿಟ್ಟು ಸಮಾಧಾನಕರವಾಗಿ ಯೋಚನೆ ಮಾಡಿ. ಮನೆಯ ಸಮಸ್ಯೆಗಳಿಗೆ ತಾಳ್ಮೆಯಿಂದ ಪರಿಹಾರ ಕಂಡುಕೊಳ್ಳಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚುವೆಚ್ಚವಾಗಲಿದೆ.

ಸಿಂಹ: ಉದ್ಯೋಗದಲ್ಲಿ ನಿಮ್ಮ ಏಳಿಗೆಗೆ ಮೇಲಧಿಕಾರಿಗಳಿಂದ ಅಡೆತಡೆಗಳು ಬಂದೀತು. ಕ್ರಿಯಾತ್ಮಕವಾಗಿ ಯೋಚನೆ ಮಾಡಬೇಕಾದ ಅಗತ್ಯವಿದೆ. ದಾಯಾದಿ ಕಲಹಗಳಿಗೆ ಹಿರಿಯರ ಮಧ್ಯಸ್ಥಿಕೆ ಪಡೆಯಿರಿ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ನಿಮ್ಮದಲ್ಲದ ತಪ್ಪಿಗೆ ಬೆಲೆ ತೆರುವ ಪ್ರಸಂಗ ಬಂದೀತು. ಸರಕಾರಿ ಕಾಗದ ಪತ್ರಗಳನ್ನು ಜೋಪಾನ ಮಾಡಿಕೊಳ‍್ಳಿ. ಸಂಗಾತಿಯ ದೇಹಾರೋಗ್ಯದ ಕಡೆಗೆ ಗಮನಕೊಡಬೇಕಾಗುತ್ತದೆ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು.

ತುಲಾ: ಕಾರ್ಯರಂಗದಲ್ಲಿ ಎಷ್ಟೇ ಎಚ್ಚರಿಕೆಯಿಂದಿದ್ದರೂ ನಿಮ್ಮ ಕೈ ಮೀರಿ ಕೆಲವೊಂದು ಘಟನೆಗಳು ನಡೆದೀತು. ಸಹೋದ್ಯೋಗಿಗಳ ಅಸಹಾಕಾರ ಅಸಹನೆ ಮೂಡಿಸಲಿದೆ. ಸರಕಾರಿ ಕೆಲಸಗಳನ್ನು ಮುಂದೂಡುವುದು ಉತ್ತಮ.

ವೃಶ್ಚಿಕ: ನಾಲಿಗೆ ಚಪಲದಿಂದಾಗಿ ದೇಹಾರೋಗ್ಯದಲ್ಲಿ ಏರುಪೇರಾದೀತು. ಅವಿವಾಹಿತರಿಗೆ ಉತ್ತಮ ವೈವಾಹಿಕ ಸಂಬಂಧಗಳು ಬರಲಿವೆ. ನಿಮ್ಮ ಬಗ್ಗೆ ಚಾಡಿ ಹೇಳುವವರಿಂದ ದೂರವಿರುವುದೇ ಉತ್ತಮ. ತಾಳ್ಮೆಯಿರಲಿ.

ಧನು: ನಿಮಗೆ ಸಿಕ್ಕದ ವಸ್ತುವಿನ ಬಗ್ಗೆ ಅನಗತ್ಯವಾಗಿ ನಿರಾಶೆಪಟ್ಟುಕೊಳ್ಳುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು.

ಮಕರ: ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅನಗತ್ಯ ಯೋಚನೆಗಳಿಂದ ಮನಸ್ಸಿಗೆ ಬೇಸರವಾದೀತು. ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷ ಬೇಡ. ಅಸೂಯೆ ಪಡುವ ಜನರಿಂದ ದೂರವಿದ್ದರೇ ಉತ್ತಮ.

ಕುಂಭ: ವೃತ್ತಿರಂಗದಲ್ಲಿ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ. ಸರಕಾರಿ ಕೆಲಸಗಳನ್ನು ಮುಂದೂಡುವುದು ಉತ್ತಮ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಮನಸ್ಸು ಹಾತೊರೆಯಲಿದೆ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ಮೀನ: ಸಾಮಾಜಿಕ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದರಿಂದ ನೆಮ್ಮದಿ ಸಿಗಲಿದೆ. ಹಿರಿಯರ ಸಲಹೆಗಳನ್ನು ಸಕಾಲದಲ್ಲಿ ಉಪಯೋಗಿಸಿದಲ್ಲಿ ಉತ್ತಮ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಬಳಿಕ ಈ ಐದು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ

ಗ್ರಹಗತಿಗಳ ದೋಷ ನಿವಾರಣೆಗೆ ನವಗ್ರಹ ಕವಚಂ ಸ್ತೋತ್ರ ಓದಿ

ದೀಪಾವಳಿ ಸಂದರ್ಭದಲ್ಲಿ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಬೇಕು ನೋಡಿ

ಶುಕ್ರವಾರ ಶ್ರೀ ಧನಲಕ್ಷ್ಮಿ ಸ್ತೋತ್ರವನ್ನು ತಪ್ಪದೇ ಓದಿ

ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ

ಮುಂದಿನ ಸುದ್ದಿ
Show comments