ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 1 ಮೇ 2021 (07:12 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದುಡಿಮೆ ಕಡಿಮೆ ಖರ್ಚು ಹೆಚ್ಚು ಎನ್ನುವ ಪರಿಸ್ಥಿತಿ ಎದುರಾಗಲಿದೆ. ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ಹಿಂದೆ ಆಡಿದ ಮಾತುಗಳಿಗೆ ಪಶ್ಚಾತ್ತಾಪಪಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಹೊಸ ರೀತಿಯ ಸವಾಲುಗಳಿಗೆ ಸಿದ್ಧರಾಗಿ.

ವೃಷಭ: ಸಾಂಸಾರಿಕವಾಗಿ ಸಂಯಮ ತಪ್ಪಿದಲ್ಲಿ ಸಾಮರಸ್ಯ ತಪ್ಪೀತು. ಮಕ್ಕಳ ವಿದ್ಯಾಭ್ಯಾಸ ಜೀವನ ಚಿಂತೆಗೆ ಕಾರಣವಾದೀತು. ಆದರೆ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಕುಲದೇವರ ಪ್ರಾರ್ಥನೆ ಮಾಡಿ.

ಮಿಥುನ: ಮಾನಸಿಕ ಉದ್ವೇಗದಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಡವಲಿದ್ದೀರಿ. ಆಪ್ತರೊಂದಿಗೆ ಸಮಾಲೋಚನೆ ನಡೆಸಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ತೃಪ್ತಿ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕರ್ಕಟಕ: ಕಾರ್ಯಕ್ಷೇತ್ರದಲ್ಲಿ ವಿಘ್ನ ಭಯ ತೋರಿಬರಲಿದೆ. ಇಷ್ಟದೇವರ ಪ್ರಾರ್ಥನೆ ಮಾಡಿ ದಿನದಾರಂಭ ಮಾಡಿದರೆ ಉತ್ತಮ. ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭ ಪಡೆಯುವ ಚಿಂತೆ ಕಾಡಲಿದೆ. ತಾಳ್ಮೆಯಿರಲಿ.

ಸಿಂಹ: ನಿಮ್ಮ ಕಾರ್ಯಸಾಧನೆಗೆ ಅಪರಿಚಿತರಿಂದಲೂ ನೆರವು ಸಿಕ್ಕೀತು. ಆದರೆ ಅನಗತ್ಯವಾಗಿ ಮಾತು, ವರ್ತನೆಯಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ನಿರುದ್ಯೋಗಿಗಳು ಸೂಕ್ತ ಉದ್ಯೋಗಕ್ಕೆ ಕೆಲವು ದಿನ ಕಾಯುವುದು ಒಳಿತು.

ಕನ್ಯಾ: ವ್ಯಾಪಾರ, ವ್ಯವಹಾರದಲ್ಲಿ ನೀವು ಅಂದುಕೊಂಡಂತೇ ಎಲ್ಲವೂ ನಡೆಯದು. ಆದರೆ ಚಿಂತೆ ಬೇಡ. ಗೃಹಿಣಿಯರಿಗೆ ಮನೆಗೆಲಸ ಹೊರೆಯೆನಿಸೀತು. ಪ್ರೀತಿ ಪಾತ್ರರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ನಿಮ್ಮ ಮನೋಕಾಮನೆಗಳು ಪೂರ್ತಿಯಾಗಲಿವೆ. ಸಂಗಾತಿಗೆ ಅನಿರೀಕ್ಷಿತ ಅಚ್ಚರಿ ಕೊಡಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ಉದ್ದೇಶಿತ ಶುಭ ಮಂಗಲ ಕಾರ್ಯಗಳನ್ನು ಮುಂದೂಡಬೇಕಾಗುತ್ತದೆ.

ವೃಶ್ಚಿಕ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಬರುವಂತಹ ಸಮಸ್ಯೆಗಳನ್ನು ನಿಭಾಯಿಸಲಿದ್ದೀರಿ. ಸಾಮಾಜಿಕವಾಗಿ ಕೀರ್ತಿ ಸಂಪಾದಿಸುವ ಯೋಗವಿದೆ. ಸರಕಾರಿ ನೌಕರರಿಗೆ ಮುಂಬಡ್ತಿ ಯೋಗ ಕೂಡಿಬರಲಿದೆ.

ಧನು: ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಕೋಪ ತಾಪಗಳಿಂದ ನಿರ್ಧಾರ ತೆಗೆದುಕೊಂಡರೆ ತೊಂದರೆಯಾದೀತು. ಸಂಗಾತಿಯ ಮಾತುಗಳಿಗೆ ಕಿವಿಗೊಡಿ. ಅನಗತ್ಯ ಚಿಂತೆ ಬೇಡ.

ಮಕರ: ಯೋಗ್ಯ ವಯಸ್ಕರು ಸೂಕ್ತ ವೈವಾಹಿಕ ಸಂಬಂಧ ಕಂಡುಕೊಳ್ಳಲಿದ್ದಾರೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ರಾಜಕೀಯ ರಂಗದಲ್ಲಿರುವವರಿಗೆ ಕಾರ್ಯದೊತ್ತಡ ಅಧಿಕವೆನಿಸಲಿದೆ. ತಮ್ಮವರಿಗೆ ಒಳಿತು ಮಾಡಲು ಹೋಗಿ ಅಪವಾದಕ್ಕೆ ಗುರಿಯಾಗುವ ಸಂದರ್ಭ ಎದುರಾದೀತು. ಕಾರ್ಯರಂಗದಲ್ಲಿ ಶತ್ರುಬಾಧೆ ಅಲಕ್ಷಿಸುವುದು ಬೇಡ. ತಾಳ್ಮೆಯಿರಲಿ.

ಮೀನ: ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಆಕಸ್ಮಿಕವಾಗಿ ಧನಲಾಭವಾಗಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ದೇವತಾ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments