Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 19 ಏಪ್ರಿಲ್ 2021 (08:50 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನೀವು ಹಿಂದೆ ಮಾಡಿದ ಒಳ್ಳೆಯ ಕೆಲಸಗಳ ಫಲ ಅನುಭವಿಸಲಿದ್ದೀರಿ. ದೈಹಿಕವಾಗಿ ಆರೋಗ್ಯ ಸ್ಥಿತಿ ಚಿಂತೆಗೆ ಕಾರಣವಾದೀತು. ಆದರೆ ಆತಂಕಪಡುವ ಅಗತ್ಯವಿಲ್ಲ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.

ವೃಷಭ: ನೀವು ಯಾರನ್ನು ಆಪ್ತರು ಎಂದುಕೊಂಡಿದ್ದೀರೋ ಅವರಿಂದಲೇ ವಂಚನೆಗೊಳಗಾಗುವ ಪರಿಸ್ಥಿತಿ ಎದುರಾದೀತು. ಸರಕಾರಿ ಕಾಗದ ಪತ್ರಗಳನ್ನು ಎಚ್ಚರಿಕೆಯಿಂದ ಜೋಪಾನ ಮಾಡಿ. ಕೋರ್ಟು ಕಚೇರಿ ಕೆಲಸಗಳಿಗೆ ಓಡಾಡಬೇಕಾದೀತು.

ಮಿಥುನ: ಮನಸ್ಸಿನಲ್ಲಿ ಅಂದುಕೊಂಡಿದ್ದು ಒಂದು, ಆಗುವುದು ಇನ್ನೊಂದು ಎಂಬ ಪರಿಸ್ಥಿತಿ ಎದುರಾಗಲಿದೆ. ವೈಯಕ್ತಿಕವಾಗಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವ ಯೋಗ ಎದುರಾಗಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಕರ್ಕಟಕ: ಯಾರಿಗೋಸ್ಕರವೋ ನಿಮ್ಮ ಸಿದ್ಧಾಂತಗಳೊಂದಿಗೆ ರಾಜಿಯಾಗಬೇಕಾಗಿಲ್ಲ. ಸಂಗಾತಿಯ ಸಲಹೆಗಳು ಉಪಯೋಗಕ್ಕೆ ಬರಲಿವೆ. ವ್ಯಾಪಾರಿಗಳಿಗೆ ಅಭಿವೃದ್ಧಿಗೆ ಪೂರಕ ವಾತಾವರಣ ಒದಗಿಬರುವುದು.

ಸಿಂಹ: ಅನಗತ್ಯ ಯೋಚನೆಗಳಿಗೆ ಕಡಿವಾಣ ಹಾಕಿ ನಿಮ್ಮ ಕೆಲಸಗಳ ಕಡೆಗೆ ಗಮನ ಕೇಂದ್ರೀಕರಿಸಿ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಫಲಿತಾಂಶ ದೊರೆಯಲಿದೆ. ಪ್ರೀತಿ ಪಾತ್ರರೊಂದಿಗೆ ನಿಮ್ಮ ಮನಸ್ಸಿನ ಮಾತು ಹಂಚಿಕೊಳ್ಳಲಿದ್ದೀರಿ.

ಕನ್ಯಾ: ಪಾಲಿಗೆ ಬಂದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಸಹೋದರರೊಂದಿಗೆ ಆಸ್ತಿ ಸಂಬಂಧವಾಗಿ ಮನಸ್ತಾಪಗಳಾದೀತು. ಹಿರಿಯರ ಸಲಹೆ ಪಡೆಯಿರಿ. ವೈದ್ಯಕೀಯ ವೃತ್ತಿಯವರಿಗೆ ಕೆಲಸದೊತ್ತಡ ತಪ್ಪದು.

ತುಲಾ: ಮಹಿಳೆಯರಿಗೆ, ಚಿನ್ನ, ಮಂಗಳ ವಸ್ತ್ರಾಭರಣ ಖರೀದಿ ಮಾಡುವ ಯೋಗ ಕೂಡಿಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬಂದೀತು. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ.

ವೃಶ್ಚಿಕ: ದೈವಾನುಕೂಲದಿಂದ ಇಂದು ನೀವು ಕೈ ಹಿಡಿಯುವ ಕೆಲಸಗಳು ಯಶಸ್ವಿಯಾಗಲಿವೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು.

ಧನು: ಕ್ಷಣ ಕೋಪದಿಂದಾಗಿ ಆತ್ಮೀಯರೊಂದಿಗೆ ಮನಸ್ತಾಪಗಳು ಬಂದೀತು. ತಾಳ್ಮೆ, ಸಂಯವಿರಲಿ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಂಗಾತಿಯೊಂದಿಗೆ ಪರಾಮರ್ಶಿಸಿ ಮುನ್ನಡೆಯಿರಿ. ಕಾರ್ಯನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಮಕರ: ವೃತ್ತಿರಂಗದಲ್ಲಿ ತಾಳ್ಮೆ, ಸಮಾಧಾನದಿಂದ ಮುಂದುವರಿದಲ್ಲಿ ಉತ್ತಮ ಅವಕಾಶಗಳು ನಿಮ್ಮದಾಗಲಿವೆ. ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಜನಮನ್ನಣೆ ಸಿಗುವುದು. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ.

ಕುಂಭ: ಕಾರ್ಯಸಾಧನೆಗಾಗಿ ಮುಂದುವರಿಯುವಾಗ ಅಡೆತಡೆಗಳು ಸಾಮಾನ್ಯ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡಬೇಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.

ಮೀನ: ವೃತ್ತಿರಂಗದಲ್ಲಿ ಬರುವ ಸಮಸ್ಯೆಗಳು ಸಹೋದ್ಯೋಗಿಗಳ ಸಹಾಯದಿಂದ ನಿವಾರಿಸಲಿದ್ದೀರಿ. ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ