Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 1 ಏಪ್ರಿಲ್ 2021 (08:58 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ದೇಹಾರೋಗ್ಯದ ಬಗ್ಗೆ ನೀವೇ ಕಾಳಜಿವಹಿಸಬೇಕು. ರಾಜೀಮನೋಭಾವವಿದ್ದಲ್ಲಿ ಸಂಸಾರದಲ್ಲಿ ಸಾಮರಸ್ಯವರಿಲಿದೆ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ದರಾಗಬೇಕಾಗುತ್ತದೆ. ದೇವರ ಪ್ರಾರ್ಥನೆ ಮಾಡಿ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯನಿಮಿತ್ತ ಸಹೋದ್ಯೋಗಿಗಳ ನೆರವು ಪಡೆಯಬೇಕಾಗುತ್ತದೆ. ನಯವಂಚಕರಿಂದ ದೂರವಿದ್ದರೆ ಉತ್ತಮ. ವಿದ್ಯಾರ್ಥಿಗಳಿಗೆ ಹಿಂದೆ ಕಲಿತ ವಿದ್ಯೆ ಫಲಕೊಡಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ಕೌಟುಂಬಿಕವಾಗಿ ಆಸ್ತಿ ವಿಚಾರವಾಗಿ ಪೋಷಕರೊಂದಿಗೆ ಭಿನ್ನಾಭಿಪ್ರಾಯಗಳು ಮೂಡಿಬಂದೀತು. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಉತ್ತಮ. ರಾಜಕೀಯ ರಂಗದಲ್ಲಿರುವವರಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಕರ್ಕಟಕ: ಸಂಗಾತಿಯ ಕೆಲಸಗಳಿಗೆ ಕೈಲಾದ ಸಹಾಯ ಮಾಡಲಿದ್ದೀರಿ. ವೃತ್ತಿರಂಗದಲ್ಲಿ ಎಷ್ಟೇ ಕೆಲಸ ಮಾಡಿದರೂ ತೃಪ್ತಿ ಭಾವವಿರದು. ನಿರುದ್ಯೋಗಿಗಳಿಗೆ ಕ್ರಿಯಾತ್ಮಕವಾಗಿ ಯೋಚಿಸಿದರೆ ದಾರಿ ಸಿಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಸಿಂಹ: ನಿಮ್ಮ ಮಾನಸಿಕ ಸಮಸ್ಯೆಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧಕ್ಕಾಗಿ ಹುಡುಕಾಟ ಮುಂದುವರಿಯಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆಯ ಯೋಗವಿದೆ.

ಕನ್ಯಾ: ಯಾವುದೇ ವಿಚಾರವಾದರೂ ಕುಟುಂಬ ಸದಸ್ಯರ ಅಭಿಪ್ರಾಯ ಪಡೆದು ಮುನ್ನಡೆಯುವುದು ಅಗತ್ಯ. ಪ್ರೀತಿ ವಿಚಾರವನ್ನು ಮನೆಯವರೆದುರು ಹೇಳಿಕೊಳ್ಳಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಸಿದ್ಧರಾಗಬೇಕಾಗುತ್ತದೆ.

ತುಲಾ: ಹೊಸ ಯೋಜನೆಗಳಿಗೆ ಚಾಲನೆ ನೀಡಲು ಇದು ಸಕಾಲ. ಆರ್ಥಿಕವಾಗಿ ಹಣಕಾಸಿನ ಅಡಚಣೆಗಳು ನಿವಾರಣೆಯಾಗಲಿವೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ತೋರಿಬರಲಿವೆ.

ವೃಶ್ಚಿಕ: ನಿಮ್ಮನ್ನು ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಹಿಳೆಯರಿಗೆ ತಾಳ್ಮೆ, ಸಮಾಧಾನವೇ ಅಸ್ತ್ರವಾಗಲಿದೆ. ಕೌಟುಂಬಿಕವಾಗಿ ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸುವಿರಿ.

ಧನು: ತಂದೆ-ಮಕ್ಕಳೊಡನೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆಯಿದೆ. ನಿಮ್ಮ ಎಲ್ಲಾ ವ್ಯವಹಾರಗಳೂ ಮುಚ್ಚುಮರೆಯಿಲ್ಲದೇ ಸಾಗಲಿ. ಚಿಂತಿತ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಅಡಚಣೆಗಳು ಬಂದರೂ ಧೈರ್ಯಗೆಡಬೇಡಿ.

ಮಕರ: ಹಿರಿಯರಿಗೆ ತೀರ್ಥಯಾತ್ರೆ ಕೈಗೊಳ್ಳುವ ಕನಸು ನನಸಾಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಡಿಮೆಯಾಗಲಿದೆ. ಚಿಂತೆ ಬೇಡ.

ಕುಂಭ: ಸಾಂಸಾರಿಕವಾಗಿ ವಿಶೇಷ ಗಮನವಿರುವುದು ಮುಖ್ಯ. ಶುಭ ಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರುವುದು. ವಿದೇಶ ಯಾನ ಕೈಗೊಳ್ಳುವವರ ಕನಸು ಶೀಘ್ರದಲ್ಲೇ ನನಸಾಗಲಿದೆ.

ಮೀನ: ಸರಕಾರಿ ಉದ್ಯೋಗಿಗಳಿಗೆ ಶತ್ರುಬಾಧೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಕಂಡುಬರುವುದು. ಕುಲದೇವರ ಪ್ರಾರ್ಥನೆ ನಡೆಸಿದರೆ ಸ್ವಲ್ಪ ಮಟ್ಟಿಗೆ ವಿಘ್ನ ನಿವಾರಣೆಯಾದೀತು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣದ ಕೊರತೆ ನಿವಾರಿಸಲು ಈ ಪರಿಹಾರ ಮಾಡಿ