Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 9 ಮಾರ್ಚ್ 2021 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಇಷ್ಟ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯೂ ಚಿಂತೆಗೆ ಕಾರಣವಾದೀತು. ಆಪ್ತರ ಸಹಾಯ ಪಡೆಯಲಿದ್ದೀರಿ.

ವೃಷಭ: ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ಮಹಿಳೆಯರಿಗೆ ಇಷ್ಟವಸ್ತುಗಳ ಖರೀದಿ ಯೋಗ ಕೂಡಿಬರಲಿದೆ.

ಮಿಥುನ: ವೃತ್ತಿರಂಗದಲ್ಲಿ ನಿಮಗೆ ತೊಡಕು ಉಂಟುಮಾಡುವವರಿಂದ ಮುಕ್ತಿ ಪಡೆಯಲಿದ್ದೀರಿ. ಹಿತಶತ್ರುಗಳ ಸಂಚು ಬಯಲಿಗೆ ಬರಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಲಾಭ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಸಾಧ್ಯತೆಯಿದೆ. ಸರಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ಇಂದು ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಎಚ್ಚರಿಕೆಯಿಂದ ಸಂವಹನ ನಡೆಸುವುದು ಮುಖ್ಯ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕನ್ಯಾ: ಕಾರ್ಯರಂಗದಲ್ಲಿ ನಿಮ್ಮ ಇಚ್ಛೆಯಂತೆ ಮೇಲ್ವರ್ಗಕ್ಕೇರಲು ಸಾಧ್ಯವಾಗದು. ಆದರೆ ನಿರಾಸೆ ಬೇಡ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಸಿಗಲಿದೆ. ಆರ್ಥಿಕವಾಗಿ ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ.

ತುಲಾ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರಲಿದೆ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ವೃಶ್ಚಿಕ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದ್ದು, ಆರ್ಥಿಕವಾಗಿ ಅಭಿವೃದ್ಧಿ ಹೊಂದುವರಿ. ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ.

ಧನು: ಹಿರಿಯರಿಗೆ ದೇಹಾರೋಗ್ಯದಲ್ಲಿ ಏರುಪೇರಾದೀತು. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಕೆಳ ಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾದೀತು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಮಕರ: ನಿಮ್ಮ ಮಾತಿನ ಮೇಲೆ ನಿಗಾ ಇಲ್ಲದೇ ಹೋದರೆ ಸಂಬಂಧಗಳು ಹಾಳಾದೀತು. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಸಹೋದರರ ಜೊತೆಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ.

ಕುಂಭ: ಮನಸ್ಸಿನ ಮಾತುಗಳಿಗೆ ಬೆಲೆಕೊಟ್ಟು ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಮಕ್ಕಳ ಸಂತೋಷಕ್ಕೆ ಬೆಲೆ ಕೊಡಲಿದ್ದೀರಿ. ಆರ್ಥಿಕವಾಗಿ ಖರ್ಚು ವೆಚ್ಚಗಳಾದೀತು. ಉಪಯುಕ್ತ ಕೆಲಸ ಮಾಡಿದ ನೆಮ್ಮದಿ ಸಿಗಲಿದೆ. ಚಿಂತೆ ಬೇಡ.

ಮೀನ: ಮಹಿಳೆಯರಿಗೆ ವೃತ್ತಿರಂಗದಲ್ಲಿ ಮುನ್ನಡೆಗೆ ಅವಕಾಶಗಳು ಸಿಗಲಿವೆ. ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಂಡುಬರಲಿದೆ. ಕುಟುಂಬಸ್ಥರೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯೊಳಗೆ ಒಣಗಿದ ತುಳಸಿ ಎಲೆಗಳಿದ್ದರೆ ಏನಾಗುತ್ತದೆ ಗೊತ್ತಾ?