Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 2 ಫೆಬ್ರವರಿ 2021 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೌಟುಂಬಿಕವಾಗಿ ಹಲವು ವಿಚಾರಗಳು ನಿಮ್ಮನ್ನು ಚಿಂತೆಗೀಡುಮಾಡಲಿದೆ. ನಿಮಗಿಷ್ಟವಿಲ್ಲದೇ ಇದ್ದರೂ ಕೆಲವು ವಿಚಾರಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆರ್ಥಿಕವಾಗಿ ಭವಿಷ್ಯದ ದೃಷ್ಟಿಯಿಂದ ಯೋಜನೆ ರೂಪಿಸಬೇಕಾಗುತ್ತದೆ.

ವೃಷಭ: ವೃತ್ತಿರಂಗದಲ್ಲಿ ಏರುಪೇರುಗಳಿಗೆ ಸಿದ್ಧರಾಗಬೇಕಾಗುತ್ತದೆ. ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಭಿನ್ನಾಭಿಪ್ರಾಯವಾದೀತು. ಹಿರಿಯರ ಮಧ‍್ಯಸ್ಥಿಕೆಯಿಂದ ಪರಿಹರಿಸಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ನಿಮ್ಮ ವೃತ್ತಿ ಜೀವನದ ತೊಡಕುಗಳು ನಿವಾರಣೆಯಾಗಲಿದೆ. ಸರಕಾರಿ ಉದ್ಯೋಗಿಗಳಿಗೆ ಸ್ಥಾನ ಪಲ್ಲಟವಾಗುವ ಸಾ‍ಧ್ಯತೆಯಿದೆ. ನಿರುದ್ಯೋಗಿಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಕರ್ಕಟಕ: ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಿದ್ದಾರೆ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಅನಿರೀಕ್ಷಿತವಾಗಿ ಕೆಲವೊಂದು ಘಟನೆಗಳು ನಡೆದು ನಿಮ್ಮ ವೃತ್ತಿ ಜೀವನಕ್ಕೆ ತಿರುವು ನೀಡಬಹುದು. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ತೋರಿಬಂದೀತು. ಸಂಗಾತಿಯ ಸಹಕಾರ ಸಿಗಲಿದೆ. ಕೃಷಿಕರಿಗೆ ಮುನ್ನಡೆಯ ಯೋಗ.

ಕನ್ಯಾ: ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳ ಪ್ರಸ್ತಾಪಗಳು ಬರಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಸರಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಯೋಗ. ಶೈಕ್ಷಣಿಕರ ರಂಗದಲ್ಲಿರುವವರಿಗೆ ಮುನ್ನಡೆ.

ತುಲಾ: ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದರಿಂದ ನಿಮ್ಮ ವೃತ್ತಿ ಜೀವನಕ್ಕೆ ತಿರುಗು ಸಿಗಲಿದೆ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು, ಎಚ್ಚರಿಕೆಯಿರಲಿ. ಮಿತ್ರರೊಂದಿಗೆ ಇಷ್ಟ ಸ್ಥಳಕ್ಕೆ ಪ್ರಯಾಣ ಮಾಡುವ ಯೋಗ.

ವೃಶ್ಚಿಕ: ಕೃಷಿಕರಿಗೆ ನಿರೀಕ್ಷಿಸಿದ ಬೆಳೆ ಕೈಗೆ ಬಂದು ಕಷ್ಟ ನಿವಾರಣೆಯಾಗಲಿದೆ. ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ಅವಕಾಶಗಳು ತೋರಿಬರಲಿವೆ. ಹಿಂದೆ ಆದ ಘಟನೆಗಳ ಬಗ್ಗೆ ಯೋಚನೆ ಮಾಡುತ್ತಾ ಪಶ್ಚಾತ್ತಾಪ ಪಡುವುದರಲ್ಲಿ ಅರ್ಥವಿಲ್ಲ.

ಧನು: ಅರ್ಧಕ್ಕೇ ನಿಂತ ಕೆಲಸಗಳಿಗೆ ಮರು ಚಾಲನೆ ಸಿಗಲಿದೆ. ಸಾಂಸಾರಿಕವಾಗಿ ಬಂಧುಮಿತ್ರರ ಸಮಾಗಮವಾಗಲಿದ್ದು, ಸಂಭ್ರಮ ಮನೆ ಮಾಡಲಿದೆ. ಹಣಕಾಸಿನ ವಿಚಾರವಾಗಿ ಚಿಂತೆಯಾದೀತು. ಆದರೆ ಸಂಗಾತಿಯ ಸಹಕಾರ ಸಿಗಲಿದೆ.

ಮಕರ: ನಿಮ್ಮ ಮನದಿಚ್ಛೆ ಪೂರ್ತಿಯಾಗದೇ ನಿರಾಸೆಯಾದೀತು. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ.

ಕುಂಭ: ಮಾನಸಿಕವಾಗಿ ನಿಮ್ಮನ್ನು ಕಾಡುತ್ತಿದ್ದ ವಿಚಾರಗಳನ್ನು ಸಂಗಾತಿಯೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀ‍ಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಮೀನ: ಗೃಹಿಣಿಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಹಿರಿಯರಿಗೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಿಬರಬಹುದು. ವ್ಯಾಪಾರಿಗಳಿಗೆ ಹಿಂದೆ ಹೂಡಿಕೆ ಮಾಡಿದ ಹಣ ಮರಳಿ ಬರಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಸ್ತು ಪ್ರಕಾರ ಪ್ಲಾಟ್ ನ ಕಿಟಕಿ, ಬಾಗಿಲು, ಬಾಲ್ಕನಿ ಯಾವ ದಿಕ್ಕಿಗಿದ್ದರೆ ಶುಭ ಗೊತ್ತಾ?