Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 22 ಜನವರಿ 2021 (07:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಪ್ರವಾಸಾದಿ ಓಡಾಟದಿಂದ ದೇಹಾಯಾಸವಾದೀತು. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಶತ್ರು ಬಾಧೆ ಅಧಿಕವಾಗಲಿದೆ. ಮಾನಸಿಕವಾಗಿ ಗಟ್ಟಿಯಾಗಬೇಕಾದ ಸಮಯವಿದು. ವಿದ್ಯಾರ್ಥಿಗಳ ಮೇಲೆ ನಿರೀಕ್ಷೆ ಹೆಚ್ಚಾಗಲಿದೆ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆ ನೋಡಿ ಇತರರು ಅಸೂಯೆಪಡಲಿದ್ದಾರೆ. ಕಾರ್ಯವೈಫಲ್ಯದಿಂದ ಹಿಂಜರಿಯುವುದು ಬೇಡ. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ಸಹೋದರ ವರ್ಗದವರೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಹಣಕಾಸಿನ ಗಳಿಕೆಗೆ ನಾನಾ ಮಾರ್ಗ ಕಂಡುಕೊಳ್ಳಲಿದ್ದೀರಿ. ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು. ಮಡದಿಯ ಮನದಿಚ್ಛೆ ಪೂರೈಸಲಿದ್ದೀರಿ.

ಕರ್ಕಟಕ: ವ್ಯಾಪಾರ, ವ್ಯವಹಾರದಲ್ಲಿ ಲಾಭ ಕಂಡುಬಂದೀತು. ಆದರೆ ಆರ್ಥಿಕವಾಗಿ ಸರಿಯಾದ ಯೋಜನೆ ಹಾಕಿಕೊಳ್ಳುವುದು ಉತ್ತಮ. ವೈಯಕ್ತಿಕ ಸಂಬಂಧಗಳನ್ನು ಕಾಪಾಡಲು ಕಾಳಜಿವಹಿಸಬೇಕಾಗುತ್ತದೆ. ಕಿರು ಓಡಾಟ ನಡೆಸಲಿದ್ದೀರಿ.

ಸಿಂಹ: ದೈವಾನುಕೂಲದಿಂದ ನೀವು ಕೈ ಹಿಡಿದ ಕೆಲಸಗಳು ಯಶಸ್ವಿಯಾಗಲಿವೆ. ಗೃಹೋಪಕರಣಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ವಾಹನ ಸಂಚಾರದಲ್ಲಿ ಅಪಘಾತದ ಭಯವಿದೆ. ಬಂಧು ಮಿತ್ರರ ಆಗಮನದಿಂದ ಸಂತಸವಾಗಲಿದೆ.

ಕನ್ಯಾ: ನಿರೀಕ್ಷೆಗೂ ಮೀರಿ ಆದಾಯ ಕೈ ಸೇರಲಿದೆ. ಹೊಸ ಕೆಲಸಗಳಿಗೆ ಕೈ ಹಾಕಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಹೆಮ್ಮೆಯಾಗಲಿದೆ. ಚಿನ್ನಾಭರಣ ಖರೀದಿ ಯೋಗವಿದೆ. ಸರಕಾರಿ ನೌಕರರಿಗೆ ಆದಾಯ ಹೆಚ್ಚಳವಾಗಲಿದೆ.

ತುಲಾ: ವೃತ್ತಿರಂಗದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಮನ್ನಣೆ ಸಿಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ನಿಮ್ಮ ಸಿಟ್ಟು, ಮುಂಗೋಪದಿಂದ ಕಾರ್ಯಹಾನಿಯಾದೀತು. ಕೌಟುಂಬಿಕ ಸಂಬಂಧಗಳನ್ನು ಸೂಕ್ಷ್ಮವಾಗಿ ನಿಭಾಯಿಸಿ. ದಾಯಾದಿ ಕಲಹಗಳಿಗೆ ಹಿರಿಯರ ಸಲಹೆ ಪಡೆಯಲಿದ್ದೀರಿ. ವಾಹನ ಖರೀದಿಗೆ ಖರ್ಚು ವೆಚ್ಚವಾಗಲಿದೆ. ವ್ಯವಹಾರದಲ್ಲಿ ಏಳಿಗೆ ಕಂಡುಬರಲಿದೆ.

ಧನು: ಅವಿವಾಹಿತ ಕನ್ಯೆಯರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ. ಕಾರ್ಯಸಿದ್ಧಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ ಮುನ್ನಡೆಯಿರಿ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು.

ಮಕರ: ಬಂಧು ಮಿತ್ರರ ಸಹಾಯದಿಂದ ಸಂಭಾವ್ಯ ಕಷ್ಟದಿಂದ ಪಾರಾಗಲಿದ್ದೀರಿ. ಮಹಿಳೆಯರಿಗೆ ತವರಿನ ಕಡೆಯವರಿಂದ ಉಡುಗೊರೆ ಸಿಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭ್ಯವಾಗಲಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ.

ಕುಂಭ: ಮಾನಸಿಕವಾಗಿ ಒಂದು ರೀತಿಯ ನಿರುತ್ಸಾಹ ಕಂಡುಬರಲಿದೆ. ರಾಜೀ ಸಂಧಾನಕ್ಕೆ ಮಧ‍್ಯಸ್ಥಿಕೆ ವಹಿಸಲಿದ್ದೀರಿ. ಕೂಡಿಟ್ಟ ಹಣ ಸದ್ಭಳಕೆ ಮಾಡಲಿದ್ದೀರಿ. ವೈದ್ಯಕೀಯ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಮೀನ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಗೆ ಸಹಕಾರಿಯಾಗುವ ಅವಕಾಶಗಳು ಒದಗಿಬರಲಿವೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಋಣ ಮುಕ್ತರಾಗಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ