Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2020 (09:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದೂರ ಸಂಚಾರದ ಯೋಜನೆಯನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಿದ್ದೀರಿ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ಮಕ್ಕಳ ಸಂತೋಷಕ್ಕಾಗಿ ಕೆಲವೊಂದು ಕೆಲಸ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ವೃತ್ತಿರಂಗದಲ್ಲಿ ನಿಮ್ಮ ತಟಸ್ಥ ಧೋರಣೆ ಉಪಯೋಗಕ್ಕೆ ಬರಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಮಿಥುನ: ಜೀವನದಲ್ಲಿ ಬರುವ ಅವಕಾಶಗಳನ್ನು ವ್ಯರ್ಥ ಮಾಡದೇ ಬಳಸಿಕೊಳ್ಳಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಮಹಿಳೆಯರಿಗೆ ಸದ್ಯದಲ್ಲೇ ಚಿನ್ನಾಭರಣ ಖರೀದಿ ಯೋಗ ಕೂಡಿಬರಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಕರ್ಕಟಕ: ವೃತ್ತಿರಂಗದಲ್ಲಿ ಅಭಿವೃದ್ಧಿಗೆ ಪೂರಕವಾದ ವಾತಾವರಣವಿರಲಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಮನಸ್ಸು ಹಾತೊರೆಯುವುದು. ವೈವಾಹಿಕ ಸಂಬಂಧದಲ್ಲಿ ಬಿರುಕುಗಳಾಗದಂತೆ ಎಚ್ಚರಿಕೆ ವಹಿಸಿ. ತಾಳ್ಮೆ ಅಗತ್ಯ.

ಸಿಂಹ: ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರಾಗಲಿದ್ದೀರಿ. ಸಾಂಸಾರಿಕವಾಗಿ ಕೆಲವೊಂದು ಹೊಂದಾಣಿಕೆಗೆ ಸಿದ್ಧರಾಗಬೇಕಾಗುತ್ತದೆ. ಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗವಿದೆ. ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ.

ಕನ್ಯಾ: ಹೊಸ ಕೆಲಸಗಳಿಗಾಗಿ ಹುಡುಕಾಟ ನಡೆಸಲಿದ್ದೀರಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮೇಲುಗೈ ಸಾಧಿಸಲಿದ್ದೀರಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ಇತರರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಲುಕಿಕೊಳ್ಳದಿರಿ.

ತುಲಾ: ಆರ್ಥಿಕವಾಗಿ ಸಾಲ ಬಾಧೆ ಮನಸ್ಸಿಗೆ ಕಿರಿ ಕಿರಿ ಉಂಟು ಮಾಡೀತು. ಹಣ ಗಳಿಕೆಗೆ ನಾನಾ ಮಾರ್ಗಗಳನ್ನು ಹುಡುಕಾಡಲಿದ್ದೀರಿ. ವಿದ್ಯಾರ್ಥಿಗಳು ಉದಾಸೀನ ಪ್ರವೃತ್ತಿಯನ್ನು ಬಿಟ್ಟು ಅಭ್ಯಾಸದಲ್ಲಿ ತೊಡಗಿಕೊಂಡರೆ ಯಶಸ್ಸು ಶತಸಿದ್ಧ.

ವೃಶ್ಚಿಕ: ಅವಿವಾಹಿತರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಆರ್ಥಿಕವಾಗಿ ಚೇತರಿಕೆಯ ವಾತಾವರಣವಿರಲಿದ್ದು, ಹಳೆಯ ಬಾಕಿಗಳನ್ನು ತೀರಿಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ.

ಧನು: ವೃತ್ತಿರಂಗದಲ್ಲಿ ಹಿತಶತ್ರುಗಳ ಉಪಟಳ ಹೆಚ್ಚಾದೀತು. ಅನಗತ್ಯ ವಿಚಾರಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ.

ಮಕರ: ಚಿಂತಿತ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಉದ್ವೇಗದಿಂದ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾದೀತು, ಕಾಳಜಿ ಅಗತ್ಯ. ಕುಲದೇವರ ಪ್ರಾರ್ಥನೆ ಮಾಡಿ.

ಕುಂಭ: ನಿಮ್ಮ ಮನದ ಬಯಕೆಗಳನ್ನು ಪೂರೈಸಲು ಮುಂದಾಗಲಿದ್ದೀರಿ. ಸದ್ಯದಲ್ಲೇ ವಾಹನ ಖರೀದಿ ಮಾಡುವ ನಿಮ್ಮ ಕನಸು ನನಸಾಗಲಿದೆ. ಬಂಡವಾಳ ಹೂಡಿಕೆಗೆ ಇದು ಸಕಾಲ. ಸ್ವಯಂ ವೃತ್ತಿಯವರಿಗೆ ಅಭಿವೃದ್ಧಿದಾಯಕ ದಿನವಿದು.

ಮೀನ: ನಿಮ್ಮ ಕೆಲವೊಂದು ಸಲಹೆಗಳು ಕುಟುಂಬ ಸದಸ್ಯರಿಗೆ ಹಿಡಿಸದೇ ಹೋಗಬಹುದು. ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕಾಗಿ ದೂರ ಸಂಚಾರ ಮಾಡಬೇಕಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?