Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 26 ಡಿಸೆಂಬರ್ 2020 (08:49 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನಸ್ಸಿನಲ್ಲೇ ಕೆಲವೊಂದು ವಿಚಾರಗಳನ್ನಿಟ್ಟುಕೊಂಡು ಕೊರಗುವ ಬದಲು ಹೇಳಿಕೊಂಡು ಹಗುರವಾಗುವುದು ಉತ್ತಮ. ಹಿರಿಯರ ಉಪದೇಶಗಳು ಹಿಡಿಸದೇ ಹೋಗಬಹುದು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರಲಿದೆ.

ವೃಷಭ: ನಿಮ್ಮ ಕ್ರಿಯಾಶೀಲತೆಗೆ ತಕ್ಕ ಮನ್ನಣೆ ಸಿಗಲಿದೆ. ಭವಿಷ್ಯದ ಯೋಜನೆಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತಲೆದೋರಿತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಅನಿರೀಕ್ಷಿತವಾಗಿ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಹಿನ್ನಡೆಯ ಭೀತಿ ಉಂಟಾಗಬಹುದು. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳನ್ನು ಬಿಡುವುದು ಉತ್ತಮ. ವೃತ್ತಿರಂಗದಲ್ಲಿ ತೊಡಕುಗಳಿದ್ದರೂ ಮುನ್ನಡೆಯಿರಲಿದೆ.

ಕರ್ಕಟಕ: ಕಾರ್ಯನಿಮಿತ್ತ ವಾಹನದಲ್ಲಿ ಓಡಾಟ ನಡೆಸುವಾಗ ಎಚ್ಚರಿಕೆ ಅಗತ್ಯ. ನೆರೆಹೊರೆಯವರೊಂದಿಗೆ ನೀರಿನ ವಿಚಾರಕ್ಕೆ ಭಿನ್ನಾಭಿಪ್ರಾಯಗಳುಂಟಾದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಸಿಂಹ: ಕಾರ್ಯರಂಗದಲ್ಲಿ ಶತ್ರು ಬಾಧೆ ಇರಲಿದೆ. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ನಿಮ್ಮದಲ್ಲದ ವಸ್ತುಗಳ ಬಗ್ಗೆ ಅತಿಯಾದ ಮೋಹ ಒಳ್ಳೆಯದಲ್ಲ. ಮಿತ್ರರ ಭೇಟಿಯಾಗುವ ಯೋಗವಿದೆ. ಇಷ್ಟ ಭೋಜನ ಸವಿಯಲಿದ್ದೀರಿ.

ಕನ್ಯಾ: ನಿಮ್ಮ ಆಯ್ಕೆಯ ಕ್ಷೇತ್ರದ ಬಗ್ಗೆ ನಿಮಗೇ ಅನುಮಾನಗಳಾದೀತು. ಸಂಗಾತಿಯ ಸೂಕ್ತ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ. ಅನಿರೀಕ್ಷಿತವಾಗಿ ದೂರ ಸಂಚಾರ ಮಾಡಬೇಕಾಗಿ ಬರಲಿದೆ. ಸ್ವಯಂ ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ.

ತುಲಾ: ನಿಮ್ಮ ಜೀವನದ ನಿರ್ಧಾರಗಳನ್ನು ಇತರರು ಮಾಡುವಂತಹ ಪರಿಸ್ಥಿತಿ ತಂದುಕೊಳ್ಳಬೇಡಿ. ಆತ್ಮವಿಶ್ವಾಸದಿಂದ ಮುನ್ನುಗ್ಗಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಐಡಿಯಾಗಳು ಹೊಳೆಯಲಿವೆ. ಹಿರಿಯರಿಗೆ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ. ಬಂಧು ಮಿತ್ರರ ಭೇಟಿಯಾಗಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಧನು: ಬಹಳ ದಿನಗಳ ನಂತರ ಇಷ್ಟಮಿತ್ರರ ಭೇಟಿಯಾಗುವ ಖುಷಿ ನಿಮ್ಮದಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಗೆ ಸಹಕಾರಿಯಾಗುವ ವಾತಾವರಣವಿರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳದ್ದೀತು. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಿದ್ದೀರಿ.

ಮಕರ: ಮನದೆನ್ನೆಯ ಮಾತುಗಳಿಗೆ ಕಿವಿಗೊಡದೇ ಇದ್ದರೆ ಸಾಂಸಾರಿಕವಾಗಿ ಕಲಹಗಳು ಗ್ಯಾರಂಟಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗಲಿದ್ದೀರಿ. ಮೆಚ್ಚಿನ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಕುಂಭ: ಅಧಿಕ ಧನಲಾಭ ತರುವ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗುವ ಯೋಗ ಸದ್ಯದಲ್ಲೇ ಕೂಡಿಬರುವುದು. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕುವುದು ಉತ್ತಮ.

ಮೀನ: ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬ ಸದಸ್ಯರಿಗೆ ಹಿಡಿಸದೇ ಹೋಗಬಹುದು. ನಿರುದ್ಯೋಗಿಗಳು ಇಟ್ಟ ಹೆಜ್ಜೆಯನ್ನು ಹಿಂದಡಿಯಿಡಬೇಡಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ