Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 25 ಡಿಸೆಂಬರ್ 2020 (09:08 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅನವಶ್ಯಕ ಯೋಚನೆಗಳಿಂದ ಮನಸ್ಸು, ಮನೆ ಹಾಳಾಗುವುದು. ನಿಮ್ಮ ಪ್ರೀತಿ ಪಾತ್ರ ಭಾವನೆಗಳಿಗೆ ಬೆಲೆ ಕೊಡಿ. ಆರ್ಥಿಕವಾಗಿ ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚಗಳಾದೀತು. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ವೃಷಭ: ಹಿರಿಯರ ನಿರ್ಧಾರಗಳಿಂದಾಗಿ ಮನೆಯಲ್ಲಿ ಕೆಲವೊಂದು ಬದಲಾವಣೆಗಳಾದೀತು. ವೃತ್ತಿರಂಗದಲ್ಲಿ ನಿಮ್ಮ ಮೇಲಿನ ನಿರೀಕ್ಷೆ ಅಧಿಕವಾಗಲಿದೆ. ಮನೆಗೆ ಹೊಸ ವಸ್ತುಗಳ ಖರೀದಿ ಮಾಡಲಿದ್ದೀರಿ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಬೇಕಾದೀತು.

ಮಿಥುನ: ಮನೆಗೆ ನಿಮ್ಮ ಪ್ರೀತಿ ಪಾತ್ರರ, ಅತಿಥಿಗಳ ಆಗಮನವಾಗಲಿದ್ದು, ಮನಸ್ಸಿಗೆ ಸಂತಸವಾಗಲಿದೆ. ಮಾನಸಿಕ ಒತ್ತಡಗಳಾದಾಗ ಸಂಗಾತಿಯ ಜೊತೆ ದುಃಖ ದುಮ್ಮಾನ ಹಂಚಿಕೊಳ್ಳಲಿದ್ದೀರಿ. ಬಾಕಿ ಹಣ ವಸೂಲಾತಿ ಮಾಡಲಿದ್ದೀರಿ.

ಕರ್ಕಟಕ: ಯೋಗ್ಯ ವಯಸ್ಕರಿಗೆ ಸಂಗಾತಿಯ ಹುಡುಕಾಟದಲ್ಲಿ ಯಶಸ್ಸು ಸಿಗಲಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗುವುದು. ನಿಮ್ಮ ವೃತ್ತಿ ಭವಿಷ್ಯವನ್ನು ನಿರ್ಧರಿಸುವ ಪರಿಸ್ಥಿತಿ ಎದುರಾಗಲಿದೆ. ನಿರ್ಧಾರ ತೆಗೆದುಕೊಳ್ಳುವಾಗ ದೃಢತೆಯಿರಲಿ.

ಸಿಂಹ: ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ನಿಮ್ಮ ಕೆಲಸಗಳಿಗೆ ಜನ ಮನ್ನಣೆ ಸಿಗಲಿದೆ. ಹೊಸ ಮನೆ, ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಭರವಸೆ ಸಿಗಲಿದೆ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಆಯ್ಕೆಯ ಗೊಂದಲ ಕಾಡಿಬರಲಿದೆ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿದೆ. ಹಣಕಾಸಿನ ವ್ಯವಹಾರ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ದೇವತಾ ಪ್ರಾರ್ಥನೆ ಮರೆಯದಿರಿ.

ತುಲಾ: ಕಾರ್ಯರಂಗದಲ್ಲಿ ಹೊಸ ಸವಾಲುಗಳನ್ನು ಎದುರಿಸಲಿದ್ದೀರಿ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ನಿರಾಸೆಗಳನ್ನು ಎದುರಿಸುವ ದೃಢ ಮನಸ್ಸು ಬೆಳೆಸಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಸಂಗಾತಿಯೊಂದಿಗೆ ಹೊಂದಾಣಿಕೆ ಕೊರತೆಯಿಂದ ಮನೆಯಲ್ಲಿ ಅಶಾಂತಿ ಮೂಡೀತು. ಮಕ್ಕಳ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಅನಿರೀಕ್ಷಿತವಾಗಿ ಹಳೆಯ ಮಿತ್ರನನ್ನು ಭೇಟಿಯಾಗುವ ಯೋಗವಿದೆ.

ಧನು: ಕಳೆದು ಹೋದ ವಸ್ತುಗಳು ಅನಿರೀಕ್ಷಿತವಾಗಿ ಮರಳಿ ಸಿಗಲಿದೆ. ಅನಗತ್ಯ ವಿಚಾರಗಳಿಗೆ ಕೋಪ ತಾಪ ಪ್ರದರ್ಶಿಸಿ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ತಪ್ಪಿ ಹೋದ ಅವಕಾಶಗಳು ಮುಂದೊಂದು ದಿನ ನಿಮ್ಮ ಬಳಿಗೆ ಬರಲಿದೆ. ಚಿಂತೆ ಬೇಡ.

ಮಕರ: ನಿವೇಶನ ಖರೀದಿ ಮಾಡುವ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿದೆ. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಸ್ವಯಂ ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ. ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಲಿದ್ದೀರಿ. ಅನಗತ್ಯ ಚಿಂತೆ ಬೇಡ.

ಕುಂಭ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಉನ್ನತ ಸಾಧನೆ ಮಾಡುವ ಅವಕಾಶ ಸಿಗಲಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ. ಯೋಗ್ಯ ವಯಸ್ಕರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಮಕ್ಕಳ ವಿಚಾರದಲ್ಲಿ ನೀವು ಕೈಗೊಂಡ ಕೆಲವು ನಿರ್ಧಾರಗಳು ನಿಷ್ಪ್ರಯೋಜಕ ಎಂದು ನಿಮಗನಿಸಬಹುದು. ಋಣಾತ್ಮಕ ಚಿಂತೆಗಳು ಮನಸ್ಸನ್ನು ಘಾಸಿಗೊಳಿಸೀತು. ಸಂಗಾತಿಯ ಸಹಕಾರ ಸಿಗಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ