ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಏನೋ ಅಂದುಕೊಳ್ಳುತ್ತೀರಿ, ಆದರೆ ಕೊನೆಗಳಿಗೆಯಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆದ ಅನುಭವವಾಗಲಿದೆ. ಬೇರೆಯವರ ಏಳಿಗೆ ಕಂಡು ನೀವೂ ಜೀವನದಲ್ಲಿ ಮುಂದೆ ಬರಬೇಕೆಂಬ ಛಲ ಮೂಡುವುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ವೃಷಭ: ಯೋಗ್ಯ ವಯಸ್ಕರಿಗೆ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗುವುದು. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
ಮಿಥುನ: ಶುಭ ಕೆಲಸಗಳನ್ನು ಮಾಡಲು ಗಳಿಗೆ ನೋಡುತ್ತಾ ಕೂರಬೇಡಿ. ಮನಸ್ಸಿನಲ್ಲಿ ಅಂದುಕೊಂಡಿದ್ದ ಯೋಜನೆಯನ್ನು ಇಂದೇ ಜಾರಿಗೆ ತನ್ನಿ. ಹೊಸ ಕೆಲಸಗಳಿಗೆ ಹೊರಡುವಾಗ ವಿಘ್ನಗಳು ಸಾಮಾನ್ಯ. ಅವುಗಳನ್ನು ಎದುರಿಸಿ ಮುನ್ನಡೆಯಿರಿ.
ಕರ್ಕಟಕ: ಭೂಮಿ ಖರೀದಿಗಾಗಿ ಧನವ್ಯಯ ಮಾಡಲಿದ್ದೀರಿ. ಹೊಸ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲು ಇದು ಸಕಾಲ. ನೂತನ ದಂಪತಿಗಳಿಗೆ ಶೀಘ್ರದಲ್ಲೇ ಸಂತಾನ ಫಲ ಸೂಚನೆ ಸಿಗಲಿದೆ. ಕಾರ್ಯನಿಮಿತ್ತ ಕಿರು ಓಡಾಟ ನಡೆಸುವಿರಿ.
ಸಿಂಹ: ಏನೇ ಮಾಡಲು ಹೋದರೂ ಯಾಕೋ ಅದೃಷ್ಟ ಚೆನ್ನಾಗಿಲ್ಲ ಎನಿಸಬಹುದು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆದುಕೊಳ್ಳಿ. ನೆರೆಹೊರೆಯವರೊಂದಿಗೆ ಅತೀವ ವಿಶ್ವಾಸ ಬೇಡ.
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅನಿವಾರ್ಯತೆ ಇತರರಿಗೆ ಅರಿವಿಗೆ ಬರಲಿದೆ. ಸಾಂಸಾರಿಕವಾಗಿ ವಾಸ್ತವ ಸ್ಥಿತಿ ಅರಿತು ಮುನ್ನಡೆಯುವುದು ಅಗತ್ಯ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಓಡಾಟ ನಡೆಸಬೇಕಾಗುವುದು.
ತುಲಾ: ಪ್ರೀತಿ ಪಾತ್ರರೊಂದಿಗೆ ಸಮಯದ ಅಭಾವದಿಂದ ಸುಂದರ ಕ್ಷಣ ಕಳೆಯುವ ಯೋಗ ತಪ್ಪಿಸಿಕೊಳ್ಳಲಿದ್ದೀರಿ. ಮಡದಿಯ ಮುನಿಸಿಗೆ ಕಾರಣವಾಗಲಿದ್ದೀರಿ. ವೃತ್ತಿರಂಗದಲ್ಲಿ ಕಾರ್ಯದೊತ್ತಡ ಅಧಿಕವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ವೃಶ್ಚಿಕ: ವೃತ್ತಿರಂಗದಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಕ್ರಿಯಾತ್ಮಕ ಯೋಚನೆಗಳಿಂದ ಸಮಸ್ಯೆಗಳು ಪರಿಹಾರವಾಗಲಿದೆ. ಸಾಂಸಾರಿಕವಾಗಿ ಮೂರನೆಯವರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ. ಕೃಷಿಕರಿಗೆ ಮುನ್ನಡೆಯ ದಿನಗಳಿವು.
ಧನು: ನಿರುದ್ಯೋಗಿಗಳು ಅವಕಾಶಗಳು ಬಂದಾಗ ಕಣ್ಮುಚ್ಚಿ ಕೂರದೇ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಸರಕಾರಿ ಕೆಲಸಗಾರರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ.
ಮಕರ: ಮಕ್ಕಳ ವಿದ್ಯಾಭ‍್ಯಾಸದಲ್ಲಿ ಗಮನಾರ್ಹ ಪ್ರಗತಿ ಕಂಡುಬರಲಿದ್ದು, ಪೋಷಕರ ಮನಸ್ಸಿಗೆ ಸಂತಸವಾಗಲಿದೆ. ಬಯಸಿದ್ದು ಪಡೆಯಲು ಖರ್ಚು ವೆಚ್ಚವಾದೀತು. ಮಹಿಳೆಯರಿಗೆ ಸದ್ಯದಲ್ಲೇ ಚಿನ್ನಾಭರಣ ಖರೀದಿ ಯೋಗವಿದೆ.
ಕುಂಭ: ನಿಮ್ಮ ಬಗ್ಗೆ ಟೀಕೆ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಹೊಸ ಜೀವನಕ್ಕೆ ಸಿದ್ಧತೆ ನಡೆಸಲಿದ್ದೀರಿ. ಸಂಗಾತಿಯ ಸಲಹೆಗಳನ್ನು ಪಾಲಿಸದೇ ಹೋದಲ್ಲಿ ಮನೆಯಲ್ಲಿ ಕೋಪತಾಪಗಳನ್ನು ಎದುರಿಸಬೇಕಾದೀತು. ಎಚ್ಚರಿಕೆಯಿರಲಿ.
ಮೀನ: ನಿಮ್ಮ ಕೆಲವೊಂದು ಮಾತುಗಳು ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟು ಮಾಡೀತು. ದಾಯಾದಿ ಕಲಹಗಳಿಗೆ ಅಂತ್ಯ ಕಂಡುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಕೂಡಿಬರಲಿವೆ. ದೇವತಾ ಪ್ರಾರ್ಥನೆ ಮಾಡಿ.