Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 21 ಡಿಸೆಂಬರ್ 2020 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಬಹುದಿನಗಳ ಬಯಕೆ ಈಡೇರದೇ ಇದ್ದಾಗ ಮನಸ್ಸಿಗೆ ನಿರಾಸೆಯಾಗುವುದು ಸಹಜ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳಾದೀತು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ.

ವೃಷಭ: ಆದಾಯಕ್ಕಿಂತ ವೆಚ್ಚವು ಅಧಿಕವಾಗಿ ಚಿಂತೆಯಾದೀತು. ಧಾರ್ಮಿಕ ಕಾರ್ಯಗಳಿಗೆ ವಿಘ್ನಗಳು ತೋರಿಬಂದೀತು. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಮುನ್ನಡೆ ತೋರಿಬರಲಿದೆ. ಅರ್ಧಕ್ಕೇ ನಿಂತು ಹೋದ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ.

ಮಿಥುನ: ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಲಿದೆ, ಉಪೇಕ್ಷೆ ಬೇಡ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಹೋದ್ಯೋಗಿಗಳ ಸಹಕಾರದಿಂದ ಸಮಸ್ಯೆ ಬಗೆಹರಿಸಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಕರ್ಕಟಕ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ‍್ರ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಮಾನಸಿಕವಾಗಿ ಉತ್ಸಾಹಕ್ಕೆ ಕುಂದಾಗದಂತೆ ನೋಡಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಪದೋನ್ನತಿಯ ಅವಕಾಶಗಳಿವೆ. ದಾಯಾದಿ ಕಲಹಗಳಿಗೆ ಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರ ಕಂಡುಕೊಳ್ಳಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ.

ಕನ್ಯಾ: ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಸು ಡೋಲಾಯಮಾನವಾಗಲಿದೆ. ಹಿರಿಯರ ಸೂಕ್ತ ಸಲಹೆಗಳನ್ನು ಪಾಲಿಸುವುದು ಒಳಿತು. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳಿಂದಾಗಿ ಒಂದು ರೀತಿಯ ಭೀತಿ ಕಾಡಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾದೀತು. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ವೃಶ್ಚಿಕ: ಹಣಕಾಸಿನ ಹರಿವಿಗೆ ಯಾವುದೇ ತೊಂದರೆಯಿರದು. ನಿಮ್ಮ ಮನಸ್ಸಿಗೆ ಹಿಡಿಸಿದ ಕೆಲಸಗಳನ್ನು ಮಾಡಲಿದ್ದೀರಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ. ಸ್ವಯಂ ವ್ಯಾಪಾರಿಗಳಿಗೆ ಮುನ್ನಡೆ ತೋರಿಬರಲಿದೆ.

ಧನು: ಬೇರೆಯವರ ವಿಚಾರಕ್ಕೆ ಅನಗತ್ಯ ತಲೆಕೆಡಿಸಿಕೊಂಡು ನಿಷ್ಠುರರಾಗಬೇಡಿ. ವಿದ್ಯಾರ್ಥಿಗಳಿಗೆ ಕಠಿಣ ಅಭ್ಯಾಸಕ್ಕೆ ತಕ್ಕ ಫಲ ಸಿಗಲಿದೆ. ಕೋರ್ಟು ಕಚೇರಿ ಕಲಾಪಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಸಂಗಾತಿಯ ಮನಸ್ಸಿಗೆ ನೋವುಂಟುಮಾಡಬೇಡಿ.

ಮಕರ: ನಿಮ್ಮ ಕೆಲವೊಂದು ನಿರ್ಧಾರಗಳು ಪ್ರೀತಿ ಪಾತ್ರರ ಮನಸ್ಸಿಗೆ ಬೇಸರ ಉಂಟು ಮಾಡೀತು. ತಾಳ್ಮೆ, ಸಂಯಮವಿರಲಿ. ಹಿರಿಯರಿಗೆ ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬಂದೀತು. ಎಚ್ಚರಿಕೆ ಅಗತ್ಯ.

ಕುಂಭ: ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ಒಳ್ಳೆಯತನದ ದುರುಪಯೋಗ ಪಡಿಸಿಕೊಳ್ಳುವವರು ಇರುತ್ತಾರೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರಲಿದೆ. ಸರಕಾರಿ ಕೆಲಸದಲ್ಲಿರುವವರಿಗೆ ಕಾರ್ಯದೊತ್ತಡ ಕೊಂಚ ಕಡಿಮೆಯಾಗಬಹುದು.

ಮೀನ: ಮಾನಸಿಕವಾಗಿ ದೃಢ ನಿರ್ಧಾರ ಕೈಗೊಳ್ಳಬೇಕಾದ ಸಂದರ್ಭಗಳು ಬರಲಿವೆ. ವೃತ್ತಿರಂಗದಲ್ಲಿ ನಿಮ್ಮ ಸಹೋದ್ಯೋಗಿಗಳ ಅಸಹಕಾರ ಬೇಸರ ತಂದೀತು. ಆದರೆ ತಾಳ್ಮೆಯಿರಲಿ. ಕುಲದೇವರ ಪ್ರಾರ್ಥನೆಯಿಂದ ಶುಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿ ಖರೀದಿಸುವಾಗ ಈ ವಾಸ್ತು ನಿಯಮ ಪಾಲಿಸಿ