ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 3 ಡಿಸೆಂಬರ್ 2020 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ‍್ಯವಾಗದು. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಲಾಭ ಕಂಡುಕೊಳ್ಳಲು ಹೊಸ ದಾರಿ ಕಂಡುಕೊಳ್ಳಲಿದ್ದಾರೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ವೃಷಭ: ಇತರರ ಬಗ್ಗೆ ನಿಮ್ಮ ಅತಿಯಾದ ಕಾಳಜಿ ಕೆಲವೊಮ್ಮೆ ನಿಮಗೇ ಮುಳುವಾದೀತು. ಎಚ್ಚರಿಕೆಯಿಂದ ಹೆಜ್ಜೆಯಿಡಿ. ಪ್ರೀತಿ ಪಾತ್ರರೊಂದಿಗೆ ಅಧಿಕ ಸಮಯ ಕಳೆಯಲಿದ್ದೀರಿ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಕೊಂಚ ಕಡಿವಾಣವಿರಲಿ.

ಮಿಥುನ: ಸಾಮಾಜಿಕವಾಗಿ ನಿಮ್ಮ ಕೀರ್ತಿ, ಸ್ಥಾನ ಮಾನ ಹೆಚ್ಚಲಿದೆ. ಒಳಿತು ಕೆಡಕು ಎರಡನ್ನೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಯೋಗ್ಯ ವಯಸ್ಕರಿಗೆ ತಕ್ಕ ಸಂಬಂಧಗಳು ಕೂಡಿಬರಲಿವೆ. ವಿದ್ಯಾರ್ಥಿಗಳಿಗೆ ಮುನ್ನಡೆಗೆ ಅವಕಾಶ ತೋರಿಬರಲಿದೆ.

ಕರ್ಕಟಕ: ವೈಯಕ್ತಿಕವಾಗಿ ನೀವು ಮಾಡುವ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಡುವಿರಿ. ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಉತ್ತಮ. ಉದ್ಯೋಗ, ವ್ಯವಹಾರ ವಿಚಾರದಲ್ಲಿ ಮುನ್ನಡೆಗೆ ಅವಕಾಶ ತೋರಿಬರಲಿದೆ. ಬಳಸಿಕೊಳ್ಳಿ.

ಸಿಂಹ: ಎಂಥಾ ಕಷ್ಟವೇ ಆದರೂ ಎದುರಿಸುವ ತಾಳ್ಮೆ, ಛಲ ಮೈಗೂಡಿಸಿಕೊಳ್ಳಬೇಕಾಗುತ್ತದೆ. ಕೆಳ ಹಂತದ ನೌಕರರಿಗೆ ಉದ್ಯೋಗ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಕನ್ಯಾ: ಹೊಸಬರ ಸಹವಾಸದಿಂದ ನಿಮ್ಮ ವ್ಯವಹಾರದ ಬಗ್ಗೆ ಹೊಸ ಯೋಜನೆಗಳು ಸಿಗಲಿವೆ. ಯಂತ್ರೋಪಕರಣಗಳ ಕೆಲಸ ಮಾಡುವವರಿಗೆ ಮುನ್ನಡೆಯ ಯೋಗವಿದೆ. ಅನಿವಾರ್ಯವಾಗಿ ದೂರ ಸಂಚಾರ ರದ್ದುಗೊಳಿಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ವೈಯಕ್ತಿಕವಾಗಿ ನಿಮ್ಮಿಂದ ಉಪಕಾರ ಪಡೆದವರು ಇಂದು ನಿಮ್ಮ ಕಷ್ಟಕ್ಕೆ ನೆರವಾಗಲಿದ್ದಾರೆ. ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ವಾಹನ ಸವಾರರು ಪ್ರಯಾಣದಲ್ಲಿ ಎಚ್ಚರವಾಗಿರುವುದು ಉತ್ತಮ.

ವೃಶ್ಚಿಕ: ವ್ಯಾಪಾರ, ವ್ಯವಹಾರದಲ್ಲಿ ಹೊಸ ಒಪ್ಪಂದ ಮಾಡಿಕೊಳ್ಳುವ ಮೊದಲು ಸರಿಯಾಗಿ ಯೋಚಿಸಿ ಹೆಜ್ಜೆಯಿಡಿ. ನೆರೆಹೊರೆಯವರು ನಿಮ್ಮ ಕಷ್ಟಕ್ಕೆ ಆಗಿಬರಲಿದ್ದಾರೆ. ನೂತನ ದಂಪತಿಗಳ ನಡುವೆ ಹೊಂದಾಣಿಕೆ ಕೊರತೆ ಉಂಟಾಗಬಹುದು. ತಾಳ್ಮೆಯಿರಲಿ.

ಧನು: ದುಡುಕಿ ಮಾತನಾಡಿ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಆರೋಗ್ಯ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ದೂರದೂರಿಗೆ ಪ್ರಯಾಣ ಮಾಡಬೇಕಾಗಿ ಬರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಮಕರ: ಮನೋಕಾಮನೆಗಳನ್ನು ಪೂರ್ತಿ ಮಾಡಲು ಧನವ್ಯಯ ಮಾಡಲಿದ್ದೀರಿ. ಬಹಳ ದಿನಗಳ ನಂತರ ಪ್ರೀತಿ ಪಾತ್ರರನ್ನು ಭೇಟಿಯಾದ ಸಂತಸ ನಿಮ್ಮದಾಗಲಿದೆ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ದೇವತಾ ಪ್ರಾರ್ಥನೆ ಮರೆಯದಿರಿ.

ಕುಂಭ: ನಿಮ್ಮ ಪ್ರೀತಿ ಪಾತ್ರರಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ಕೌಟುಂಬಿಕ ವ್ಯವಹಾರಗಳ ಬಗ್ಗೆ ಏಕಾಂಗಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಗೃಹಿಣಿಯರಿಗೆ ಗೃಹ ಕೃತ್ಯಗಳಿಂದ ಕೊಂಚ ವಿರಾಮ ಸಿಗುವುದು. ಮಕ್ಕಳಿಂದ ಸಂತಸ ಸಿಗಲಿದೆ.

ಮೀನ: ಮಾನಸಿಕವಾಗಿ ನಿರಾಶಾಮನೋಭಾವ ಕಾಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆಯ ಭೀತಿ ಎದುರಾಗಲಿದೆ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವರ ಕೋಣೆಯಲ್ಲಿ ಒಂದೇ ದೀಪ ಹಚ್ಚಬಾರದೇ, ಏನಿದರ ಅರ್ಥ, ಇಲ್ಲಿದೆ ಮಾಹಿತಿ

ಸುಬ್ರಹ್ಮಣ್ಯನ ಅನುಗ್ರಹಕ್ಕೆ ಈ ಸ್ತೋತ್ರವನ್ನು ಓದಿ

ಅಂಬಾ ಪಂಚರತ್ನ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗುರುವಾರ ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಸ್ತೋತ್ರವನ್ನು ತಪ್ಪದೇ ಓದಿ

ಗಣಪತಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಪಠಿಸಿ

ಮುಂದಿನ ಸುದ್ದಿ
Show comments