Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 1 ಡಿಸೆಂಬರ್ 2020 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಆದಾಯ ಗಳಿಕೆಗೆ ಇಂದು ಹಲವು ಅವಕಾಶಗಳು ಎದುರಾಗಲಿವೆ. ನಿರ್ಧಾರ ತೆಗೆದುಕೊಳ್ಳುವ ಸರಿಯಾಗಿ ಪರಾಮರ್ಸಿಸಿ ಮುನ್ನಡೆಯಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೃಷಭ: ಯಾವುದೂ ಸರಿಯಿಲ್ಲ ಎನ್ನುವ ಮನೋಭಾವ ಕಾಡಲಿದೆ. ಸಂಗಾತಿಯ ಕೆಲವೊಂದು ನಿರ್ಧಾರಗಳು ಮಾನಸಿಕವಾಗಿ ನಿಮ್ಮನ್ನು ಚಿಂತೆಗೀಡುಮಾಡಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಕಿರು ಸಂಚಾರ ಮಾಡುವಿರಿ.

ಮಿಥುನ: ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ದುಡುಕು ನಿರ್ಧಾರಗಳಿಂದ ಕೈಸುಟ್ಟುಕೊಳ್ಳಲಿದ್ದೀರಿ. ಹಾಗಂತ ನಿರಾಶರಾಗದಿರಿ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.

ಕರ್ಕಟಕ: ಬೇರೆಯವರ ಬಗ್ಗೆ ಅನಗತ್ಯವಾಗಿ ಚಿಂತಿಸುವುದನ್ನು ಬಿಡಿ. ಉದ್ಯೋಗ ಕ್ಷೇತ್ರದಲ್ಲಿ ಸ್ವಜನರ ಓಲೈಕೆ ಅಸಮಾಧಾನಕ್ಕೆ ಕಾರಣವಾಗಲಿದೆ. ಸಂಗಾತಿಯ ಸಹಕಾರ ಸಿಗಲಿದೆ. ಕೃಷಿಕರಿಗೆ ಲಾಭ ಮಾಡಿಕೊಳ್ಳಲು ದಾರಿ ಸಿಗಲಿದೆ.

ಸಿಂಹ: ಕೌಟುಂಬಿಕವಾಗಿ ನಿಮ್ಮ ಜವಾಬ್ಧಾರಿಗಳು ಹೆಚ್ಚಾಗಲಿವೆ. ಪ್ರೀತಿ ಪಾತ್ರರೊಂದಿಗೆ ಏಕಾಂತದ ಸಮಯ ಕಳೆಯಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳನ್ನು ಕ್ರಿಯಾತ್ಮಕವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಲಿದ್ದೀರಿ. ಚಿಂತೆ ಬೇಡ.

ಕನ್ಯಾ: ವೃತ್ತಿರಂಗದಲ್ಲಿ ಬರುವ ಸದವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಮಾನಸಿಕವಾಗಿ ಒತ್ತಡಗಳಾದಾಗ ಸಂಗಾತಿಯ ಸಾಂತ್ವನ ಸಿಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ತುಲಾ: ಮನೆಯ ಹಿರಿಯ ಸದಸ್ಯರ ಆರೋಗ್ಯ ಚಿಂತೆಗೀಡುಮಾಡಲಿದೆ. ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅದಕ್ಕೆ ತಕ್ಕ ಪ್ರಶಂಸೆ ಸಿಗದೇ ಬೇಸರವಾದೀತು. ತಾಳ್ಮೆಗೆಡಬೇಡಿ. ಯೋಗ್ಯ ವಯಸ್ಕರಿಗೆ ಸದ್ಯದಲ್ಲೇ ವಿವಾಹ ಪ್ರಸ್ತಾಪಗಳು ಒದಗಿಬರಲಿವೆ.

ವೃಶ್ಚಿಕ: ವಿಶೇಷ ವ್ಯಕ್ತಿಗಳ ಭೇಟಿಯಾಗಲಿದ್ದೀರಿ. ನಿರುದ್ಯೋಗಿಗಳು ಉದ್ಯೋಗ ಸಂದರ್ಶನ ಕರೆಗಾಗಿ ಪರಊರಿಗೆ ಪ್ರಯಾಣಿಸಲಿದ್ದಾರೆ. ಭೂ ಖರೀದಿ ವ್ಯವಹಾರಗಳನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡುವುದು ಒಳ್ಳೆಯದು.

ಧನು: ವೃತ್ತಿರಂಗದಲ್ಲಿ ಹಿನ್ನಡೆ ನಿಮ್ಮನ್ನು ಹತಾಶೆಗೆ ದೂಡಲಿದೆ. ಮಾನಸಿಕವಾಗಿ ಗಟ್ಟಿಯಾಗಬೇಕಾದ ದಿನಗಳಿವು. ಹೆಚ್ಚಿನ ಧನಾದಾಯಕ್ಕಾಗಿ ನಾನಾ ಮಾರ್ಗಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ಇಷ್ಟದೇವತೆಗಳ ಪ್ರಾರ್ಥನೆಯಿಂದ ನೆಮ್ಮದಿ ಕಂಡುಕೊಳ್ಳಿ.

ಮಕರ: ಪ್ರೀತಿ ಪಾತ್ರರೊಂದಿಗೆ ಮನಸ್ಸು ಬಿಚ್ಚಿ ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲಿದ್ದೀರಿ. ನೂತನ ದಂಪತಿಗಳಿಗೆ ಮಧುರ ಕ್ಷಣಗಳನ್ನು ಕಳೆಯುವ ಯೋಗ. ನಿಮ್ಮ ಬಹುದಿನಗಳ ಕನಸು ನನಸು ಮಾಡಿಕೊಳ್ಳಲು ಧನವ್ಯಯ ಮಾಡಲಿದ್ದೀರಿ.

ಕುಂಭ: ಸಂಗಾತಿಯ ಕೆಲವು ಮಾತುಗಳು ಕಿರಿ ಕಿರಿ ಎನಿಸೀತು. ಆದರೆ ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಮಹಿಳೆಯರಿಗೆ ಹೊಸ ವಸ್ತುಗಳ ಖರೀದಿ ಯೋಗ.

ಮೀನ: ಅರ್ಧಕ್ಕೇ ನಿಂತ ಯೋಜನೆಗಳನ್ನು ಪೂರ್ತಿಗೊಳಿಸಲು ಮುಂದಾಗಲಿದ್ದೀರಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಐಡಿಯಾಗಳು ಹೊಳೆಯಲಿವೆ. ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ. ಆದರೆ ಅಪರಿಚಿತರನ್ನು ನಂಬಿ ವ್ಯವಹರಿಸಲು ಹೋಗಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿನ ಪಂಚಾಂಗ ಹೀಗಿದೆ!